ಭಾರತದ ಹತ್ತು ಮೌಲ್ಯಯುತ ಕಂಪೆನಿಗಳಲ್ಲಿ 7ರ ಮಾರುಕಟ್ಟೆ ಬಂಡವಾಳ ಮೌಲ್ಯವು ಜುಲೈ 20ರಿಂದ 24ರ ಮಧ್ಯೆ 2,03,063.21 ಕೋಟಿ ರುಪಾಯಿ (2 ಲಕ್ಷ ಕೋಟಿ) ಹೆಚ್ಚಳವಾಗಿದೆ. ಇದರಲ್ಲಿ ಅತಿ ದೊಡ್ಡ ಕೊಡುಗೆ ನೀಡಿರುವುದು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್.
ಏರಿಕೆ ಕಂಡ ಕಂಪೆನಿಗಳು ಹೀಗಿವೆ: ರಿಲಯನ್ಸ್, ಎಚ್ ಡಿಎಫ್ ಸಿ ಬ್ಯಾಂಕ್, ಇನ್ಫೋಸಿಸ್, ಎಚ್ ಡಿಎಫ್ ಸಿ, ಕೊಟಕ್ ಮಹೀಂದ್ರಾ ಬ್ಯಾಂಕ್, ಐಸಿಐಸಿಐ ಬ್ಯಾಂಕ್ ಹಾಗೂ ಐಟಿಸಿ.
ಇನ್ನು ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (ಟಿಸಿಎಸ್), ಹಿಂದೂಸ್ತಾನ್ ಯುನಿಲಿವರ್ ಲಿಮಿಟೆಡ್ ಹಾಗೂ ಭಾರ್ತಿ ಏರ್ ಟೆಲ್ ಕಂಪೆನಿಗಳ ಮಾರುಕಟ್ಟೆ ಬಂಡವಾಳ ಮೌಲ್ಯದಲ್ಲಿ ಇಳಿಕೆ ಆಗಿದೆ.

ರಿಲಯನ್ಸ್ ಇಂಡಸ್ಟ್ರೀಸ್ ಕಂಪೆನಿಯೊಂದರ ಮಾರುಕಟ್ಟೆ ಬಂಡವಾಳ ಮೌಲ್ಯವೇ 1,48,880.91 ಕೋಟಿ ರುಪಾಯಿ ಹೆಚ್ಚಳವಾಗಿದೆ (1.48 ಲಕ್ಷ ಕೋಟಿ). ಆ ಮೂಲಕ ಒಟ್ಟಾರೆ ಬಂಡವಾಳ ಮೌಲ್ಯವು 13,60,562.99 ಕೋಟಿ ರುಪಾಯಿಗೆ ತಲುಪಿದೆ. ಅಮೆಜಾನ್ ನಿಂದ ರಿಲಯನ್ಸ್ ಜಿಯೋ ಮಾರ್ಟ್ ನ ಷೇರು ಪಾಲನ್ನು ಖರೀದಿ ಮಾಡಲು ಮಾತುಕತೆ ನಡೆದಿದೆ ಎಂಬ ಸುದ್ದಿ ಹಿನ್ನೆಲೆಯಲ್ಲಿ ಭರ್ಜರಿ ಏರಿಕೆ ದಾಖಲಿಸಿತು.
ಮಾರುಕಟ್ಟೆ ಬಂಡವಾಳ ಹೆಚ್ಚಳವಾದ ಕಂಪೆನಿಗಳು
ಐಸಿಐಸಿಐ ಬ್ಯಾಂಕ್ 18,135.55 ಕೋಟಿ
ಎಚ್ ಡಿಎಫ್ ಸಿ ಬ್ಯಾಂಕ್ 10,788.4 ಕೋಟಿ
ಇನ್ಫೋಸಿಸ್ 7,935.1 ಕೋಟಿ
ಐಟಿಸಿ 7006.57 ಕೋಟಿ
ಎಚ್ ಡಿಎಫ್ ಸಿ 6,062.45 ಕೋಟಿ
ಕೊಟಕ್ ಮಹೀಂದ್ರಾ ಬ್ಯಾಂಕ್ 4,254.43 ಕೋಟಿ
ಮಾರುಕಟ್ಟೆ ಬಂಡವಾಳ ಮೌಲ್ಯ ಇಳಿಕೆ ಕಂಡ ಕಂಪೆನಿಗಳು
ಹಿಂದೂಸ್ತಾನ್ ಯುನಿಲಿವರ್ 29,040.44 ಕೋಟಿ
ಟಿಸಿಎಸ್ 16,623.07 ಕೋಟಿ
ಭಾರ್ತಿ ಏರ್ ಟೆಲ್ 4,118.95 ಕೋಟಿ
ಕಳೆದ ವಾರ ಸೆನ್ಸೆಕ್ಸ್ ಸೂಚ್ಯಂಕವು 1.108.76 ಪಾಯಿಂಟ್ ಗಳಿಕೆ ಕಂಡಿದೆ.


Click it and Unblock the Notifications