ರಿಲಯನ್ಸ್ ಜಿಯೋದಿಂದ ಹೊಸ ಪೋಸ್ಟ್ ಪೇಯ್ಡ್ ಪ್ಲಾನ್ ಗಳಿಗೆ ಅದ್ಭುತ ಆಫರ್

ರಿಲಯನ್ಸ್ ಜಿಯೋದಿಂದ ಮಂಗಳವಾರ ಜಿಯೋ ಪೋಸ್ಟ್ ಪೇಯ್ಡ್ ಪ್ಲಸ್ ಯೋಜನೆ ಘೋಷಣೆ ಮಾಡಲಾಗಿದೆ. ಈ ಪ್ಲಾನ್ ಆರಂಭಿಕ ಬೆಲೆ 399 ರುಪಾಯಿ. ಜಿಯೋ ಪೋಸ್ಟ್ ಪೇಯ್ಡ್ ಪ್ಲಸ್ ನಲ್ಲಿ ಒಟಿಟಿ ಅಪ್ಲಿಕೇಷನ್ ಗಳಿಗೆ ಉಚಿತ ಸಬ್ ಸ್ಕ್ರಿಪ್ಷನ್ ಹಾಗೂ 500 GB ತನಕ ಡೇಟಾ ಉಳಿಸಿಕೊಳ್ಳುವ ಅವಕಾಶ ಇದೆ. ಇವೆಲ್ಲದರ ಜತೆಗೆ USA, UAEಗೆ ಅಂತರರಾಷ್ಟ್ರೀಯ ಕರೆಗಳನ್ನು ಉಚಿತವಾಗಿ ಮಾಡಬಹುದು.

ಈಗಿನ ಬೆಳವಣಿಗೆ ಬಗ್ಗೆ ಜಿಯೋ ನಿರ್ದೇಶಕ ಆಕಾಶ್ ಅಂಬಾನಿ ಮಾತನಾಡಿ, ಜಿಯೋ ಪೋಸ್ಟ್ ಪೇಯ್ಡ್ ಪರಿಚಯಿಸುವುದಕ್ಕೆ ಇದಕ್ಕಿಂತ ಅತ್ಯುತ್ತಮ ಸಮಯ ಇಲ್ಲ. ಇದೀಗ ಪ್ರೀಪೇಯ್ಡ್ ಸ್ಮಾರ್ಟ್ ಫೋನ್ ವಿಭಾಗದಲ್ಲಿ 40 ಕೋಟಿಯಷ್ಟು ಸಂತೃಪ್ತ ಗ್ರಾಹಕರಿದ್ದಾರೆ. ಪೋಸ್ಟ್ ಪೇಯ್ಡ್ ವಿಭಾಗದ ಬಗ್ಗೆ ಗ್ರಾಹಕರಿಗೆ ಪ್ರೀತಿಯನ್ನು ವಿಸ್ತರಿಸಲು ನಾವು ಬಯಸುತ್ತೇವೆ ಎಂದಿದ್ದಾರೆ.

399, 599, 799, 999 ಹಾಗೂ 1499 ರುಪಾಯಿಯ ಪ್ಲಾನ್

399, 599, 799, 999 ಹಾಗೂ 1499 ರುಪಾಯಿಯ ಪ್ಲಾನ್

ಮಾಸಿಕ ಶುಲ್ಕ ದರವಾಗಿ 399, 599, 799, 999 ಹಾಗೂ 1499 ರುಪಾಯಿಯ ಪ್ಲಾನ್ ಗಳಿವೆ. ಇವೆಲ್ಲಕ್ಕೂ ಆಯಾ ಗ್ರಾಹಕರ ಅಗತ್ಯಕ್ಕೆ ತಕ್ಕಂತೆ ವೈಯಕ್ತಿಕ ಆಫರ್ ಗಳು, ಡೇಟಾ ಮಿತಿ ದೊರೆಯುತ್ತದೆ. ಜಿಯೋ ಪೋಸ್ಟ್ ಪೇಯ್ಡ್ ಪ್ಲಸ್ ನ ಮುಖ್ಯ ಫೀಚರ್ ಅಂದರೆ, ನೆಟ್ ಫ್ಲಿಕ್ಸ್, ಅಮೆಜಾನ್ ಪ್ರೈಮ್ ಮತ್ತು ಡಿಸ್ನಿ+ ಹಾಟ್ ಸ್ಟಾರ್ ಸಬ್ ಸ್ಕ್ರಿಪ್ಷೆನ್ ದೊರೆಯುತ್ತವೆ. ಇನ್ನು ಜಿಯೋ ಆಪ್ ಗಳು, ಜತೆಗೆ 650+ ಲೈವ್ ಟಿವಿ ಚಾನೆಲ್ ಗಳು, ವಿಡಿಯೋ ಕಂಟೆಂಟ್ ಗಳು, ಹಾಡುಗಳು ಮತ್ತು ನಿಯತಕಾಲಿಕೆಗಳು ದೊರೆಯುತ್ತವೆ.

ಫೀಚರ್ಸ್ ಪ್ಲಾನ್ ವಿಶೇಷಗಳೇನು?

ಫೀಚರ್ಸ್ ಪ್ಲಾನ್ ವಿಶೇಷಗಳೇನು?

ರಿಲಯನ್ಸ್ ಜಿಯೋ ಪೋಸ್ಟ್ ಪೇಯ್ಡ್ ಫೀಚರ್ಸ್ ಪ್ಲಸ್ ಜತೆಗೆ ಒಂದು ಕನೆಕ್ಷನ್ ಗೆ 250 ರುಪಾಯಿಯಂತೆ ಸಂಪೂರ್ಣ ಕುಟುಂಬಕ್ಕೆ ಫ್ಯಾಮಿಲಿ ಪ್ಲಾನ್ ದೊರೆಯುತ್ತದೆ. ಇದರಲ್ಲಿ 500 GB ತನಕ ಡೇಟಾ ಉಳಿಸಿಕೊಳ್ಳಬಹುದು. ಜತೆಗೆ ವಿಶ್ವದಾದ್ಯಂತ WiFi ಕಾಲಿಂಗ್ ಸೌಲಭ್ಯ ಕೂಡ ಸಿಗುತ್ತದೆ.

ISD ಕರೆ ನಿಮಿಷಕ್ಕೆ 50 ಪೈಸೆಯಂತೆ ಶುರುವಾಗುತ್ತದೆ

ISD ಕರೆ ನಿಮಿಷಕ್ಕೆ 50 ಪೈಸೆಯಂತೆ ಶುರುವಾಗುತ್ತದೆ

ಇನ್ನು ಇಂಟರ್ ನ್ಯಾಷನಲ್ ಪ್ಲಸ್ ಸ್ಕೀಮ್ ನಲ್ಲಿ ವಿಮಾನದೊಳಗೆ ಸಂಪರ್ಕ ದೊರೆಯುತ್ತದೆ. ವಿದೇಶಗಳಿಗೆ ಪ್ರಯಾಣ ಮಾಡುವವರು ಬಳಸಬಹುದು. USA ಹಾಗೂ UAEಗೆ ಉಚಿತ ಇಂಟರ್ ನ್ಯಾಷನಲ್ ರೋಮಿಂಗ್ ಇದೆ. ಇಂಡಿಯಾ ಕಾಲಿಂಗ್ 1 ರುಪಾಯಿಗೆ ಜತೆಗೆ WiFi ಕಾಲಿಂಗ್ ಅಂತರರಾಷ್ಟ್ರೀಯ ರೋಮಿಂಗ್ ಸಿಗುತ್ತದೆ/ ಅಂತರರಾಷ್ಟ್ರೀಯ ಕಾಲಿಂಗ್ (ISD) ನಿಮಿಷಕ್ಕೆ 50 ಪೈಸೆಯಂತೆ ಶುರುವಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+