ಮುಕೇಶ್ ಅಂಬಾನಿ ಒಡೆತನದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಡಿಸೆಂಬರ್ 31, 2019ಕ್ಕೆ ಕೊನೆಯಾದ ಮೂರನೇ ತ್ರೈಮಾಸಿಕದಲ್ಲಿ ಒಟ್ಟಾರೆ 11,640 ಕೋಟಿ ರುಪಾಯಿ ನಿವ್ವಳ ಲಾಭ ಗಳಿಸಿದೆ. ಕಳೆದ ವರ್ಷ ಇದೇ ತ್ರೈಮಾಸಿಕದ ಕೊನೆಗೆ 10,251 ಕೋಟಿ ರುಪಾಯಿ ಲಾಭ ಗಳಿಕೆ ಆಗಿತ್ತು. ಆ ಮೂಲಕ 13.55% ಏರಿಕೆ ದಾಖಲಿಸಿದೆ.
ಕಾರ್ಯ ಚಟುವಟಿಕೆ ಮೂಲಕ ಬಂದ ಆದಾಯವು 1.57 ಲಕ್ಷ ಕೋಟಿ ಇದ್ದು, ವರ್ಷದಿಂದ ವರ್ಷಕ್ಕೆ ಹೋಲಿಸಿದರೆ 2.49% ಇಳಿಕೆಯಾಗಿದೆ. ರಿಲಯನ್ಸ್ ಇಂಡಸ್ಟ್ರಿಯೊಂದನ್ನೇ ಲೆಕ್ಕಕ್ಕೆ ತೆಗೆದುಕೊಂಡರೆ 9,585 ಕೋಟಿ ರುಪಾಯಿ ಲಾಭವಾಗಿದೆ. ಕಳೆದ ವರ್ಷ ಇದೇ ತ್ರೈಮಾಸಿಕದ ಅವಧಿಗೆ 8,928 ಕೋಟಿ ರುಪಾಯಿ ಲಾಭ ಮಾಡಿತ್ತು.
ರಿಲಯನ್ಸ್ ಒಟ್ಟಾರೆ ಮಾರಾಟವು 1.42 ಲಕ್ಷ ಕೋಟಿ ರುಪಾಯಿ ಆಗಬಹುದು. ನಿವ್ವಳ ಲಾಭ ಅಂದಾಜು 11,181 ಕೋಟಿ ಎಂದು ಬ್ಲೂಮ್ ಬರ್ಗ್ ಸಮೀಕ್ಷೆ ತಿಳಿಸಿತ್ತು. ಪೆಟ್ರೋಕೆಮಿಕಲ್ಸ್ ಮೂಲಕ ಬಂದ ಆದಾಯವೇ 36,909 ಕೋಟಿ ರುಪಾಯಿ ಇದೆ. ಶುಕ್ರವಾರದಂದು ರಿಲಯನ್ಸ್ ಇಂಡಸ್ಟ್ರೀಸ್ ಷೇರುಗಳು 2.7 ಪರ್ಸೆಂಟ್ ಹೆಚ್ಚಳವಾಗಿ 1,580.65 ರುಪಾಯಿಗೆ ದಿನಾಂತ್ಯದ ವಹಿವಾಟು ಮುಗಿಸಿತು.

ಹಬ್ಬದ ವಹಿವಾಟಿನ ಕಾರಣಕ್ಕೆ ರಿಲಯನ್ಸ್ ರೀಟೇಲ್ ವ್ಯವಹಾರದಲ್ಲೂ ಅತ್ಯುತ್ತಮ ಏರಿಕೆ ಆಗಿದೆ. ದೇಶದಾದ್ಯಂತ ರೀಟೇಲ್ ಪೆಟ್ರೋಲ್ ಮಾರಾಟ ಆರಂಭಿಸುವುದಕ್ಕೆ ಬಿ.ಪಿ. ಜತೆಗೆ ಸಹಭಾಗಿತ್ವವನ್ನು ರಿಲಯನ್ಸ್ ಘೋಷಿಸಿದೆ.


Click it and Unblock the Notifications