ಏಷ್ಯನ್ ಪೇಂಟ್ಸ್ ಕಂಪೆನಿಯಲ್ಲಿನ ಪಾಲು ಮಾರಲಿದೆಯಾ ರಿಲಯನ್ಸ್?

ಭಾರತದ ಅತಿ ದೊಡ್ಡ ಪೇಂಟ್ ತಯಾರಕ ಕಂಪೆನಿ ಏಷ್ಯನ್ ಪೇಂಟ್ಸ್ ನಲ್ಲಿ ಇರುವ ರಿಲಯನ್ಸ್ ಇಂಡಸ್ಟ್ರಿ ಪಾಲನ್ನು ಮಾರಾಟ ಮಾಡಲು ಮುಂದಾಗಿದೆ. ಈ ಷೇರಿನ ಮೌಲ್ಯವು 7500 ಕೋಟಿ ರುಪಾಯಿಯಷ್ಟು ಎಂದು ಅಂದಾಜು ಮಾಡಲಾಗಿದ್ದು, ರಿಲಯನ್ಸ್ ತನ್ನ ಸಾಲವನ್ನು ತೀರಿಸಲು ಈ ಹಣವನ್ನು ಬಳಸಲಿದೆ ಎಂದು ಈ ಬೆಳವಣಿಗೆ ಬಗ್ಗೆ ಮಾಹಿತಿ ಇರುವ ಮೂಲಗಳು ತಿಳಿಸಿವೆ.

ಏಷ್ಯನ್ ಪೇಂಟ್ಸ್ ಕಂಪೆನಿಯಲ್ಲಿ ಇರುವ ಶೇಕಡಾ 4.9% ಪಾಲನ್ನು ಮಾರಾಟ ಮಾಡಲು ಬ್ಯಾಂಕ್ ಗಳ ಜತೆಗೆ ರಿಲಯನ್ಸ್ ಮಾತುಕತೆ ನಡೆಸುತ್ತಿದೆ. ಸರಣಿ ಬ್ಲಾಕ್ ವ್ಯವಹಾರಗಳ ಮೂಲಕ (ದೊಡ್ಡ ಸಂಖ್ಯೆಯಲ್ಲಿ ಷೇರುಗಳ ಮಾರಾಟ) ನಗದು ಸಂಗ್ರಹಿಸಲು ಮುಂದಾಗಿದೆ ಎಂದು ಹೆಸರು ಹೇಳಲಿಚ್ಛಿಸದ ವ್ಯಕ್ತಿಯೊಬ್ಬರು ತಿಳಿಸಿದ್ದಾರೆ. ಸದ್ಯಕ್ಕೆ ಈ ವಿಚಾರ ಸಾರ್ವಜನಿಕವಾಗಿಲ್ಲ.

ಎಷ್ಟು ಷೇರುಗಳು ಮತ್ತು ಯಾವ ಸಮಯದಲ್ಲಿ ಮಾರಾಟ ಮಾಡಬೇಕು ಎಂಬುದು ಅಂತಿಮವಾಗಿಲ್ಲ. ಅಲ್ಲಿಯ ತನಕ ಮಾರಾಟದ ವಿಚಾರದಲ್ಲಿ ಮುಂದುವರಿಯುವುದು ಬೇಡ ಎಂದು ರಿಲಯನ್ಸ್ ತೀರ್ಮಾನಿಸಿದೆ ಎಂಬುದು ಸದ್ಯಕ್ಕೆ ಹೊರಬಂದಿರುವ ಮಾಹಿತಿ. ಆದರೆ ಈ ವಿಚಾರಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಲು ಕಂಪೆನಿಯ ವಕ್ತಾರರು ನಿರಾಕರಿಸಿದ್ದಾರೆ.

ಏಷ್ಯನ್ ಪೇಂಟ್ಸ್ ಕಂಪೆನಿಯಲ್ಲಿನ ಪಾಲು ಮಾರಲಿದೆಯಾ ರಿಲಯನ್ಸ್?

ಏಷ್ಯನ್ ಪೇಂಟ್ಸ್ ಷೇರಿನ ಬೆಲೆಯು ಗುರುವಾರದಂದು (ಮೇ 7, 2020) 1 ಪರ್ಸೆಂಟ್ ಇಳಿಕೆಯಾಗಿ, 1594.3 ರುಪಾಯಿಗೆ ವಹಿವಾಟು ಮುಗಿಸಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+