For Quick Alerts
ALLOW NOTIFICATIONS  
For Daily Alerts

RBL Bank: ಎಂಡಿ, ಸಿಇಒ ಷೇರು ಮಾರಾಟದ ಬಳಿಕ ಶೇ. 8ರಷ್ಟು ಕುಸಿತ

|

ನವದೆಹಲಿ, ಆಗಸ್ಟ್‌ 31: ಆರ್‌ಬಿಎಲ್‌ ಬ್ಯಾಂಕ್‌ನ ಷೇರುಗಳು ಇಂದು ಶೇಕಡಾ 8ರಷ್ಟು ಕುಸಿತ ಸಾಧಿಸಿದೆ. ವ್ಯವಸ್ಥಾಪಕ ನಿರ್ದೇಶಕ (ಎಂಡಿ) ವಿಶ್ವವೀರ್ ಅಹುಜಾ ಮತ್ತು ಬ್ಯಾಂಕಿನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) 18.92 ಲಕ್ಷ ಷೇರುಗಳನ್ನು 38.52 ಕೋಟಿಗೆ ಮಾರಾಟ ಮಾಡಿದ ನಂತರ ಆರ್‌ಬಿಎಲ್ ಬ್ಯಾಂಕ್ ತೀವ್ರ ನಷ್ಟ ಕಂಡಿವೆ.

ಮಧ್ಯಾಹ್ನ 1:35 ಕ್ಕೆ, ಆರ್‌ಬಿಎಲ್ ಬ್ಯಾಂಕಿನ ಷೇರುಗಳು ಬಿಎಸ್‌ಇಯಲ್ಲಿ ತಲಾ 197.50 ಕ್ಕೆ ವಹಿವಾಟು ನಡೆಸುತ್ತಿದ್ದು, ಹಿಂದಿನ ವಹಿವಾಟು ಮುಕ್ತಾಯಕ್ಕಿಂತ ಶೇ.6.22ರಷ್ಟು ಇಳಿಕೆಯಾಗಿದೆ. ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ ಶೇಕಡಾ 1.63ರಷ್ಟು ಇಳಿದು 38,823.84 ಪಾಯಿಂಟ್‌ಗಳಿಗೆ ತಲುಪಿದೆ.

ರಿಲಯನ್ಸ್ ರೀಟೇಲ್ ನಿಂದ ಫ್ಯೂಚರ್ ಗ್ರೂಪ್ 24,713 ಕೋಟಿಗೆ ಖರೀದಿರಿಲಯನ್ಸ್ ರೀಟೇಲ್ ನಿಂದ ಫ್ಯೂಚರ್ ಗ್ರೂಪ್ 24,713 ಕೋಟಿಗೆ ಖರೀದಿ

ಇನ್ನು ಸುಮಾರು 19 ಲಕ್ಷದಷ್ಟು ಷೇರುಗಳ ಮಾರಾಟವು ಅವರ ಕುಟುಂಬದ ಒಟ್ಟು ಹಿಡುವಳಿಗಳಲ್ಲಿ ಶೇಕಡಾ 18ರಷ್ಟು ಅನ್ನು ಪ್ರತಿನಿಧಿಸುತ್ತದೆ. ಇಷ್ಟಾದರೂ ಅಹುಜಾ 80.10 ಲಕ್ಷ ಷೇರುಗಳನ್ನು ಉಳಿಸಿಕೊಂಡಿದ್ದಾರೆ ಅಥವಾ ಆರ್‌ಬಿಎಲ್ ಬ್ಯಾಂಕ್ ಹೊಂದಿರುವ ಶೇಕಡಾ 1.6 ನಷ್ಟು ಷೇರುಗಳನ್ನು ಮಾರಾಟ ಮಾಡದೇ ಉಳಿಸಿಕೊಂಡಿದ್ದಾರೆ.

RBL Bank ಷೇರು ಶೇಕಡಾ 8ರಷ್ಟು ಕುಸಿತ

ಖಾಸಗಿ ಬ್ಯಾಂಕಿನ ಲಾಭವು ಶೇ. 47.1ರಷ್ಟು ಕುಸಿದು 141.22 ಕೋಟಿಗೆ ತಲುಪಿದೆ. ಒಟ್ಟು ಆದಾಯದಲ್ಲಿ ಶೇ. 2.6ರಷ್ಟು ಏರಿಕೆಯಾಗಿದ್ದು, ಕಳೆದ ವರ್ಷದ ತ್ರೈಮಾಸಿಕ ವರದಿ ಹಾಗೂ ಪ್ರಸ್ತುತ ಮೊದಲ ತ್ರೈಮಾಸಿಕಕ್ಕೆ ಹೋಲಿಸಿದರೆ 2,568.32 ಕೋಟಿಗೆ ತಲುಪಿದೆ. ನಿವ್ವಳ ಬಡ್ಡಿ ಅಂಚು (ಎನ್‌ಐಎಂ) 30 ಜೂನ್ 2020 ರ ವೇಳೆಗೆ ಶೇ. 4.85 ರಷ್ಟಿದ್ದರೆ, 2019 ರ ಜೂನ್ 30 ರ ವೇಳೆಗೆ ಶೇ. 4.31 ರಷ್ಟಿದೆ.

English summary

RBL Bank Shares Slip 8 Percent: Worth 38.52 Crore

RBL Bank fell as much as 7.60% after Vishwavir Ahuja, the managing director (MD) and chief executive officer (CEO) of the bank sold 18.92 lakh shares for ₹38.52 crore.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X