ಅಮೆರಿಕ, ಚೀನಾಗೆ ಭಾರತದ ರಫ್ತು ಇಳಿಕೆ; ಕಾರಣ ಏನು?

ನವದೆಹಲಿ, ಅ. 14: ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ಭಾರತದ ರಫ್ತು ಮಾರುಕಟ್ಟೆ ನೀರಸ ವಹಿವಾಟು ಕಂಡಿದೆ. ಹಲವು ದೇಶಗಳಿಗೆ ಭಾರತದ ರಫ್ತು ಪ್ರಮಾಣ ಇಳಿಕೆ ಕಂಡಿದೆ. ಒಟ್ಟಾರೆ ಭಾರತದ ರಫ್ತು ಸೆಪ್ಟೆಂಬರ್‌ನಲ್ಲಿ ಶೇ. 3.52ರಷ್ಟು ಕುಸಿತ ಕಂಡಿದೆ. ಅಕ್ಟೋಬರ್ 3ರಂದು ವಾಣಿಜ್ಯ ಸಚಿವಾಲಯ ಬಿಡುಗಡೆ ಮಾಡಿದ ಪೂರ್ವಭಾವಿ ದತ್ತಾಂಶದಲ್ಲೂ ರಫ್ತು ಇಳಿಕೆಯಾಗಿರುವುದನ್ನು ತಿಳಿಸಲಾಗಿತ್ತು. ಅದರಲ್ಲೂ ಅಮೆರಿಕ, ಚೀನಾ, ಯುಎಇಯಂತಹ ಪ್ರಮುಖ ರಫ್ತು ಮಾರುಕಟ್ಟೆಗಳಿಗಂತೂ ಭಾರತದ ಸರಕುಗಳು ಹೆಚ್ಚು ಮಾರಾಟವಾಗಿಲ್ಲ.

ಕಳೆದ ವರ್ಷದ, ಅಂದರೆ 2021ರ ಸೆಪ್ಟೆಂಬರ್ ತಿಂಗಳಿಗೆ ಹೋಲಿಸಿದರೆ ಭಾರತದ ರಫ್ತು ಶೇ. 3.52ರಷ್ಟು ಕುಸಿತ ಕಂಡಿದೆ. 2021ರ ಸೆಪ್ಟೆಂಬರ್‌ನಲ್ಲಿ 33.81 ಬಿಲಿಯನ್ ಡಾಲರ್‌ನಷ್ಟು (ಸುಮಾರು 2.78 ಲಕ್ಷ ಕೋಟಿ ರೂ) ಪ್ರಮಾಣದಲ್ಲಿ ಆಗಿದ್ದ ರಫ್ತು ಈ ವರ್ಷದ ಸೆಪ್ಟೆಂಬರ್‌ನಲ್ಲಿ 32.62 ಬಿಲಿಯನ್ ಡಾಲರ್‌ಗೆ (2.68 ಲಕ್ಷಕೋಟಿ ರೂಪಾಯಿ) ಇಳಿದಿದೆ.

ಚೀನಾಗೆ ರಫ್ತು ಶೇ. 45ರಷ್ಟು ಕುಸಿತ

ಚೀನಾಗೆ ರಫ್ತು ಶೇ. 45ರಷ್ಟು ಕುಸಿತ

ಅಮೆರಿಕಕ್ಕೆ ಭಾರತದ ರಫ್ತು ಪ್ರಮಾಣ ಶೇ. 10.7ರಷ್ಟು ಕುಸಿತ ಕಂಡಿದೆ. ಚೀನಾಗಂತೂ ಶೇ. 45.8ರಷ್ಟು ರಫ್ತು ಇಳಿಕೆಯಾಗಿದೆ. ಯುಎಇ, ಬಾಂಗ್ಲಾದೇಶಗಳಿಗೂ ಭಾರತದ ವಹಿವಾಟು ಕಡಿಮೆ ಆಗಿದೆ. ಭಾರತದ ಅತಿಹೆಚ್ಚು ರಫ್ತು ಮಾಡುವ ಟಾಪ್-10 ದೇಶಗಳ ಪೈಕಿ ಆರು ದೇಶಗಳಿಗೆ ಭಾರತದ ರಫ್ತು ಕಡಿಮೆ ಆಗಿದೆ. ಭಾರತ ಅತಿ ಹೆಚ್ಚು ರಫ್ತು ಮಾಡುವ 30 ಸರಕುಗಳಲ್ಲಿ 18 ಸರಕುಗಳ ರಫ್ತು ಕಡಿಮೆ ಆಗಿದೆ.

ಉದ್ಯೋಗ ಸೃಷ್ಟಿಸುವ ವಲಯಗಳಿಗೆ ಹೊಡೆತ

ಉದ್ಯೋಗ ಸೃಷ್ಟಿಸುವ ವಲಯಗಳಿಗೆ ಹೊಡೆತ

ಗಮನಿಸಬೇಕಾದ ಸಂಗತಿ ಎಂದರೆ ಭಾರತದ ರಫ್ತು ಪ್ರಮಾಣದಲ್ಲಿ ಇಳಿಕೆಯಾಗಿರುವುದು ಹಲವು ವಲಯಗಳಿಗೆ ಹೊಡೆತ ಕೊಟ್ಟಿದೆ. ಅದರಲ್ಲೂ ಅತಿ ಹೆಚ್ಚು ಉದ್ಯೋಗ ಸೃಷ್ಟಿಸುವ ಎಂಜಿನಿಯರಿಂಗ್, ಗಾರ್ಮೆಂಟ್ಸ್ ಮೊದಲಾದ ಕ್ಷೇತ್ರಗಳು ರಫ್ತು ಇಳಿಕೆಯಿಂದ ಕಂಗೆಟ್ಟಿವೆ.

ಕಳೆದ ವರ್ಷದ ಸೆಪ್ಟೆಂಬರ್‌ಗೆ ಹೋಲಿಸಿದರೆ ಈ ಬಾರಿ ಎಂಜಿನಿಯರಿಂಗ್ ಸರಕುಗಳ ರಫ್ತು ಶೇ. 17ರಷ್ಟು ಇಳಿಕೆಯಾಗಿದೆ. ಜವಳಿ ರಫ್ತು ಕೂಡ ಶೇ. 21.5ರಷ್ಟು ಕಡಿಮೆಯಾಗಿದೆ. ಹತ್ತಿ ದಾರ, ಬಟ್ಟೆ ಮೊದಲಾದ ವಸ್ತುಗಳ ರಫ್ತು ಏಪ್ರಿಲ್-ಸೆಪ್ಟೆಂಬರ್ ಅವಧಿಯಲ್ಲಿ ಶೇ. 21ರಷ್ಟು ಕಡಿಮೆ ಆಗಿದೆ.

ಇನ್ನು, ಏಪ್ರಿಲ್‌ನಿಂದ ಸೆಪ್ಟೆಂಬರ್ ತಿಂಗಳ ಅವಧಿಯಲ್ಲಿ ಕರಕುಶಲ ವಸ್ತುಗಳ ರಫ್ತು ಶೇ. 30.5ರಷ್ಟು ಕಡಿಮೆ ಆಗಿರುವುದು ಕೇಂದ್ರ ವಾಣಿಜ್ಯ ಸಚಿವಾಲಯ ಅಕ್ಟೋಬರ್ 13ರಂದು ಬಿಡುಗಡೆ ಮಾಡಿದ ವರದಿಯಿಂದ ತಿಳಿದುಬಂದಿದೆ.

ರಫ್ತು ಇಳಿಕೆಗೆ ಏನು ಕಾರಣ?

ರಫ್ತು ಇಳಿಕೆಗೆ ಏನು ಕಾರಣ?

ಹಾಂಕಾಂಗ್ ಮತ್ತು ಚೀನಾದಲ್ಲಿ ಕೋವಿಡ್ ನಿಯಂತ್ರಣಕ್ಕೆ ಕೈಗೊಳ್ಳಲಾದ ಲಾಕ್‌ಡೌನ್ ಇತ್ಯಾದಿ ವಿವಿಧ ನಿರ್ಬಂಧಗಳಿಂದಾಗಿ ಅಲ್ಲಿನ ಮಾರುಕಟ್ಟೆಯಲ್ಲಿ ಬೇಡಿಕೆ ಕಡಿಮೆ ಆಗಿದೆ. ಹೀಗಾಗಿ, ಆ ದೇಶಕ್ಕೆ ಮಾಮೂಲಿಯಾಗಿ ಹೋಗುತ್ತಿದ್ದ ಭಾರತದ ರಫ್ತು ಕಡಿಮೆ ಆಗಿದೆ.

ಚೀನಾಗೆ ಭಾರತ ಸಾಕಷ್ಟು ಪ್ರಮಾಣದಲ್ಲಿ ಉಕ್ಕನ್ನು ರಫ್ತು ಮಾಡುತ್ತಿತ್ತು. ಭಾರತದಲ್ಲಿ ಉಕ್ಕು ರಫ್ತಿಗೆ ಶೇ. 15ರಷ್ಟು ಸುಂಕ ವಿಧಿಸಲಾಗಿದ್ದೂ ಇದರ ರಫ್ತು ಇಳಿಕೆಗೆ ಇನ್ನೊಂದು ಪ್ರಮುಖ ಕಾರಣ ಎನ್ನಲಾಗಿದೆ.

ಇನ್ನು, ಅಮೆರಿಕ ಮತ್ತು ಐರೋಪ್ಯ ಒಕ್ಕೂಟದ ದೇಶಗಳಲ್ಲಿ ಈ ಬಾರಿ ಸರಕು ಸಂಗ್ರಹ ಹೆಚ್ಚಾಗಿರುವುದರಿಂದ ಭಾರತದಿಂದ ಅಲ್ಲಿಗೆ ಹೆಚ್ಚು ಸರಕುಗಳ ರಫ್ತಾಗಿಲ್ಲ. ಇಲ್ಲಿಯ ಸರಕುಗಳು ಖಾಲಿಯಾಗಲು ಈ ಅಕ್ಟೋಬರ್ ತಿಂಗಳವರೆಗೂ ಕಾಯಬೇಕು. ಡಿಸೆಂಬರ್ ನಂತರ ಇಲ್ಲಿ ಬೇಡಿಕೆ ಹೆಚ್ಚುವ ನಿರೀಕ್ಷೆ ಇದೆ.

ಇನ್ನು, ಯುಎಇ ಮತ್ತು ಸೌದಿಯಲ್ಲಿ ಹಣದುಬ್ಬರ ಹೆಚ್ಚಳವಾಗುತ್ತಿರುವ ಕಾರಣಕ್ಕೆ ಭಾರತದಿಂದ ಈ ದೇಶಗಳಿಗೆ ಜವಳಿ ರಫ್ತು ಕುಗ್ಗಿದೆ. ಆಸ್ಟ್ರೇಲಿಯಾಗೂ ರಫ್ತು ಕಡಿಮೆ ಆಗಿದೆ. ಆದರೆ, ವಿವಿಧ ರೀತಿಯ ಉತ್ಪನ್ನಗಳನ್ನು ಒಳಗೊಂಡರೆ ಇಲ್ಲಿಯ ಮಾರುಕಟ್ಟೆಯಲ್ಲಿ ಬೇಡಿಕೆ ಪಡೆಯಬಹುದು ಎಂಬ ನಿರೀಕ್ಷೆ ಇದೆ.

ಇರಾಕ್ ಮಾರುಕಟ್ಟೆಗೆ ಭಾರತದ ಅಕ್ಕಿಗೆ ಬೇಡಿಕೆ ಕಡಿಮೆ ಆಗಿದೆ. ಬ್ರಿಟನ್ ಮತ್ತು ಬಾಂಗ್ಲಾದೇಶ ಮಾರುಕಟ್ಟೆಗಳಲ್ಲೂ ಭಾರತದ ಹಣ್ಣು ತರಕಾರಿಗಳಿಗೆ ಡಿಮ್ಯಾಂಡ್ ತಗ್ಗಿದೆ.

ಇದರ ಜೊತೆಗೆ, ಅಮೆರಿಕದಂಥ ದೊಡ್ಡ ದೇಶಗಳ ಆರ್ಥಿಕತೆ ಮಂದವಾಗಿರುವುದೂ ಭಾರತದ ರಫ್ತು ಕಡಿಮೆ ಆಗಲು ಒಂದು ಕಾರಣ. ಇದರ ಜೊತೆಗೆ ಭಾರತದಲ್ಲಿ ಹಣದುಬ್ಬರ ಇಳಿಸಲು ಮತ್ತು ಆಹಾರ ಅಭಾವ ನಿವಾರಿಸಲು ಕೈಗೊಂಡ ಕ್ರಮಗಳೂ ಕೂಡ ರಫ್ತು ವಹಿವಾಟಿನ ಮೇಲೆ ಪರಿಣಾಮ ಬೀರಿವೆ ಎಂಬುದು ಉದ್ಯಮ ತಜ್ಞರ ಅನಿಸಿಕೆ.

ಭಾರತದ ಗುರಿ ಎಷ್ಟು?

ಭಾರತದ ಗುರಿ ಎಷ್ಟು?

ಭಾರತದ ವಾಣಿಜ್ಯ ಸಚಿವಾಲಯವು 2022-23ರ ಹಣಕಾಸು ವರ್ಷದಲ್ಲಿ 470 ಬಿಲಿಯನ್ ಡಾಲರ್‌ನಷ್ಟು (ಸುಮಾರು 38 ಲಕ್ಷ ಕೋಟಿ ರೂ) ಮೊತ್ತದ ರಫ್ತು ಮಾಡಲು ಗುರಿ ಇಟ್ಟುಕೊಂಡಿದೆ. ಈ ಹಣಕಾಸು ವರ್ಷದ ಮೊದಲಾರ್ಧದಲ್ಲಿ, ಅಂದರೆ 2022ರ ಏಪ್ರಿಲ್‌ನಿಂದ ಸೆಪ್ಟೆಂಬರ್‌ವರೆಗಿನ ಅವಧಿಯಲ್ಲಿ ರಫ್ತು 229.05 ಡಾಲರ್‌ನಷ್ಟು (ಸುಮಾರು 18.8 ಲಕ್ಷ ಕೋಟಿ ರೂ) ಆಗಿದೆ. ಕಳೆದ ವರ್ಷದ ಸೆಪ್ಟೆಂಬರ್‌ಗೆ ಹೋಲಿಸಿದರೆ ಈ ವರ್ಷದ ಸೆಪ್ಟೆಂಬರ್‌ನಲ್ಲಿ ರಫ್ತು ಶೇ. 3.52ರಷ್ಟು ಕಡಿಮೆ ಆಗಿದೆಯಾದರೂ, ಕಳೆದ ಹಣಕಾಸು ವರ್ಷದ ಮೊದಲಾರ್ಧಕ್ಕೆ ಹೋಲಿಸಿದರೆ ಈ ಬಾರಿ ರಫ್ತು ಶೇ. 15.54ರಷ್ಟು ಏರಿರುವುದು ಗಮನಾರ್ಹ.

ಅಲ್ಲದೇ, ಡಿಸೆಂಬರ್ ನಂತರ ಒಂದಷ್ಟು ದೇಶಗಳಿಗೆ ಭಾರತದ ರಫ್ತು ಹೆಚ್ಚಾಗುವ ನಿರೀಕ್ಷೆ ಇದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+