ಭಾರತದ 'ಬಿಗ್ ಬುಲ್' ಎಂದು ಖ್ಯಾತಿಯಾದ ದಿವಂಗತ ಹೂಡಿಕೆದಾರ ರಾಕೇಶ್ ಜುಂಜುನ್‌ವಾಲಾ ಪ್ರಭಾವಶಾಲಿ ಸ್ಟಾಕ್ ಪೋರ್ಟ್‌ಪೋಲಿಯೋವನ್ನು ಹೊಂದಿದ್ದರು. ರಾಕೇಶ್ ಜುಂಜುನ್‌ವಾಲ್‌ರ ನಿಧನದ ನಂತರ, ಪತ್ನಿ ರೇಖಾ ಜುಂಜುನ್‌ವಾಲಾ ಕುಟುಂಬದ ಹೂಡಿಕೆ ಸಾಮ್ರಾಜ್ಯವನ್ನು ಮುಂದುವರಿಸಿದ್ದಾರೆ. ಇತ್ತೀಚೆಗೆ ಟಾಟಾ-ಮಾಲೀಕತ್ವದ ಕಂಪನಿಯ ಷೇರುಗಳಲ್ಲಿ ಹೂಡಿಕೆ ಮಾಡುವ ಮೂಲಕ ರೇಖಾ ಭಾರೀ ಲಾಭವನ್ನು ಪಡೆದುಕೊಂಡಿದ್ದಾರೆ.
ರೇಖಾ ಜುಂಜುನ್‌ವಾಲಾ ಇತ್ತೀಚೆಗೆ ತಮ್ಮ ಪೋರ್ಟ್‌ಫೋಲಿಯೊದಲ್ಲಿನ ಪ್ರಮುಖ ಸ್ಟಾಕ್‌ಗಳಲ್ಲಿ ಒಂದಾದ ಟೈಟಾನ್ ಕಂಪನಿ ಲಿಮಿಟೆಡ್‌ನ ಸ್ಟಾಕ್‌ನಿಂದ 1390 ಕೋಟಿ ರೂಪಾಯಿಗಳನ್ನು ಗಳಿಸಿದ್ದಾರೆ. ಟೈಟಾನ್ ಕಂಪನಿ ಲಿಮಿಟೆಡ್ ಉದ್ಯಮಿ ರತನ್ ಟಾಟಾ ನೇತೃತ್ವದಲ್ಲಿ ಟಾಟಾ ಗ್ರೂಪ್ ಒಡೆತನದ ಮತ್ತು ನಿರ್ವಹಣೆಯ ವಾಚ್ ಕಂಪನಿಯಾಗಿದೆ.

ರೇಖಾ ಜುಂಜುನ್‌ವಾಲಾರ ಸ್ಟಾಕ್ ಪೋರ್ಟ್‌ಫೋಲಿಯೊದಲ್ಲಿರುವ ಷೇರುಗಳ ಪೈಕಿ ಟೈಟಾನ್ ಹೆಚ್ಚು ಲಾಭದಾಯಕ ಷೇರುಗಳಲ್ಲಿ ಒಂದಾಗಿದೆ. ಈ ಸ್ಟಾಕ್ ಮಾರ್ಚ್ 2023 ರಿಂದ ಅಪ್‌ಟ್ರೆಂಡ್‌ನಲ್ಲಿದೆ. ಈ ಸ್ಟಾಕ್‌ನಲ್ಲಿ ಹೂಡಿಕೆ ಮಾಡಿದ ಎಲ್ಲಾ ಹೂಡಿಕೆದಾರರಿಗೆ ಪ್ರಮುಖ ಆದಾಯವನ್ನು ಸ್ಟಾಕ್ ನೀಡುತ್ತಿದೆ. ಈ ಟಾಟಾ ಗ್ರೂಪ್ ಕಂಪನಿಯ ಸ್ಟಾಕ್ ಮಾರ್ಚ್ ಮಧ್ಯದಲ್ಲಿ ಸುಮಾರು 2,355 ರೂಪಾಯಿ ಮಟ್ಟಕ್ಕೆ ಇಳಿದಿದೆ. ಅದರ ನಂತರ ನಿರಂತರವಾಗಿ ಚೇತರಿಕೆ ಕಾಣುತ್ತಾ ಬಂದಿದೆ.
ಸ್ಟಾಕ್‌ನ ಇಂದಿನ ಬೆಲೆ ಎಷ್ಟಿದೆ?
ಈಗ, ಈ ರೇಖಾ ಜುಂಜುನ್‌ವಾಲಾ ಪೋರ್ಟ್‌ಫೋಲಿಯೊ ಸ್ಟಾಕ್ ಷೇರು ಮಾರುಕಟ್ಟೆಯಲ್ಲಿ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿದೆ. ಪ್ರತಿ ಷೇರಿನ ದರವು 3300 ರೂಪಾಯಿಗೂ ಅಧಿಕವಾಗಿದೆ. ಟೈಟಾನ್‌ನ ಷೇರಿನ ಬೆಲೆಯು ಕಳೆದ ತಿಂಗಳ ಅವಧಿಯಲ್ಲಿ ಪ್ರತಿ ಷೇರಿಗೆ 3,010.65 ರೂಪಾಯಿ ಆಗಿತ್ತು. ಈಗ 3,302.45 ರೂಪಾಯಿಗೆ ಏರಿಕೆಯಾಗಿದೆ. ಈ ಸಮಯಕ್ಕೆ ಷೇರು ಶೇಕಡ 0.46ರಷ್ಟು ಕುಸಿದು, 3,246.20 ರೂಪಾಯಿ ಆಗಿದೆ.
ರೇಖಾ ಜುಂಜುನ್‌ವಾಲಾ ಗಳಿಸುವುದೆಷ್ಟು?
ಕಳೆದ ತಿಂಗಳ ಅವಧಿಯಲ್ಲಿ ಟೈಟಾನ್ ಕಂಪನಿಯ ಷೇರಿನ ಬೆಲೆಯಲ್ಲಿನ ಭಾರೀ ಏರಿಕೆಯಿಂದಾಗಿ ರೇಖಾ ಜುಂಜುನ್‌ವಾಲಾ ಕೇವಲ 30 ದಿನಗಳಲ್ಲಿ 1390 ಕೋಟಿ ರೂಪಾಯಿಗಳನ್ನು ಗಳಿಸಿದ್ದಾರೆ. ರೇಖಾ ಜುಂಜುನ್‌ವಾಲಾ ಟೈಟಾನ್ ಕಂಪನಿಯ 4,75,95,970 ಷೇರುಗಳನ್ನು ಹೊಂದಿದ್ದಾರೆ. ಇದು ಕಂಪನಿಯ ಒಟ್ಟು ಷೇರುಗಳ ಶೇಕಡ 5.36 ರಷ್ಟಾಗಿದೆ. ಟೈಟಾನ್‌ನ ಪ್ರತಿ ಷೇರುಗಳು 291.80 ರೂಪಾಯಿಗಳ ಏರಿಕೆಯಿಂದಾಗಿ, ರೇಖಾ ಜುಂಜುನ್‌ವಾಲಾರ ನಿವ್ವಳ ಮೌಲ್ಯವು 1390 ರೂಪಾಯಿಗಳನ್ನು (4,75,95,970 x 291.80) ಹೆಚ್ಚಾಗಿದೆ.
ಒಂದೇ ಸ್ಟಾಕ್, 2 ತಿಂಗಳವರೆಗೆ ಪ್ರತಿ ದಿನ 40 ಕೋಟಿ ಗಳಿಕೆ!
ಮೇ, ಏಪ್ರಿಲ್ ಅವಧಿಯಲ್ಲಿ ಟೈಟಾನ್ ಷೇರುಗಳು 65 ಪ್ರತಿಶತದಷ್ಟು ಏರಿಕೆಯಾದ ಪರಿಣಾಮ ಅದರ ಷೇರುದಾರರು ಉತ್ತಮ ರಿಟರ್ನ್ಸ್ ಗಳಿಸಿದ್ದಾರೆ. ಹೀಗೆ ಷೇರು ಮಾರುಕಟ್ಟೆಯಲ್ಲಿ ಲಾಭ ಗಳಿಸಿದವರಲ್ಲಿ ಭಾರತದ ಶ್ರೀಮಂತ ಮಹಿಳೆ ರೇಖಾ ಜುಂಜುನ್‌ವಾಲಾ ಕೂಡಾ ಒಬ್ಬರಾಗಿದ್ದಾರೆ. ಎರಡು ತಿಂಗಳಿನಿಂದ ಬರೋಬ್ಬರಿ 2400 ಕೋಟಿ ಗಳಿಸಿದ್ದಾರೆ. ಅಂದರೆ ದಿನವೊಂದಕ್ಕೆ 40 ಕೋಟಿ ರೂಪಾಯಿ ಗಳಿಸಿದಂತೆ ಆಗಿದೆ.


Click it and Unblock the Notifications