For Quick Alerts
ALLOW NOTIFICATIONS  
For Daily Alerts

ರಿಲಯನ್ಸ್ ಕಮ್ಯುನಿಕೇಷನ್ ಆಸ್ತಿ ಖರೀದಿಗೆ 25 ಸಾವಿರ ಕೋಟಿ ಬಿಡ್

|

ರಿಲಯನ್ಸ್ ಕಮ್ಯುನಿಕೇಷನ್ (ಆರ್ ಕಾಮ್) ಮತ್ತು ಅದರ ಸಹವರ್ತಿ ಸಂಸ್ಥೆಗಳ ಆಸ್ತಿ ಖರೀದಿಗೆ ಮುಕೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಜಿಯೋ ಇನ್ಫೋಕಾಮ್ ಮತ್ತು ಯುವಿಎಅರ್ ಸಿಯಿಂದ ಇಪ್ಪತ್ತೈದು ಸಾವಿರ ಕೋಟಿ ರುಪಾಯಿ ಬಿಡ್ ಮಾಡಲಾಗಿದೆ. ಸೋಮವಾರ ನಡೆದ ಸಾಲಗಾರರ ಸಮಿತಿ ಸಭೆಯಲ್ಲಿ ಈ ಬಿಡ್ ಸಲ್ಲಿಕೆ ಆಗಿದೆ.

ಮೂಲಗಳ ಪ್ರಕಾರ, ರಿಲಯನ್ಸ್ ಇಂಡಸ್ಟ್ರೀಸ್ ನ ಭಾಗವಾಗಿರುವ ಜಿಯೋದಿಂದ ಆರ್ ಕಾಮ್ ಮತ್ತು ರಿಲಯನ್ಸ್ ಟೆಲಿಕಾಂ ಲಿಮಿಟೆಡ್ ನ ಟವರ್ ಮತ್ತು ಫೈಬರ್ ಆಸ್ತಿಗೆ 4,700 ಕೋಟಿ, ಸ್ಪೆಕ್ಟ್ರಂ, ರಿಯಲ್ ಎಸ್ಟೇಟ್, ಎಂಟರ್ ಪ್ರೈಸಸ್ ಮತ್ತು ಡೇಟಾ ಸೆಂಟರ್ ವ್ಯಾಪಾರಗಳಿಗಾಗಿ ಯುವಿಎಆರ್ ಸಿಯಿಂದ 16,000 ಕೋಟಿ ರುಪಾಯಿ ನೀಡುವ ಪ್ರಸ್ತಾವ ಇರಿಸಲಾಗಿದೆ.

ರಿಲಯನ್ಸ್ ಜಿಯೋದಿಂದ ಒಟ್ಟು ಬಿಡ್ ಮೊತ್ತದ ಶೇಕಡಾ 30ರಷ್ಟನ್ನು, ಅಂದರೆ 7,500 ಕೋಟಿ ರುಪಾಯಿಯನ್ನು 90 ದಿನದೊಳಗೆ ಪಾವತಿಸುವುದಾಗಿ ಒಪ್ಪಿಕೊಳ್ಳಲಾಗಿದೆ. ಆದರೆ ಈ ಒಪ್ಪಂದದ ಬಗ್ಗೆ ಜಿಯೋ ಮತ್ತು ಯುವಿಎಆರ್ ಸಿಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. 38 ಸಾಲಗಾರರು ಆರ್ ಕಾಮ್ ಗೆ ಸಾಲ ನೀಡಿರುವ ಮೊತ್ತ 33,000 ಕೋಟಿ ರುಪಾಯಿ. ಅದರಲ್ಲಿ 75 ಪರ್ಸೆಂಟ್ ನಷ್ಟು ವಾಪಸ್ ಪಡೆಯಬೇಕಿದೆ.

ರಿಲಯನ್ಸ್ ಕಮ್ಯುನಿಕೇಷನ್ ಆಸ್ತಿ ಖರೀದಿಗೆ 25 ಸಾವಿರ ಕೋಟಿ ಬಿಡ್

ಅಂತಿಮವಾಗಿ ಮಂಜೂರಾತಿ ನೀಡುವ ಸಲುವಾಗಿ ಸಾಲ ನೀಡಿರುವವರ ಸಮಿತಿಯು ಜನವರಿ ಮೂವತ್ತೊಂದಕ್ಕೆ ಮತದಾನಕ್ಕೆ ಹಾಕಲಿದೆ. ಫೆಬ್ರವರಿ ಮೂರನೇ ತಾರೀಕು ಎನ್ ಸಿಎಲ್ ಟಿಯಲ್ಲಿ ಫೈಲಿಂಗ್ ಮಾಡಬೇಕಿದೆ.

English summary

RCom And Subsidiaries Get 25 Thousand Crore Bids

With a bid of 25,000 crore rupees Reliance Jio Infocomm and UVARC, are learnt to have emerged as the highest bidders for assets of Reliance Communications and its subsidiaries.
Story first published: Tuesday, January 14, 2020, 20:30 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X