ರಿಲಯನ್ಸ್ ಜಿಯೋದಿಂದ ಬಂತು 'ವರ್ಕ್ ಫ್ರಮ್ ಹೋಮ್ ಪ್ಯಾಕ್'

ರಿಲಯನ್ಸ್ ಜಿಯೋದಿಂದ ಶನಿವಾರ 'ವರ್ಕ್ ಫ್ರಮ್ ಹೋಮ್ ಪ್ಯಾಕ್' ಆರಂಭಿಸಲಾಗಿದೆ. ಕೊರೊನಾ ಆತಂಕದ ಕಾರಣಕ್ಕೆ ಉದ್ಯೋಗ ಸ್ಥಳದಿಂದ ದೂರದಲ್ಲಿ ಕಾರ್ಯ ನಿರ್ವಹಿಸುವ ವೃತ್ತಿಪರರನ್ನು ಗಮನದಲ್ಲಿ ಇಟ್ಟುಕೊಂಡು ಈ ಪ್ಯಾಕ್ ಆರಂಭಿಸಲಾಗಿದೆ. ದಿನಕ್ಕೆ 2GB 4G ಡೇಟಾ ಸಿಗುತ್ತದೆ.

ಶೇಕಡಾ ನೂರರಷ್ಟು ಡೇಟಾ ಬಳಸಿದ ನಂತರ ಗ್ರಾಹಕರು ದಿನದ ಬಾಕಿ ಅವಧಿಗೂ ಅನಿಯಮಿತವಾಗಿ ಡೇಟಾ ಬಳಸಬಹುದು. ಆದರೆ ವೇಗ 64 kbps ಇರುತ್ತದೆ. ಈ ಪ್ಯಾಕ್ ಅವಧಿ 51 ದಿನಗಳ ಕಾಲ ಇರುತ್ತದೆ. 251 ರುಪಾಯಿ ದರ ನಿಗದಿ ಮಾಡಲಾಗಿದ್ದು, ಈ ಪ್ಯಾಕ್ ನಲ್ಲಿ ವಾಯ್ಸ್ ಕರೆ ಮತ್ತು ಎಸ್ಸೆಮ್ಮೆಸ್ ದೊರೆಯುವುದಿಲ್ಲ.

ಈಗಾಗಲೇ ಇರುವ ಇತರ ಪ್ಲ್ಯಾನ್ ದರಗಳಿಗೆ ಹೆಚ್ಚಿನ ಡೇಟಾ ಮತ್ತು ಜಿಯೋ ಹೊರತುಪಡಿಸಿದ ನೆಟ್ ವರ್ಕ್ ಗಳಿಗೆ ಹೆಚ್ಚಿನ ಅವಧಿಯ ಉಚಿತ ಕರೆ ಸೌಲಭ್ಯ ನೀಡಲಾಗುತ್ತದೆ. ಯಾರದೇ ಖಾತೆಯಲ್ಲಿ ಸಕ್ರಿಯವಾಗಿ ಪ್ಲ್ಯಾನ್ ಇದ್ದರೆ ಮಾತ್ರ 4G ಡೇಟಾ ವೋಚರ್ ರೀಚಾರ್ಜ್ ಮಾಡಬಹುದು.

ರಿಲಯನ್ಸ್ ಜಿಯೋದಿಂದ ಬಂತು 'ವರ್ಕ್ ಫ್ರಮ್ ಹೋಮ್ ಪ್ಯಾಕ್'

ಈಚೆಗೆ ಜಿಯೋದಿಂದ 11, 21, 51 ಹಾಗೂ 101 ರುಪಾಯಿಗಳ ಪ್ರೀಪೇಯ್ಶ್ ಡೇಟಾ ವೋಚರ್ ಗಳು ಬಂದಿವೆ. ಅದರಲ್ಲಿ ಕ್ರಮವಾಗಿ 800 MB, 2 GB, 6 GB, 12 GB ಹೈ ಸ್ಪೀಡ್ ಡೇಟಾ ದೊರೆಯುತ್ತದೆ. ಅದರ ಜತೆಗೆ ಜಿಯೋ ಹೊರತುಪಡಿಸಿದ ನೆಟ್ ವರ್ಕ್ ಗಳಿಗೆ 75, 200, 500 ಹಾಗೂ 1000 ನಿಮಿಷಗಳ ಉಚಿತ ಕರೆ ಸೌಲಭ್ಯ ದೊರೆಯುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+