ಅಬ್ಬಾ..! ಅಂತೂ ಇಂತೂ 'ಐಪಿಎಲ್ ಟ್ರೋಫಿ' ನಮ್ಮದು ಆಯ್ತು. ಕಪ್ ನಮ್ಮದೇ, ಕಪ್ ನಮ್ದು ಎಂದು ಆರ್‌ಸಿಬಿ ಗೆಲುವಿನ ಸಂಭ್ರಮಚಾರಣೆಯಲ್ಲಿ ಇರುವ ಅಭಿಮಾನಿಗಳಿಗೆ ಇಂದು ಸಾರ್ವಜನಿಕ ರಜೆ ಸಿಗುತ್ತಾ..? ಆರ್‌ಸಿಬಿ ಗೆಲುವಿನ ಪ್ರತಿ ವರ್ಷವು ಹಬ್ಬದಂತೆ ಆಚರಣೆ ಮಾಡಲು ಈ ದಿನವನ್ನು ಮೀಸಲು ಇಟ್ಟಿದ್ದೀಯಾ ಸರ್ಕಾರ ಎಂಬ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ.
ಹೌದು, ಆರ್‌ಸಿಬಿ ಗೆದ್ದರೆ ಸಾರ್ವಜಿಕ ರಜೆಯನ್ನು ನೀಡಿ ಎಂದು ಬೆಳಗಾವಿ ಜಿಲ್ಲೆಯ ಗೋಕಾಕ್‌ನ RCB ಅಭಿಮಾನಿಯಾದ ಶಿವಾನಂದ ಎಂಬುವವರು ಸಿಎಂ ಸಿದ್ದರಾಮಯ್ಯ ಅವರಿಗೆ ಬರೆದಿದ್ದು ಎನ್ನಲಾದ ಪತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವೈರಲ್ ಪತ್ರದಲ್ಲಿ RCB ಫೈನಲ್ ಗೆ ಹೋಗಿ, ಕಪ್ ಗೆದ್ದರೆ ಆ ದಿನವನ್ನು RCB ಫ್ಯಾನ್ಸ್ ಹಬ್ಬ ಮತ್ತು ಒಂದು ದಿನ ರಜೆ ಘೋಷಣೆ ಮಾಡುವಂತೆ ಮನವಿ ಮಾಡಿಕೊಳ್ಳಲಾಗಿದೆ. ಸದ್ಯ ಈ ಪತ್ರ ವೈರಲ್ ಆಗುತ್ತಿದೆ. ಇದರ ಜೊತೆಗೆ ಕಪ್ ಗೆಲ್ಲದಿದ್ರೆ ಗಂಡನಿಗೆ ಡಿವೋರ್ಸ್ ಎಂಬ ಸುದ್ದಿ ಕೂಡ ಹರಿದಾಡುತ್ತಿದೆ. ಆದರೆ ಇದೀಗ ಆರ್‌ಸಿಬಿ 18ನೇ ವನವಾಸ ಮುಗಿಸಿ ಆರ್‌ಸಿಬಿ ಟ್ರೋಫಿ ಗೆದ್ದು 18ನೇ ಕಪ್ ನಮ್ಮದೇ ಆಗಿದೆ.

ನಿನ್ನೆ (ಜೂನ್ 3 ರಂದು) ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ರೋಚಕ ಫೈನಲ್‌ನಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಆರು ರನ್‌ಗಳಿಂದ ಸೋಲಿಸುವ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತನ್ನ ಚೊಚ್ಚಲ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟ್ರೋಫಿಯನ್ನು ಎತ್ತಿ ಹಿಡಿಯುವ ಮೂಲಕ ಗೆಲವನ್ನು ಸಂಭ್ರಮಿಸಿದೆ.ಕೋಟ್ಯಾಂತರ ಅಭಿಮಾನಿಗಳ ಪ್ರಾರ್ಥನೆಗೆ ಕೊನೆಗೂ ಫಲ ಕೊಟ್ಟಿದೆ.
18 ವರ್ಷಗಳ ಸುದೀರ್ಘ ನಂತರ ಈ ಗೆಲುವು ಭಾರತದಾದ್ಯಂತ ಅಭಿಮಾನಿಗಳಿಗೆ ಸಂತೋಷ ತಂದಿತು ಮಾತ್ರವಲ್ಲದೆ ಕರ್ನಾಟಕದಲ್ಲಿ ಕುತೂಹಲಕಾರಿ ಚರ್ಚೆಯನ್ನೂ ಹುಟ್ಟುಹಾಕಿತು.ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಜಯವನ್ನು ಆಚರಿಸಲು ಜೂನ್ 4 ಅನ್ನು ಸಾರ್ವಜನಿಕ ರಜಾದಿನವೆಂದು ಘೋಷಿಸುತ್ತಾರೆಯೇ? ಮುಂದೆ ಓದಿ.
ಫೈನಲ್ ಪಂದ್ಯಕ್ಕೂ ನಾಲ್ಕು ದಿನಗಳ ಮೊದಲು, ಆರ್‌ಸಿಬಿ ಅಭಿಮಾನಿಯೊಬ್ಬರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕೈಬರಹದ ಪತ್ರ ಬರೆದು, ಆರ್‌ಸಿಬಿ ಟ್ರೋಫಿ ಗೆದ್ದರೆ ರಾಜ್ಯಾದ್ಯಂತ ರಜೆ ಘೋಷಿಸುವಂತೆ ವಿನಂತಿಸಿದ್ದರು. ಈ ದಿನವನ್ನು "ಕರ್ನಾಟಕ ರಾಜ್ಯ ಆರ್‌ಸಿಬಿ ಅಭಿಮಾನಿಗಳ ಉತ್ಸವ" ಎಂದು ಗುರುತಿಸುವಂತೆ ಅಭಿಮಾನಿ ಸರ್ಕಾರವನ್ನು ಒತ್ತಾಯಿಸಿದರು. ಇದು ಕರ್ನಾಟಕ ರಾಜ್ಯೋತ್ಸವಕ್ಕೆ ಹೋಲುವ ವಾರ್ಷಿಕ ಆಚರಣೆಯಾಗಿದೆ. ಈ ಪತ್ರವು ಕರ್ನಾಟಕದ ಕ್ರಿಕೆಟ್ ಪ್ರೀತಿ ಮತ್ತು 2008 ರಿಂದ ಆರ್‌ಸಿಬಿ ಬೆಂಬಲಿಗರ ಅಚಲ ನಿಷ್ಠೆಯನ್ನು ಒತ್ತಿ ಹೇಳಿದೆ. ಈಗ ಆರ್‌ಸಿಬಿ ಇತಿಹಾಸ ನಿರ್ಮಿಸಿರುವುದರಿಂದ, ಗಮನ ರಾಜ್ಯ ಸರ್ಕಾರದತ್ತ ಹರಿದಿದೆ.
ಆರ್‌ಸಿಬಿ ಅಭಿಮಾನಿಯ ಮನವಿಯನ್ನು ಸಿದ್ದರಾಮಯ್ಯ ಆಲಿಸಿ ತಂಡದ ಗೆಲುವನ್ನು ಗೌರವಿಸಲು ರಜೆ ಘೋಷಣೆ ಮಾಡಿದ್ದರೆಯೋ..? ಇಲ್ಲ ಇಂತಹ ಯಾವುದೇ ಅಧಿಕೃತ ಅಧಿಸೂಚನೆನ್ನು ಇನ್ನೂ ಸರ್ಕಾರ ಹೊರಡಿಸಿಲ್ಲ. ಇಂದು ಸಂಜೆ ಬೆಂಗಳೂರಿನಲ್ಲಿ ವಿಜಯೋತ್ಸವ ಮೆರವಣಿಗೆ ನಡೆಯುತ್ತಿದೆ. ಈ ಅದ್ಧೂರಿ ಮೆರವಣಿಗೆಯಲ್ಲಿ ಆರ್‌ಸಿಬಿ ತಂಡ ಭಾಗಿಯಲಾಗಲಿದ್ದು, ಇದನ್ನು ನೋಡಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.
ಆರ್‌ಸಿಬಿ ತಂಡಕ್ಕೆ ಶುಭ ಕೋರಿದ ಸಿಎಂ ಸಿದ್ದರಾಮಯ್ಯ
ಆರ್‌ಸಿಬಿ ತಂಡದ ಬಹುನಿರೀಕ್ಷಿತ ಗೆಲುವಿಗೆ ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ, ಆರ್‌ಸಿಬಿ ತಂಡಕ್ಕೆ ಅಭಿನಂದನೆಗಳು ಸಲ್ಲಿಸಿದ್ದಾರೆ. ಕೊನೆಗೂ ಕಪ್ ಗೆಲುವ ಕನಸು ನನಸಾಗಿದೆ. ಈ ಸಲಾ ಕಪ್ ನಮ್ದೆ! ಎಂದು ಸಾಮಾಜಿಕ ಜಾಲತಾಣದಲ್ಲಿ ಶುಭ ಆರೈಸಿದ್ದಾರೆ.
ಐಪಿಎಲ್ ಫೈನಲ್ ಪಂದ್ಯದಲ್ಲಿ ಪಂಜಾಬ್ ತಂಡವನ್ನು ಬಗ್ಗುಬಡಿದು ಕಪ್ ಮುಡಿಗೇರಿಸಿಕೊಂಡ ಆರ್‌ಸಿಬಿ ತಂಡಕ್ಕೆ ಅಭಿನಂದನೆಗಳು. ಇಡೀ ಪಂದ್ಯಾವಳಿಯಲ್ಲಿ ಒಂದು ತಂಡವಾಗಿ ಸಂಘಟಿತ ಪ್ರದರ್ಶನ ನೀಡುವ ಮೂಲಕ ಕೋಟ್ಯಂತರ ಅಭಿಮಾನಿಗಳ ಕನಸನ್ನು ಈ ದಿನ ಆರ್‌ಸಿಬಿಯ ಹುಡುಗರು ನನಸಾಗಿಸಿದ್ದಾರೆ.
ಆರ್‌ಸಿಬಿಯ ಈ ವಿಜಯದಲ್ಲಿ ವಿರಾಟ್ ಕೋಹ್ಲಿಯ 18 ವರ್ಷಗಳ ಕಾಲದ ತಪಸ್ಸಿದೆ, ನಿಷ್ಠೆ, ಬದ್ಧತೆಯಿದೆ. ಬೌಲಿಂಗ್, ಬ್ಯಾಟಿಂಗ್, ಫೀಲ್ಡಿಂಗ್ ಹೀಗೆ ಎಲ್ಲಾ ವಿಭಾಗದಲ್ಲೂ ಆರ್‌ಸಿಬಿ ಪ್ರತಿ ಆಟಗಾರರು ಚಾಂಪಿಯನ್ ಪ್ರದರ್ಶನ ನೀಡಿದ್ದಾರೆ ಎನ್ನುವುದರಲ್ಲಿ ಅನುಮಾನವೇ ಇಲ್ಲ.
ಇದು ಇತಿಹಾಸ ಸೃಷ್ಟಿಸಿದ ದಿನ..
ಕೊನೆಯದಾಗಿ, ಈ ಸಲ ಕಪ್ ನಮ್ದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.


Click it and Unblock the Notifications