ರಿಲಯನ್ಸ್ ಇಂಡಸ್ಟ್ರೀಸ್ ಅಂಗ ಸಂಸ್ಥೆ ರಿಲಯನ್ಸ್ ರೀಟೇಲ್ ವೆಂಚರ್ಸ್ ಲಿಮಿಟೆಡ್ (RRVL)ನಿಂದ ಫ್ಯೂಚರ್ ಸಮೂಹದ ಚಿಲ್ಲರೆ ಹಾಗೂ ಸಗಟು ವ್ಯವಹಾರ, ಲಾಜಿಸ್ಟಿಕ್ಸ್ ಹಾಗೂ ವೇರ್ ಹೌಸಿಂಗ್ ವ್ಯವಹಾರವನ್ನು ಖರೀದಿ ಮಾಡಲಾಗುವುದು. ಈ ಬಗ್ಗೆ ಶನಿವಾರದಂದು ಕಂಪೆನಿ ಘೋಷಣೆ ಮಾಡಿದೆ. ಸರಾಸರಿ ಮೊತ್ತ 24,713 ಕೋಟಿ ರುಪಾಯಿಗೆ ಖರೀದಿ ಮಾತುಕತೆ ಆಗಿದೆ.
ಫ್ಯೂಚರ್ ಎಂಟರ್ ಪ್ರೈಸಸ್ ಲಿಮಿಟೆಡ್ (FEL) ಆಡಳಿತ ಮಂಡಳಿ ಸಭೆ ಶನಿವಾರ ನಡೆ ನಂತರ ಬಹು ನಿರೀಕ್ಷಿತ ಈ ವ್ಯವಹಾರದ ಮಾಹಿತಿ ಹೊರಬಿತ್ತು. 'Slump Sale' ವಿಧಾನದಲ್ಲಿ ಈ ವ್ಯವಹಾರ ನಡೆಯಲಿದೆ. ಹಾಗೆಂದರೆ, ಈ ಖರೀದಿ ವ್ಯವಹಾರದಲ್ಲಿ ಪ್ರತಿ ಆಸ್ತಿ ಹಾಗೂ ಸಾಲವನ್ನು ಪ್ರತ್ಯೇಕವಾಗಿ ಅಳೆಯುವುದಿಲ್ಲ. ಬದಲಿಗೆ ಒಟ್ಟು ಮೊತ್ತ ಇಷ್ಟು ಎಂದು ಪಾವತಿಸಲಾಗುತ್ತದೆ.
ಇಡೀ ಖರೀದಿ ವ್ಯವಹಾರಕ್ಕೆ ಸಂಬಂಧಿಸಿದಂತೆ ಸಮಗ್ರ ಯೋಜನೆಯೊಂದನ್ನು ರೂಪಿಸಲಾಗಿದೆ. ಈ ವ್ಯವಹಾರ ನಡೆಯುವ ಸಂದರ್ಭದಲ್ಲಿ ಆ ಕುರಿತು ಕೆಲ ಒಪ್ಪಂದ ಆಗಿದೆ. ಅದರ ಅನ್ವಯ, ಫ್ಯೂಚರ್ ಸಮೂಹದಿಂದ ನಡೆಸುತ್ತಿರುವ ಕೆಲವು ಕಂಪೆನಿಗಳ ವ್ಯವಹಾರವನ್ನು ಫ್ಯೂಚರ್ ಎಂಟರ್ ಪ್ರೈಸಸ್ ಲಿಮಿಟೆಡ್ (FEL)ನಲ್ಲಿ ವಿಲೀನ ಮಾಡಲಿದೆ. ಈ ಖರೀದಿ ವ್ಯವಹಾರದ ಯೋಜನೆ ಈ ಕೆಳಕಂಡಂತೆ ಇದೆ:
* ರೀಟೇಲ್ ಮತ್ತು ಹೋಲ್ ಸೇಲ್ ಸಂಸ್ಥೆಗಳನ್ನು RRVL ಒಡೆತನದ ರಿಲಯನ್ಸ್ ರೀಟೇಲ್ ಅಂಡ್ ಫ್ಯಾಷನ್ ಲೈಫ್ ಸ್ಟೈಲ್ ಲಿಮಿಟೆಡ್ ಗೆ (RRFLL) ವರ್ಗಾವಣೆ ಮಾಡಲಾಗುವುದು.
* ಲಾಜಿಸ್ಟಿಕ್ಸ್ ಮತ್ತು ವೇರ್ ಹೌಸಿಂಗ್ ಸಂಸ್ಥೆಯನ್ನು RRVLಗೆ ನೇರವಾಗಿ ವರ್ಗಾವಣೆ ಮಾಡಲಾಗುತ್ತದೆ.
* RRFLLನಿಂದ ಹೂಡಿಕೆ ಪ್ರಸ್ತಾವ ಮಾಡಲಾಗಿದೆ: ವಿಲೀನದ ನಂತರ 6.09% ಈಕ್ವಿಟಿ ಸ್ವಾಧೀನಕ್ಕಾಗಿ 1200 ಕೋಟಿ ರುಪಾಯಿಯ FEL ಪ್ರಿಫರೆನ್ಷಿಯಲ್ ಈಕ್ವಿಟಿ ಷೇರುಗಳ ವಿತರಣೆ ಮತ್ತು 400 ಕೋಟಿ ರುಪಾಯಿಯ ಈಕ್ವಿಟಿ ವಾರಂಟ್ ಗಳ ಪ್ರಿಫರೆನ್ಷಿಯಲ್ ವಿತರಣೆ, ಅದರ ಬದಲಿಗೆ ಮತ್ತು ವಿತರಣೆ ಬೆಲೆಯ ಬಾಕಿ 75% ಪಾವತಿ, ಇದರ ಫಲಿತಾಂಶವಾಗಿ FELನಲ್ಲಿ 7.05%ನಷ್ಟನ್ನು RRFLL ಪಡೆಯುತ್ತದೆ.

ರಿಲಯನ್ಸ್ ರೀಟೇಲ್ ವೆಂಚರ್ಸ್ ನ ನಿರ್ದೇಶಕಿ ಇಶಾ ಅಂಬಾನಿ ಮಾತನಾಡಿ, ಈ ವ್ಯವಹಾರದ ಮೂಲಕ ಹೆಸರಾಂತ ಮಾದರಿಯ ಹಾಗೂ ಫ್ಯೂಚರ್ ಸಮೂಹದ ಬ್ರ್ಯಾಂಡ್ ಗಳಿಗೆ ಸೂರು ಒದಗಿಸುತ್ತಿದ್ದೇವೆ ಎಂದು ತಿಳಿಸುವುದಕ್ಕೆ ಸಂತೋಷ ಆಗುತ್ತದೆ ಎಂದು ಹೇಳಿದ್ದಾರೆ.
ಈ ರೀಟೇಲ್ ಕ್ಷೇತ್ರದಲ್ಲಿ ಇದೇ ಬೆಳವಣಿಗೆಯ ವೇಗ ಮುಂದುವರಿಸುವ ವಿಶ್ವಾಸ ಹೊಂದಿದ್ದೇವೆ. ಸಣ್ಣ ವರ್ತಕರು, ಅಂಗಡಿಗಳವರು ಮತ್ತು ದೊಡ್ಡ ಮಟ್ಟದ ಗ್ರಾಹಕರ ಬ್ರ್ಯಾಂಡ್ ಗಳ ಜತೆಗಿನ ನಮ್ಮ ವಿಶಿಷ್ಟ ರೀತಿಯ ಸಹಭಾಗಿತ್ವ ಸಕ್ರಿಯವಾಗಿ ಮುಂದುವರಿಯುತ್ತದೆ
ಎಂದಿದ್ದಾರೆ.
ಫ್ಯೂಚರ್ ಸಮೂಹದಿಂದ ಬಟ್ಟೆ, ಸಾಮಾನ್ಯ ಬಳಕೆ ವಸ್ತುಗಳು ಹಾಗೂ ಸ್ವಂತ ಎಫ್ ಎಂಸಿಜಿ ಬ್ರ್ಯಾಂಡ್ ಗಳನ್ನು ಒದಗಿಸಲಾಗುತ್ತಿದೆ. ಈ ಮೂಲಕ ಗ್ರಾಹಕರಿಗೆ ಆಯ್ಕೆಗೆ ಅಪಾರ ಅವಕಾಶಗಳು ಸಹ ಇವೆ. ಈ ಖರೀದಿಯು ಸೆಬಿ, ಸಿಸಿಐ, ಎನ್ ಸಿಎಲ್ ಟಿ, ಷೇರುದಾರರು, ಸಾಲಗಾರರು ಮತ್ತು ಇತರ ಅಗತ್ಯ ಅನುಮತಿಗಳ ನಿಬಂಧನೆಗಳಿಗೆ ಒಳಪಟ್ಟಿದೆ.


Click it and Unblock the Notifications