IPL 2025: ಐಪಿಎಲ್ ಮತ್ತೆ ಶುರುವಾಗಿದೆ.. RCB vs KKR ಮ್ಯಾಚ್ ಫ್ಯಾನ್ಸ್‌ಗೆ ಥ್ರಿಲ್ ನೀಡುವುದು ಪಕ್ಕಾ ಆಗಿದೆ.. ಆರ್‌ಸಿಬಿಗೆ ಮೂವರು ರಣಬೇಟೆಗಾರರು ಕಂಬ್ಯಾಕ್ ಮಾಡುವುದು ಫಿಕ್ಸ್..! ಇತ್ತ ಬೆಂಗಳೂರಿನ ಈ ರಸ್ತೆ ಸಂಚಾರ ನಿರ್ಬಂಧ. ಹೌದು, ಭಾರತ-ಪಾಕ್ ಕದನ ವಿರಾಮದಿಂದ ರದ್ದಾಗಿದ್ದ ಐಪಿಎಲ್ ಪಂದ್ಯಗಳು ನಾಳೆಯಿಂದ ಆರಂಭವಾಗಲಿದ್ದು, ಮೊದಲ ಪಂದ್ಯ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ (Chinnaswamy stadium) ನಡೆಯಲಿದೆ.
ಮೊದಲ ಪಂದ್ಯದಲ್ಲೇ ಹಾಲಿ ಚಾಂಪಿಯನ್ ಕೆಕೆಆರ್ ಮತ್ತು ಆರ್‌ಸಿಬಿ ತಂಡಗಳು ಮುಖಾಮುಖಿಯಾಗಲಿವೆ. ಆದ್ದರಿಂದ ಕ್ರೀಡಾಂಗಣದ ಸುತ್ತಮುತ್ತ ಭಾರೀ ಬಂದೋಬಸ್ತ್ ಮಾಡಲಾಗಿದೆ. ಜೊತೆಗೆ ವಾಹನ ಸಂಚಾರ ನಿಲುಗಡೆ ನಿರ್ಬಂಧಿಸಲಾಗಿದೆ. ಹಾಗಿದ್ರೆ ನಾಳೆ ನೀವು ಯಾವ ಮಾರ್ಗದಲ್ಲಿ ಕ್ರೀಡಾಂಗಣಕ್ಕೆ ಹೋಗಬೇಕು ವಾಹನ ನಿಲುಗಡೆಯ ಸ್ಥಳ ಯಾವುದು ಎಂಬ ಹೆಚ್ಚಿನ ವಿವರ ಇಲ್ಲಿದೆ ನೋಡಿ.

ಹೌದು, ನಾಳೆಯ ಮ್ಯಾಚ್ ಥ್ರಿಲ್ ಇದ್ದು, ಹೆಚ್ಚು ಜನರು ಪಂದ್ಯವನ್ನು ವೀಕ್ಷಣೆ ಮಾಡಲಿದ್ದಾರೆ.ಕ್ರೀಡಾಂಗಣ ಸುತ್ತಾ ಮುತ್ತಲಿನ ಪ್ರದೇಶದಲ್ಲಿ ಭಾರೀ ಸಂಚಾರ ದಟ್ಟಣೆ ಇರುವುದರಿಂದ ಮಧ್ಯಾಹ್ನ 3 ಗಂಟೆಯಿಂದ ರಾತ್ರಿ 12 ಗಂಟೆವರೆಗೆ ವಾಹನ ಸಂಚಾರ(Traffic advisory) ಮತ್ತು ನಿಲುಗಡೆ ನಿರ್ಬಂಧಿಸಲಾಗಿದ್ದು, ಸುಗಮ ಸಂಚಾರಕ್ಕಾಗಿ ಹಲವು ಕ್ರಮ ಕೈಗೊಳ್ಳಲಾಗಿದೆ.
ಸಾರ್ವಜನಿಕ ಸಾರಿಗೆ ಬಳಸುವಂತೆ ಮನವಿ
ಸಂಚಾರ ಪೊಲೀಸರು ಕೆಳಗಿನ ರೀತಿಯಲ್ಲಿ ಮನವಿ ಮಾಡಿದ್ದಾರೆ:
ಬಿಎಂಟಿಸಿ ವಿಶೇಷ ಬಸ್‌ಗಳು: ಬೆಂಗಳೂರು ನಗರದೆಲ್ಲೆಡೆ ವಿವಿಧ ಭಾಗಗಳಿಂದ ಕಬ್ಬನ್ ಉದ್ಯಾನವನದ ಬಳಿಗೆ ವಿಶೇಷ ಬಸ್ ಸೇವೆ ಲಭ್ಯವಿರುತ್ತದೆ.
ಬೆಂಗಳೂರು ಮೆಟ್ರೋ: ಮೆಟ್ರೋ ಸೇವೆಗೂ ವಿಸ್ತರಣೆಯು ಲಭ್ಯವಿದ್ದು, ಕ್ರಿಕೆಟ್ ಅಭಿಮಾನಿಗಳು ಮೆಟ್ರೋ ಬಳಸುವಂತೆ ಕೇಳಿಕೊಂಡಿದ್ದಾರೆ. ಮೆಟ್ರೋ ಸೇವೆಗಳನ್ನು ರಾತ್ರಿ 12:30 ರಿಂದ 1:15 ರವರೆಗೆ ವಿಸ್ತರಿಸರಣೆ ಮಾಡಲಾಗಿದೆ.
ಓಲಾ/ಊಬರ್/ಆಟೋ/ಕ್ಯಾಬ್ ಪಿಕ್‌ಅಪ್ ಮತ್ತು ಡ್ರಾಪ್ ಪಾಯಿಂಟ್ ಸ್ಥಳವನ್ನು ನಿಗದಿಪಡಿಸಲಾಗಿದೆ. ಕಬ್ಬನ್ ರಸ್ತೆ ,BRV ಜಂಕ್ಷನ್‌ನಿಂದ CTO ಸರ್ಕಲ್‌ವರೆಗೆ ಕ್ಯಾಬ್ ಮತ್ತು ಆಟೋಗಳು ಪ್ರಯಾಣಿಕರನ್ನು ಅನುಮತಿ ಇದೆ.
ಕ್ರಿಕೆಟ್ ಅಭಿಮಾನಿಗಳು ತಮ್ಮ ಅನುಕೂಲಕ್ಕಾಗಿ ಸಾರ್ವಜನಿಕ ಸಾರಿಗೆ ಸೇವೆಗಳನ್ನು ಬಳಸಬೇಕು. ಇದರಿಂದ ರಸ್ತೆ ದಟ್ಟಣೆ ತಗ್ಗುತ್ತದೆ ಮತ್ತು ಕ್ರೀಡಾಂಗಣದ ಸುತ್ತಲಿನ ಪ್ರದೇಶಗಳಲ್ಲಿ ಸಂಚಾರ ವ್ಯವಸ್ಥೆ ಸುಗಮವಾಗುತ್ತದೆ ಎಂದು ಹೇಳಿದ್ದಾರೆ.
ಬಹುತೇಕ ಎಂಎನ್‌ಸಿ ಕಂಪನಿಗಳಿಗೆ ಶನಿವಾರ ಇರುವುದರಿಂದ ರಜೆ ಇರುತ್ತದೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಹೆಚ್ಚು ಪ್ರೇಕ್ಷಕರು ಸೇರುವ ಸಾಧ್ಯತೆ ಇದೆ. ಇದರ ಪರಿಣಾಮವಾಗಿ ಮಧ್ಯಾಹ್ನದಿಂದಲೇ ಕೆಲವು ರಸ್ತೆಗಳಲ್ಲಿ ಭಾರೀ ಟ್ರಾಫಿಕ್ ಜಾಮ್ ಉಂಟಾಗಬಹುದು.
ಪೊಲೀಸ್ ವಾಹನ ನಿಲುಗಡೆಗೆ ವಿಶೇಷ ವ್ಯವಸ್ಥೆ
ಸ್ಥಳ: ಕಬ್ಬನ್ ಪಾರ್ಕ್ ಒಳಭಾಗ
ನಿಗದಿತ ಪಾರ್ಕಿಂಗ್ ಸ್ಥಳ: ಕೆ.ಜಿ.ಐ.ಡಿ (KGID) ಬಿಲ್ಡಿಂಗ್ ಮುಂಭಾಗದ ಪಾರ್ಕಿಂಗ್ ಪ್ರದೇಶ
ಈ ಸ್ಥಳವನ್ನು ಮಾತ್ರ ಪೋಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಯ ಅಧಿಕೃತ ಕರ್ತವ್ಯ ವಾಹನಗಳಿಗಾಗಿ ಮೀಸಲಿಟ್ಟಿದ್ದಾರೆ.
ನಿಲುಗಡೆ ನಿರ್ಬಂಧಿತ ರಸ್ತೆಗಳು
ಕಬ್ಬನ್ ರಸ್ತೆ
ಕ್ವೀನ್ಸ್ ರಸ್ತೆ (Queens Road)
ಎಂ.ಜಿ. ರಸ್ತೆ (MG Road)
ರಾಜಭವನ ರಸ್ತೆ (Raj Bhavan Road)
ಸೆಂಟ್ರಲ್ ಸ್ಟ್ರೀಟ್ (Central Street)
ಸೇಂಟ್ ಮಾರ್ಕ್ಸ್ ರಸ್ತೆ (St. Marks Road)
ಮ್ಯೂಸಿಯಂ ರಸ್ತೆ (Museum Road)
ಕಸ್ತೂರಬಾ ರಸ್ತೆ (Kasturba Road)
ವಿಧಾನಸೌಧ-ಹೈಕೋರ್ಟ್ ಎದುರಿನ ರಸ್ತೆ
ಟ್ರಿನಿಟಿ ರಸ್ತೆ (Trinity Road)
ಲ್ಯಾವೆಲ್ಲೆ ರಸ್ತೆ (Lavelle Road)
ವಿಠ್ಠಲ್ ಮಲ್ಯ ರಸ್ತೆ (Vittal Mallya Road)
ನೃಪತುಂಗ ರಸ್ತೆ (Nrupathunga Road)
ಸಾರ್ವಜನಿಕರಿಗೆ ವಿನಂತಿ
ಈ ರಸ್ತೆಗಳ ಬಳಕೆ ಮಾಡುವಾಗ ಅಧಿಕಾರಿಗಳ ಸೂಚನೆಗಳಿಗೆ ಗಮನ ನೀಡಿ.
ನಿಲುಗಡೆ ಸ್ಥಳ ಇಲ್ಲದೆ ವಾಹನ ನಿಲ್ಲಿಸಿದರೆ, ಟೋ ಮಾಡಲಾಗಬಹುದು ಅಥವಾ ದಂಡ ವಿಧಿಸಲಾಗುತ್ತದೆ.
ಸಾಧ್ಯವಾದರೆ, ಸಾರ್ವಜನಿಕ ಸಾರಿಗೆ ಬಳಸುವುದು ಉತ್ತಮ.
ನಿಲುಗಡೆಗೆ ಅವಕಾಶ
ಸೇಂಟ್ ಜೋಸೆಫ್ ಇಂಡಿಯಾ ಸ್ಕೂಲ್ ಮೈದಾನ, ಯು.ಬಿ ಸಿಟಿ (UB City) ಕಸ್ತೂರಬಾ ರಸ್ತೆಯಲ್ಲಿರುವ ಆಧುನಿಕ ಕಮರ್ಷಿಯಲ್ ಕಾಂಪ್ಲೆಕ್ಸ್ ಸುರಕ್ಷಿತ ಪಾರ್ಕಿಂಗ್ ಜಾಗ ಲಭ್ಯವಿದೆ. ಶಾಂತಿನಗರ ಬಿಎಂಟಿಸಿ ಬಸ್ ನಿಲ್ದಾಣದ ಪಾರ್ಕಿಂಗ್ ಜಾಗ (BMTC TTMC, Shantinagar) ಪಬ್ಲಿಕ್ ಟ್ರಾನ್ಸಿಟ್ ಹಬ್ ಆಗಿದ್ದು, ಬಹುತೇಕ ಬಸ್ ಸಂಪರ್ಕ ಲಭ್ಯವಿದೆ. ಕಿಂಗ್ಸ್ ರಸ್ತೆ (Kings Road - Cubbon Park ಒಳಭಾಗ) ಕಬ್ಬನ್ ಪಾರ್ಕ್ ಆವರಣದಲ್ಲಿ ಇರುವ ಪಾರ್ಕಿಂಗ್ ಸ್ಥಳಗಳಲ್ಲಿ ವಾಹನವನ್ನು ನಿಲುಗಡೆ ಮಾಡಬಹುದು.
ವಿಶೇಷ ವ್ಯವಸ್ಥೆ
ಪಂದ್ಯವನ್ನು ನೋಡಲು ಹೋಗವರಿಗೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ವಿಶೇಷ ಬಸ್ ಸೇವೆ ಒದಗಿಸಿದೆ. ಇದರ ಜೊತೆಗೆ ಬೆಂಗಳೂರು ಮೆಟ್ರೊ ರೈಲು ನಿಗಮ (ಬಿಎಂಆರ್‌ಸಿಎಲ್) ಕೂಡ ರೈಲು ಸೇವೆಯನ್ನು ರಾತ್ರಿ 12.30ರವರೆಗೆ ವಿಸ್ತರಣೆಯನ್ನು ಮಾಡಿದೆ.
ಫಿಲ್ ಸಾಲ್ಟ್, ಲಿಯಾಮ್ ಲಿವಿಂಗ್‌ಸ್ಟೋನ್ ಮತ್ತೆ ಜಾಕೋಬ್ ಬೆಥೆಲ್ ಆಲ್ರೆಡಿ ಬೆಂಗಳೂರಿಗೆ ಬಂದಿದ್ದಾರೆ. ಇವರ ಆಗಮನದಿಂದ ಆರ್ ಸಿಬಿ ಬ್ಯಾಟಿಂಗ್ ಲೈನ್‌ಅಪ್ ಮತ್ತಷ್ಟು ಬಲಿಷ್ಠವಾಗಿದೆ.
More From GoodReturns

Karnataka Rain: ರಾಜ್ಯದಲ್ಲಿ ಸದ್ಯಕ್ಕೆ ನಿಲ್ಲಲ್ಲ ವರುಣಾರ್ಭಟ; ಎಷ್ಟು ದಿನ ಈ ಮಳೆ ಎಂದು ತಿಳಿಯಿರಿ

Bank Holiday: ನಾಳೆ ಕರ್ನಾಟಕದಲ್ಲಿ ಬ್ಯಾಂಕ್ ತೆರೆದಿರುತ್ತೋ, ಇಲ್ಲವೋ? ಸ್ಪಷ್ಟ ಮಾಹಿತಿ ತಿಳಿಯಿರಿ

Silver Price Today: ಬೆಳ್ಳಿ ದರದಲ್ಲಿ ಇಂದು 5,000 ಕುಸಿತ; ಭಾರತದಲ್ಲಿ ಇಂದಿನ ಬೆಲೆ ತಿಳಿಯಿರಿ

LPG Crisis Bengaluru: ಕೋಳಿ ವ್ಯಾಪಾರಕ್ಕೂ ತಟ್ಟಿದ LPG ಕೊರತೆ ಬಿಸಿ; ಬೆಂಗಳೂರಲ್ಲಿ ಮಾರಾಟ ಭಾರಿ ಕುಸಿತ

Bengaluru: ಬೀದಿ ಬದಿ ವ್ಯಾಪಾರಕ್ಕೆ ಅವಕಾಶವಿಲ್ಲ; ಈ ರಸ್ತೆಯ ವ್ಯಾಪಾರಿಗಳಿಗೆ ದೊಡ್ಡ ಸಂಕಷ್ಟ

Eid-ul-Fitr 2026: ರಂಜಾನ್ ಹಬ್ಬ ಇಂದೋ, ನಾಳೆಯೋ; ಕೇರಳದಲ್ಲಿ ಮಾತ್ರ ಇಂದು ಆಚರಣೆ ಯಾಕೆ?

Oil Price Tension: ಮದ್ಯಪ್ರಾಚ್ಯ ಉದ್ವಿಗ್ನತೆ ನಡುವೆ ತೈಲ ಮಾರುಕಟ್ಟೆ ತಲ್ಲಣ, ಭಾರತಕ್ಕೆ ಸವಾಲು; ಎಚ್ಚರಿಕೆ ಸೂಚನೆ

Petrol Price Hike: ಪ್ರೀಮಿಯಂ ಪೆಟ್ರೋಲ್ ದರ ಏರಿಕೆ-ಲೀಟರ್ಗೆ 2 ಹೆಚ್ಚಳ, ಸಾಮಾನ್ಯ ಇಂಧನ ದರ ಸ್ಥಿರ

Good Friday 2026: ಈ ವರ್ಷ ಗುಡ್ ಫ್ರೈಡೇ ಯಾವಾಗ? ಈಸ್ಟರ್ ದಿನಾಂಕ ಮತ್ತು ಸಂಪೂರ್ಣ ಮಾಹಿತಿ ತಿಳಿಯಿರಿ

Gold Price Today India: ಯುಗಾದಿ ಬಳಿಕ ಏರಿಕೆ ಹಾದಿ ಹಿಡಿದ ಚಿನ್ನದ ಬೆಲೆ-24K/100gನಲ್ಲಿ 6,500 ರೂ. ಜಿಗಿತ!

8th Pay Commission: 8ನೇ ವೇತನ ಆಯೋಗದಿಂದ ಮಹತ್ವದ ಅಪ್ಡೇಟ್; ಪ್ರಶ್ನಾವಳಿ ಸಲ್ಲಿಸಲು ಮಾ.31ರ ವರೆಗೂ ಅವಕಾಶ



Click it and Unblock the Notifications