ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) 2,000 ರೂ. ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂತೆಗೆದುಕೊಳ್ಳುವುದಾಗಿ ಘೋಷಿಸಿ ಸುಮಾರು ಎರಡು ವರ್ಷಗಳ ನಂತರವೂ 6,181 ಕೋಟಿ ರೂ. ಮೌಲ್ಯದ ಇದೇ ರೀತಿಯ ಮುಖಬೆಲೆಯ ನೋಟುಗಳು ಇನ್ನೂ ಕೇಂದ್ರ ಬ್ಯಾಂಕಿಗೆ ಹಿಂತಿರುಗಿಲ್ಲ ಎಂದು ಮಾಹಿತಿಯನ್ನು ತಿಳಿಸಿದೆ.
ಹೌದು, ಭಾರತೀಯ ರಿಸರ್ವ್ ಬ್ಯಾಂಕ್ (RBI) ಹೇಳಿರುವ ಮಾಹಿತಿಯ ಪ್ರಕಾರ ಜನರ ಬಳಿಯೇ ಇದೆ 6,181 ಕೋಟಿ ಮೌಲ್ಯದ ನೋಟು ಇವೆ. ಇದನ್ನು ಆಯ್ದ ಅಂಚೆ ಕಚೇರಿಗಳಲ್ಲಿ ನೀವು ಎರಡು ಸಾವಿರ ರೂ.ಗಳ ನೋಟುಗಳನ್ನು ವಿನಿಮಯ ಮಾಡಿಕೊಳ್ಳಲು ಆರ್‌ಬಿಐ ಅವಕಾಶವನ್ನು ನೀಡಲಾಗಿದೆ.

ವ್ಯವಹಾರ ಮುಕ್ತಾಯದ ವೇಳೆಗೆ 2023 ರ ಮೇ 19 ರಂದು 3.56 ಲಕ್ಷ ಕೋಟಿ ರೂ.ಗಳಿದ್ದ ಚಲಾವಣೆಯಲ್ಲಿರುವ 2,000 ರೂ.ಗಳ ಒಟ್ಟು ಮೌಲ್ಯ, 2,000 ರೂ.ಗಳ ಹಿಂಪಡೆಯುವಿಕೆಯನ್ನು ಘೋಷಿಸಿದಾಗ, ಮೇ 31, 2025 ರ ವೇಳೆಗೆ 6,181 ಕೋಟಿ ರೂ.ಗಳಿಗೆ ಇಳಿದಿದೆ ಎಂದು ಆರ್‌ಬಿಐ ಪ್ರಕಟಣೆಯಲ್ಲಿ ಮಾಹಿತಿಯನ್ನು ತಿಳಿಸಿದೆ. ಆದರಿಂದ ಮೇ 19, 2023 ರಂದು ಚಲಾವಣೆಯಲ್ಲಿರುವ 2,000 ರೂ.ಗಳ ನೋಟುಗಳಲ್ಲಿ ಶೇ. 98.26 ರಷ್ಟು ಹಿಂತಿರುಗಿಸಲಾಗಿದೆ ಎಂದು ಅವರು ಮಾಹಿತಿಯನ್ನು ತಿಳಿಸಿದೆ.
ನೋಟುಗಳನ್ನು ಈಗಾಗಲೇ ರದ್ದು ಮಾಡಿದ್ದರು ಎರಡು ಸಾವಿರದ ನೋಟುಗಳು ಇನ್ನೂ ಕಾನೂನುಬದ್ಧ ಚಲಾವಣೆಯಲ್ಲಿದೆ.
ಮೇ 19, 2023 ರಿಂದ ರಿಸರ್ವ್ ಬ್ಯಾಂಕಿನ 19 ವಿತರಣಾ ಕಚೇರಿಗಳಲ್ಲಿ 2,000 ರೂ. ನೋಟುಗಳ ವಿನಿಮಯ ಸೌಲಭ್ಯ ಲಭ್ಯವಿದೆ ಎಂದು ಆರ್‌ಬಿಐ ತಿಳಿಸಿದೆ. ಅಕ್ಟೋಬರ್ 9, 2023 ರಿಂದ, ಆರ್‌ಬಿಐ ವಿತರಣಾ ಕಚೇರಿಗಳು ವ್ಯಕ್ತಿಗಳು ಅಥವಾ ಸಂಸ್ಥೆಗಳಿಂದ ಅವರ ಬ್ಯಾಂಕ್ ಖಾತೆಗಳಿಗೆ ಠೇವಣಿ ಇಡಲು 2,000 ರೂ. ನೋಟುಗಳನ್ನು ಸ್ವೀಕರಿಸುತ್ತಿವೆ ಎಂದು ಹೇಳಿದ್ದಾರೆ.
1934 ರ ಆರ್‌ಬಿಐ ಕಾಯ್ದೆಯ ಸೆಕ್ಷನ್ 24(1) ರ ಅಡಿಯಲ್ಲಿ ನವೆಂಬರ್ 2016 ರಲ್ಲಿ 2,000 ರೂ. ಮುಖಬೆಲೆಯ ನೋಟನ್ನು ಪರಿಚಯಿಸಲಾಯಿತು, ಪ್ರಾಥಮಿಕವಾಗಿ ಆ ಸಮಯದಲ್ಲಿ ಚಲಾವಣೆಯಲ್ಲಿದ್ದ ಎಲ್ಲಾ 500 ರೂ ಮತ್ತು 1,000 ರೂ ನೋಟುಗಳ ಕಾನೂನುಬದ್ಧ ಟೆಂಡರ್ ಸ್ಥಿತಿಯನ್ನು ಹಿಂತೆಗೆದುಕೊಂಡ ನಂತರ ಆರ್ಥಿಕತೆಯ ಕರೆನ್ಸಿ ಅಗತ್ಯವನ್ನು ತ್ವರಿತವಾಗಿ ಪೂರೈಸಿದೆ. ಇತರ ಮುಖಬೆಲೆಯ ನೋಟುಗಳು ಸಾಕಷ್ಟು ಪ್ರಮಾಣದಲ್ಲಿ ಲಭ್ಯವಾದ ನಂತರ 2,000 ರೂ.ಗಳ ನೋಟುಗಳನ್ನು ಪರಿಚಯಿಸುವ ಉದ್ದೇಶವನ್ನು ಪೂರೈಸಲಾಯಿತು. ಆದ್ದರಿಂದ, 2018-19 ರಲ್ಲಿ ರೂ. 2,000 ನೋಟುಗಳ ಮುದ್ರಣವನ್ನು ನಿಲ್ಲಿಸಲಾಯಿತು ಎಂದು ಆರ್‌ಬಿಐ ಹೇಳಿದೆ.
2024-25ರ ಹಣಕಾಸು ವರ್ಷದಲ್ಲಿ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಎರಡು ಸಾವಿರ ನೋಟುಗಳ ಮುಖಬೆಲೆಯ ನಕಲಿ ನೋಟುಗಳು ಗಣನೀಯವಾಗಿ ಕಡಿಮೆಯಾಗಿದೆ ಎಂದು ಆರ್‌ಬಿಐ ವಾರ್ಷಿಕ ವರದಿಯಲ್ಲಿ ಮಾಹಿತಿಯನ್ನು ತಿಳಿಸಿದೆ. 2023-24ರಲ್ಲಿ 26,035 ನಕಲಿ ನೋಟುಗಳಿಗೆ ಹೋಲಿಕೆಯನ್ನು ಮಾಡಿದ್ದರೆ 2024-25ರಲ್ಲಿ ವ್ಯವಸ್ಥೆಯಲ್ಲಿ ಪತ್ತೆಯಾದ 2,000 ರೂ. ನಕಲಿ ನೋಟುಗಳ ಸಂಖ್ಯೆ ಶೇ. 86.52 ರಷ್ಟು ಕಡಿಮೆಯಾಗಿ 3,508 ಕ್ಕೆ ತಲುಪಿದೆ ಎಂದು ಮಾಹಿತಿಯನ್ನು ತಿಳಿಸಿದೆ.
ಅಕ್ಟೋಬರ್ 7, 2023ರವರೆಗೆ ಸಾರ್ವಜನಿಕರಿಗೆ ಬ್ಯಾಂಕುಗಳಲ್ಲಿ 2000 ಮುಖಬೆಲೆಯ ನೋಟುಗಳನ್ನು ವಿನಿಮಯ ಮಾಡಿಕೊಳ್ಳಲು ಮತ್ತು ಠೇವಣಿ ಮಾಡಲು ಅವಕಾಶವನ್ನು ಸಹ ನೀಡಲಾಗಿತ್ತು.ಆರ್‌ಬಿಐ ವಿತರಣಾ ಕಚೇರಿಗಳಲ್ಲಿ ಮಾತ್ರ 2000 ನೋಟುಗಳನ್ನು ವಿನಿಮಯ ಮಾಡಿಕೊಳ್ಳಲು ಅಕ್ಟೋಬರ್ 9, 2023 ರಿಂದ ಅವಕಾಶವನ್ನು ಕಲ್ಪಿಸಲಾಗಿದೆ. ಸರ್ಕಾರ ಮತ್ತು ಆರ್‌ಬಿಐ ಈ ನಿರ್ಧಾರವನ್ನು ನೋಟುಗಳ ಮುದ್ರಣ ಮತ್ತು ಬಳಕೆಯ ಆವಶ್ಯಕತೆ ಕಡಿಮೆಯಾಗಿರುವ ಕಾರಣದಿಂದ ಈ ನಿರ್ಧಾರವನ್ನು ಕೈಗೊಂಡಿತ್ತು.
More From GoodReturns

Silver Price Today: ಬೆಳ್ಳಿ ದರದಲ್ಲಿ ಇಂದು 5,000 ಕುಸಿತ; ಭಾರತದಲ್ಲಿ ಇಂದಿನ ಬೆಲೆ ತಿಳಿಯಿರಿ

LPG Crisis Bengaluru: ಕೋಳಿ ವ್ಯಾಪಾರಕ್ಕೂ ತಟ್ಟಿದ LPG ಕೊರತೆ ಬಿಸಿ; ಬೆಂಗಳೂರಲ್ಲಿ ಮಾರಾಟ ಭಾರಿ ಕುಸಿತ

Bengaluru: ಬೀದಿ ಬದಿ ವ್ಯಾಪಾರಕ್ಕೆ ಅವಕಾಶವಿಲ್ಲ; ಈ ರಸ್ತೆಯ ವ್ಯಾಪಾರಿಗಳಿಗೆ ದೊಡ್ಡ ಸಂಕಷ್ಟ

Eid-ul-Fitr 2026: ರಂಜಾನ್ ಹಬ್ಬ ಇಂದೋ, ನಾಳೆಯೋ; ಕೇರಳದಲ್ಲಿ ಮಾತ್ರ ಇಂದು ಆಚರಣೆ ಯಾಕೆ?

Oil Price Tension: ಮದ್ಯಪ್ರಾಚ್ಯ ಉದ್ವಿಗ್ನತೆ ನಡುವೆ ತೈಲ ಮಾರುಕಟ್ಟೆ ತಲ್ಲಣ, ಭಾರತಕ್ಕೆ ಸವಾಲು; ಎಚ್ಚರಿಕೆ ಸೂಚನೆ

Petrol Price Hike: ಪ್ರೀಮಿಯಂ ಪೆಟ್ರೋಲ್ ದರ ಏರಿಕೆ-ಲೀಟರ್ಗೆ 2 ಹೆಚ್ಚಳ, ಸಾಮಾನ್ಯ ಇಂಧನ ದರ ಸ್ಥಿರ

Good Friday 2026: ಈ ವರ್ಷ ಗುಡ್ ಫ್ರೈಡೇ ಯಾವಾಗ? ಈಸ್ಟರ್ ದಿನಾಂಕ ಮತ್ತು ಸಂಪೂರ್ಣ ಮಾಹಿತಿ ತಿಳಿಯಿರಿ

Gold Price Today India: ಯುಗಾದಿ ಬಳಿಕ ಏರಿಕೆ ಹಾದಿ ಹಿಡಿದ ಚಿನ್ನದ ಬೆಲೆ-24K/100gನಲ್ಲಿ 6,500 ರೂ. ಜಿಗಿತ!

8th Pay Commission: 8ನೇ ವೇತನ ಆಯೋಗದಿಂದ ಮಹತ್ವದ ಅಪ್ಡೇಟ್; ಪ್ರಶ್ನಾವಳಿ ಸಲ್ಲಿಸಲು ಮಾ.31ರ ವರೆಗೂ ಅವಕಾಶ

Flipkart CFO: ಐಪಿಒಗೆ ಮುನ್ನ ಫ್ಲಿಪ್ಕಾರ್ಟ್ನಲ್ಲಿ ದೊಡ್ಡ ಬದಲಾವಣೆ: CFO ಸ್ಥಾನ ತ್ಯಜಿಸಿದ ವೆಂಕಟರಾಮನ್



Click it and Unblock the Notifications