ಅರ್ಬನ್ ಲ್ಯಾಡರ್, ಮಿಲ್ಕ್ ಬ್ಯಾಸ್ಕೆಟ್ ಖರೀದಿಗೆ ರಿಲಯನ್ಸ್ ಮಾತುಕತೆ !

ಆನ್ ಲೈನ್ ಫರ್ನೀಚರ್ ಮಾರಾಟಗಾರ ಕಂಪೆನಿ ಅರ್ಬನ್ ಲ್ಯಾಡರ್ ಹಾಗೂ ಹಾಲು ಡೆಲಿವರಿ ಮಾಡುವ ಮಿಲ್ಕ್ ಬ್ಯಾಸ್ಕೆಟ್ ಖರೀದಿ ಮಾಡಲು ರಿಲಯನ್ಸ್ ಇಂಡಸ್ಟ್ರೀಸ್ ನಿಂದ ಮಾತುಕತೆ ನಡೆಯುತ್ತಿದೆ. ಆ ಮೂಲಕ ಇ ಕಾಮರ್ಸ್ ವ್ಯವಹಾರ ಬಲಗೊಳಿಸುವ ಉದ್ದೇಶವನ್ನು ರಿಲಯನ್ಸ್ ಹೊಂದಿದೆ ಎಂದು ಸೋಮವಾರ ಮಾಧ್ಯಮಗಳಲ್ಲಿ ವರದಿ ಆಗಿದೆ.

ಅರ್ಬನ್ ಲ್ಯಾಡರ್ ಜತೆಗೆ ರಿಲಯನ್ಸ್ ಮಾತುಕತೆ ಮೇಲಿನ ಹಂತವನ್ನು ತಲುಪಿಕೊಂಡಿದೆ ಎಂದು ವರದಿಯಾಗಿದೆ. 3 ಕೋಟಿ ಅಮೆರಿಕನ್ ಡಾಲರ್ ಗೆ ಈ ವ್ಯವಹಾರ ಆಗಬಹುದು ಎಂದು ಮೂಲಗಳು ತಿಳಿಸಿವೆ. ಇನ್ನು ವರದಿ ಕುರಿತಂತೆ ರಿಲಯನ್ಸ್, ಅರ್ಬನ್ ಲ್ಯಾಡರ್ ಅಥವಾ ಮಿಲ್ಕ್ ಬ್ಯಾಸ್ಕೆಟ್ ನಿಂದ ಯಾವುದೇ ಪ್ರತಿಕ್ರಿಯೆ ತಕ್ಷಣಕ್ಕೆ ದೊರೆತಿಲ್ಲ.

ಕೊರೊನಾ ಹಿನ್ನೆಲೆಯಲ್ಲಿ ಭಾರತೀಯರು ದಿನಸಿಯಿಂದ ಮೊದಲುಗೊಂಡು ನಿತ್ಯದ ಅಗತ್ಯಗಳಾದ ಹಾಲು ಮತ್ತಿತರ ಪದಾರ್ಥಗಳನ್ನು ಆನ್ ಲೈನ್ ಮೂಲಕವೇ ಶಾಪಿಂಗ್ ಮಾಡುತ್ತಿದ್ದಾರೆ. ಇನ್ನು ಆನ್ ಲೈನ್ ದಿನಸಿ ಸೇವೆ ಒದಗಿಸುವ ಜಿಯೋ ಮಾರ್ಟ್ ಅನ್ನು ರಿಲಯನ್ಸ್ ನಿಂದ ಕಳೆದ ಮೇ ತಿಂಗಳಲ್ಲಿ ಆರಂಭಿಸಲಾಗಿದೆ. ಆ ಮೂಲಕ ಇ ಕಾಮರ್ಸ್ ಪ್ರತಿಸ್ಪರ್ಧಿಗಳಾದ ಅಮೆಜಾನ್ ಮತ್ತು ಫ್ಲಿಪ್ ಕಾರ್ಟ್ ಜತೆಗೆ ಸ್ಪರ್ಧೆಗೆ ಇಳಿದಿದೆ.

ಅರ್ಬನ್ ಲ್ಯಾಡರ್, ಮಿಲ್ಕ್ ಬ್ಯಾಸ್ಕೆಟ್ ಖರೀದಿಗೆ ರಿಲಯನ್ಸ್ ಮಾತುಕತೆ !

ಮುಕೇಶ್ ಅಂಬಾನಿ ನೇತೃತ್ವದಲ್ಲಿ ರಿಲಯನ್ಸ್ ಅಂಗ ಸಂಸ್ಥೆಯಾದ ಜಿಯೋ ಪ್ಲಾಟ್ ಫಾರ್ಮ್ ಗೆ ಫೇಸ್ ಬುಕ್ ನಿಂದ ಆಲ್ಫಾಬೆಟ್ ನ ಗೂಗಲ್ ತನಕ ಕಳೆದ ಕೆಲವು ತಿಂಗಳಲ್ಲಿ 2000 ಕೋಟಿ ಡಾಲರ್ ಗೂ ಹೆಚ್ಚು ಸಂಗ್ರಹ ಮಾಡಲಾಗಿದೆ.

ಈ ಮಧ್ಯೆ, ಮಿಲ್ಕ್ ಬ್ಯಾಸ್ಕೆಟ್ ನಿಂದ ಅಮೆಜಾನ್ ಮತ್ತು ಅಲಿಬಾಬ ನೆರವಿರುವ ಬಿಗ್ ಬ್ಯಾಸ್ಕೆಟ್ ಜತೆಗೆ ಮಾತುಕತೆ ನಡೆದಿದೆ. ಆದರೆ ನಿರೀಕ್ಷೆ ಮಾಡಿದಂತೆ ಮೌಲ್ಯಮಾಪನ ಆಗದ ಹಿನ್ನೆಲೆಯಲ್ಲಿ ಈ ವ್ಯವಹಾರ ಮುಂದುವರಿದಿಲ್ಲ ಎಂದು ಮೂಲಗಳು ತಿಳಿಸಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+