For Quick Alerts
ALLOW NOTIFICATIONS  
For Daily Alerts

ರಿಲಯನ್ಸ್ ಜಿಯೋದಿಂದ 'ಹ್ಯಾಪಿ ನ್ಯೂ ಇಯರ್' ಪ್ಲಾನ್

|

ರಿಲಯನ್ಸ್ ಜಿಯೋದಿಂದ 'ಹ್ಯಾಪಿ ನ್ಯೂ ಇಯರ್' ಪ್ಲಾನ್ ತರಲಾಗಿದೆ. ಈ ಪ್ಲಾನ್ ನ ದರವು 2020 ರುಪಾಯಿ ಆಗಿದ್ದು, ಒಂದು ವರ್ಷದ ವ್ಯಾಲಿಡಿಟಿ ಇರುತ್ತದೆ. ಈ ಪ್ಲಾನ್ ನಲ್ಲಿ ಗ್ರಾಹಕರು 2020 ರುಪಾಯಿ ಪಾವತಿಸುತ್ತಾರೆ. ಅದಕ್ಕೆ ಪ್ರತಿಯಾಗಿ ನಿತ್ಯವೂ 1.5 ಜಿ.ಬಿ. ಡೇಟಾ ಬಳಕೆ ಹಾಗೂ ಅನಿಯಮಿತ ಕರೆಗಳನ್ನು ಮಾಡಬಹುದು.

 

ಈ ವರ್ಷದ ಅಕ್ಟೋಬರ್ ನಲ್ಲಿ ಜಿಯೋದಿಂದ ದೀಪಾವಳಿ ಧಮಾಕಾ ಕೊಡುಗೆ ತರಲಾಗಿತ್ತು. ಅದರ ದರ 1699 ರುಪಾಯಿ ಇತ್ತು. ಆಗಿನ ದರಕ್ಕೆ ಹೋಲಿಸಿದರೆ 19% ದುಬಾರಿ ಆಗಿದೆ. 1699 ರುಪಾಯಿ ದರಕ್ಕೆ ಒಂದು ವರ್ಷದ ಅವಧಿಗೆ ನಿತ್ಯವೂ 1.5 ಜಿ.ಬಿ. ಡೇಟಾ ಉಚಿತ ಹಾಗೂ ಯಾವುದೇ ನೆಟ್ ವರ್ಕ್ ಗೆ ಅನಿಯಮಿತವಾದ ಕರೆ ಮಾಡಬಹುದಿತ್ತು.

ಅಂದ ಹಾಗೆ, ಯಾರ ಬಳಿ ಜಿಯೋ ಫೋನ್ ಇದೆಯೋ ಅವರು ಕೂಡ ಈ 2020 ರುಪಾಯಿ ಪ್ಲಾನ್ ನ ಚಂದಾದಾರರಾಗಬಹುದು. ಮುಕೇಶ್ ಅಂಬಾನಿ ನೇತೃತ್ವದ ಟೆಲಿಕಾಂ ಕಂಪೆನಿಯು ಡಿಸೆಂಬರ್ ಆರಂಭದಲ್ಲಿ ದರಗಳ ಹೆಚ್ಚಳ ಮಾಡಿದೆ. 2016ರಲ್ಲಿ ಜಿಯೋ ಆರಂಭವಾದ ನಂತರ ಮೊದಲ ಬಾರಿಗೆ ದರದಲ್ಲಿ ಏರಿಕೆ ಮಾಡಿತು.

ರಿಲಯನ್ಸ್ ಜಿಯೋದಿಂದ 'ಹ್ಯಾಪಿ ನ್ಯೂ ಇಯರ್' ಪ್ಲಾನ್

ಅದಕ್ಕೂ ಮುನ್ನ ಪ್ರತಿಸ್ಪರ್ಧಿ ಕಂಪೆನಿಗಳಾದ ಭಾರ್ತಿ ಏರ್ ಟೆಲ್, ವೊಡಾ ಫೋನ್ ನಿಂದ ಪ್ರೀಪೇಯ್ಡ್ ಮೊಬೈಲ್ ಫೋನ್ ಪ್ಲಾನ್ ದರವನ್ನು ಶೇಕಡಾ 40ರಷ್ಟು ಏರಿಕೆ ಮಾಡಿದವು. ಅದರೆ ಜಿಯೋ ಹೊಸ ಪ್ಲಾನ್ ನಿಂದ ಪ್ರತಿ ಗ್ರಾಹಕರ ಸರಾಸರಿ ಆದಾಯದ ಮೇಲೆ ಯಾವುದೇ ಬದಲಾವಣೆ ಆಗಲ್ಲ ಎಂದು ತಜ್ಞರು ಅಭಿಪ್ರಾಯ ಪಡುತ್ತಾರೆ.

English summary

Reliance Jio Happy New Year 2020 Plan

Reliance Jio happy new year 2020 plan announced. Here is the complete details.
Story first published: Tuesday, December 24, 2019, 13:43 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X