ತೈಲದಿಂದ ಟೆಲಿಕಾಂ ತನಕ ವ್ಯವಹಾರ ನಡೆಸುವ ರಿಲಯನ್ಸ್ ಇಂಡಸ್ಟ್ರೀಸ್ 53 ಸಾವಿರ ಕೋಟಿ ರುಪಾಯಿ ಸಂಗ್ರಹಿಸಲು ಮುಂದಾಗಿದೆ. ಅದರ ಈಗಿನ ಷೇರುದಾರರಿಂದ ರೈಟ್ಸ್ ಇಷ್ಯೂ (ಹಕ್ಕಿನ ಷೇರು) ಮೂಲಕ ಹಣ ಸಂಗ್ರಹಿಸಲಿದೆ ಎಂದು ಗುರುವಾರ ಕಂಪೆನಿ ತಿಳಿಸಿದೆ. 10 ರುಪಾಯಿಯ ಷೇರನ್ನು ರೈಟ್ಸ್ ಇಷ್ಯೂ ಮೂಲಕ ಅರ್ಹ ಷೇರುದಾರರಿಗೆ ವಿತರಿಸಲಿದೆ. 53,125 ಕೋಟಿ ರುಪಾಯಿ ಕೋಟಿ ಸಂಗ್ರಹ ಮಾಡಲಿದೆ.
ರಿಲಯನ್ಸ್ ಇಂಡಸ್ಟ್ರೀಸ್ ಕಂಪೆನಿಯ ಒಟ್ಟಾರೆ ಲಾಭ ಮಾರ್ಚ್ ತ್ರೈಮಾಸಿಕ ಅಂತ್ಯಕ್ಕೆ 6,348 ಕೋಟಿ ರುಪಾಯಿ ಅಂತ ವರದಿ ಆಗಿದೆ. ಕಳೆದ ವರ್ಷ ಇದೇ ತ್ರೈಮಾಸಿಕಕ್ಕೆ ಹೋಲಿಸಿದರೆ ಲಾಭದ ಪ್ರಮಾಣ 38.73 ಪರ್ಸೆಂಟ್ ಇಳಿಕೆಯಾಗಿದೆ.
ಸದ್ಯಕ್ಕೆ ಮಾರಾಟ ಆಗುತ್ತಿರುವ ಮಾರ್ಕೆಟ್ ಬೆಲೆಗಿಂತ 210 ರುಪಾಯಿ ಕಡಿಮೆ ಬೆಲೆಗೆ, ಅಂದರೆ 14 ಪರ್ಸೆಂಟ್ ರಿಯಾಯಿತಿ ದರದಲ್ಲಿ 1257 ರುಪಾಯಿಗೆ ವಿತರಿಸಲಿದೆ. ರೆಕಾರ್ಡ್ ದಿನಾಂಕದ ಹೊತ್ತಿಗೆ ಅರ್ಹ ಷೇರುದಾರರು ತಾವು ಹೊಂದಿರುವ ಪ್ರತಿ 15 ಷೇರಿಗೆ 1 ಷೇರಿಗೆ ಅರ್ಜಿ ಹಾಕಬಹುದು.

ಜಿಯೋ ಪ್ಲಾಟ್ ಫಾರ್ಮ್ಸ್ ನಲ್ಲಿ ಫೇಸ್ ಬುಕ್ 43,600 ಕೋಟಿ ರುಪಾಯಿ ಹೂಡಿಕೆ ಘೋಷಣೆ ಬೆನ್ನಿಗೆ ಮಾರ್ಚ್ 2021ರ ಹೊತ್ತಿಗೆ ರಿಲಯನ್ಸ್ ಇಂಡಸ್ಟ್ರಿಯ ಸಾಲವನ್ನು ಸಂಪೂರ್ಣ ತೀರಿಸಲು ಮುಂದಾಗಿದೆ. ರೈಟ್ಸ್ ಇಷ್ಯೂ ಅಂದರೆ ಹಕ್ಕಿನ ಷೇರು ವಿತರಣೆ ಎಂಬರ್ಥ.
ರೆಕಾರ್ಡ್ ದಿನಾಂಕ ಎಂದು ದಿನ ನಿಗದಿಪಡಿಸಲಾಗುತ್ತದೆ. ಆ ದಿನಕ್ಕೆ ಯಾರ ಬಳಿ ಷೇರು ಇರುತ್ತದೋ ಅಂಥವರು ಅರ್ಜಿ ಹಾಕಬಹುದು. ತಮ್ಮ ಬಳಿ ಇರುವ ರಿಲಯನ್ಸ್ ನ ಪ್ರತಿ 15 ಷೇರಿಗೆ 1ರಂತೆ ಅವರಿಗೆ ದೊರೆಯುತ್ತದೆ. ಅದಕ್ಕೆ ಪ್ರತಿ ಷೇರಿಗೆ 1257 ರುಪಾಯಿ ಪಾವತಿ ಮಾಡಬೇಕಾಗುತ್ತದೆ. ರಿಲಯನ್ಸ್ ಇಂಡಸ್ಟ್ರೀಸ್ ಈಗಿನ ಮಾರುಕಟ್ಟೆ ಬೆಲೆ (ಏಪ್ರಿಲ್ 30, 2020) ಬಿಎಸ್ ಇಯಲ್ಲಿ ರು. 1467.05 ಇದೆ.
More From GoodReturns

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

New Airport: ಕಲ್ಯಾಣ ಕರ್ನಾಟಕ ಜನರಿಗೆ ಗುಡ್ನ್ಯೂಸ್; ಈ ಭಾಗದಲ್ಲಿ ಹೊಸ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಚಿಂತನೆ

Hosur Airport: ಬೆಂಗಳೂರು ಹತ್ತಿರ ಹೊಸೂರು ಏರ್ಪೋರ್ಟ್ಗಾಗಿ 2,979 ಎಕರೆ ಭೂಸ್ವಾಧೀನ-ಎಲ್ಲೆಂದು ತಿಳಿಯಿರಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ



Click it and Unblock the Notifications