ರಿಲಯನ್ಸ್ ಜಿಯೋದಿಂದ ಹೊಸ ವಾರ್ಷಿಕ ಪ್ಲಾನ್, 350 GB ಡೇಟಾ

360 ದಿನಗಳ ವ್ಯಾಲಿಡಿಟಿಯೊಂದಿಗೆ ರಿಲಯನ್ಸ್ ಜಿಯೋದಿಂದ ಹೊಸದಾಗಿ ವಾರ್ಷಿಕ ಪ್ಲಾನ್ ಪರಿಚಯಿಸಲಾಗುತ್ತಿದೆ. 4,999 ರುಪಾಯಿಯ ಈ ಪ್ಲಾನ್ ನಲ್ಲಿ 350 GB ಡೇಟಾ ಒಟ್ಟಾರೆ ದೊರೆಯುತ್ತದೆ. ಆ ಡೇಟಾ ಬಳಕೆ ಪೂರ್ಣವಾದ ನಂತರ ವೇಗದಲ್ಲಿ ಭಾರೀ ಪ್ರಮಾಣದಲ್ಲಿ ಇಳಿಕೆ ಆಗುತ್ತದೆ.

ಈ ಹಿಂದೆ ಕಂಪೆನಿಯು 2020 ರುಪಾಯಿಗೆ ಇದ್ದ ಪ್ಲಾನ್ ನ ಬದಲಿಗೆ 2121 ರುಪಾಯಿಯ ಪ್ಲಾನ್ ಪರಿಚಯಿಸಿ, ವ್ಯಾಲಿಡಿಟಿ ಅವಧಿಯನ್ನು ಕಡಿತಗೊಳಿಸಿತ್ತು. ರಿಲಯನ್ಸ್ ಜಿಯೋ ಸಂಖ್ಯೆಗಳಿಗೆ ಅನಿಯಮಿತ ಕರೆ ಸೌಲಭ್ಯ, ಇತರ ನೆಟ್ ವರ್ಕ್ ಗೆ 12 ಸಾವಿರ ನಿಮಿಷಗಳ ಮಿತಿ, ಆ ನಂತರ ಕರೆ ದರಗಳು ಅನ್ವಯಿಸುತ್ತವೆ.

ರಿಲಯನ್ಸ್ ಜಿಯೋದಿಂದ ಹೊಸ ವಾರ್ಷಿಕ ಪ್ಲಾನ್, 350 GB ಡೇಟಾ

ಪ್ಲಾನ್ ನಲ್ಲಿ ಜಿಯೋ ಅಪ್ಲಿಕೇಷನ್ ಗಳನ್ನು ಬಳಸಲು ಸಹ ಅವಕಾಶ ಇರುತ್ತದೆ. ಜತೆಗೆ ನಿತ್ಯವೂ 100 ಎಸ್ಸೆಮ್ಮೆಸ್ ಇರುತ್ತದೆ. ಜಿಯೋದಲ್ಲಿ 149 ರುಪಾಯಿಯ ಪ್ಲಾನ್ ಸಹ ಇದ್ದು, ಅದರಲ್ಲಿ 24 GB ಡೇಟಾ ಒದಗಿಸಲಾಗುತ್ತದೆ. ಎಜಿಆರ್ ಶುಲ್ಕ ಪಾವತಿ ಮಾಡಿರುವ ಟೆಲಿಕಾಂ ಕಂಪೆನಿಗಳೆಲ್ಲಕ್ಕೂ ದರ ಏರಿಕೆ ಅನಿವಾರ್ಯ ಆಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+