For Quick Alerts
ALLOW NOTIFICATIONS  
For Daily Alerts

ಜಿಯೋ ಬಳಸಿ, ವೈ-ಫೈ ಮೂಲಕ ಆಡಿಯೋ/ವಿಡಿಯೋ ಕಾಲ್ ಮಾಡಿ

|

ಮುಂಬೈ, ಜನವರಿ 08: ತನ್ನ ಗ್ರಾಹಕರಿಗೆ ಇನ್ನಷ್ಟು ಉತ್ತಮ ಉತ್ಪನ್ನಗಳು ಮತ್ತು ಅನುಭವವನ್ನು ನೀಡಲು ರಿಲಯನ್ಸ್ ಜಿಯೋ ಮುಂದಾಗಿದೆ. ಇಂದು ರಾಷ್ಟ್ರವ್ಯಾಪಿ ಆಡಿಯೋ ಮತ್ತು ವಿಡಿಯೋ ಓವರ್ ವೈ-ಫೈ ಸೇವೆಯನ್ನು ಪ್ರಾರಂಭಿಳಿಸಿದೆ. ಪ್ರಾರಂಭದಲ್ಲಿಯೇ ಪ್ರತಿಯೊಬ್ಬ ಗ್ರಾಹಕರಿಗೆ ಉತ್ತಮವಾದ ಅನುಭವವನ್ನು ಒದಗಿಸಲು ಜಿಯೋ ಕಳೆದ ಕೆಲವು ತಿಂಗಳುಗಳಿಂದ ಈ ಸೇವೆಯನ್ನು ಪ್ರಾಯೋಗಿಕವಾಗಿ ಜಾರಿಗೆ ತರಲಾಗಿತ್ತು.

ಇಂಡಿಯಾ ಮೊಬೈಲ್ ಕಾಂಗ್ರೆಸ್ (ಐಎಂಸಿ) 2019ರಲ್ಲಿ ರಿಲಯನ್ಸ್ ಜಿಯೋ ಇನ್‌ಫೋಕಾಮ್ ಲಿಮಿಟೆಡ್ (ಜಿಯೋ) ಸಂಸ್ಥೆಯು ಪೇಟೆಂಟ್ ಅರ್ಜಿ ಸಲ್ಲಿಸಲಾದ ತನ್ನ ನವೀನ ಸಾಧನೆ - ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (ಎಐ) ಆಧಾರಿತ ವೀಡಿಯೊ ಕಾಲ್ ಅಸಿಸ್ಟೆಂಟ್ (ಬಾಟ್) ಅನ್ನು ಅನಾವರಣಗೊಳಿಸಿದೆ. ಇದನ್ನು ಬೇರೆ ಯಾವುದೇ ಅಪ್ಲಿಕೇಶನ್ ಅನ್ನು ಇನ್‌ಸ್ಟಾಲ್ ಮಾಡದೆಯೇ 4ಜಿ ದೂರವಾಣಿ ಕರೆಯ ಮೂಲಕ ಸಂಪರ್ಕಿಸಬಹುದಾಗಿದೆ.

 

ಐಎಂಸಿ 2019: ವಿಶ್ವದ ಮೊದಲ ಎಐ ಆಧಾರಿತ ಕಾಲ್ ಅಸಿಸ್ಟೆಂಟ್ ಅನಾವರಣ

ಭಾರ್ತಿ ಏರ್ ಟೆಲ್ ವೈಫೈ ಕಾಲಿಂಗ್ ನಂತರ ರಿಲಯನ್ಸ್ ಜಿಯೋ ಬುಧವಾರ(ಜೂನ್ 08) ದಂದು ವಿಡಿಯೋ, ವಾಯ್ಸ್ ಓವರ್ ವೈಫೈ (VoWiFi) ಸದ್ಯಕ್ಕೆ ಸ್ಯಾಮ್ ಸಂಗ್, ಆಪಲ್ ಸ್ಮಾರ್ಟ್ ಫೋನ್ ಗಳಲ್ಲಿ ಮಾತ್ರ ಲಭ್ಯವಿದ್ದು, ಆಯ್ದ ಟೆಲಿಕಾಂ ಸರ್ಕಲ್ ಗಳಲ್ಲಿ ಮಾತ್ರ ಬಳಸಬಹುದಾಗಿದೆ. ಶೀಘ್ರದಲ್ಲೇ ಒನ್ ಪ್ಲಸ್, ಶಿಓಮಿ ಇನ್ನಿತರ ಬ್ರ್ಯಾಂಡ್ ಸ್ಮಾರ್ಟ್ ಫೋನ್ ಗಳಲ್ಲೂ ಲಭ್ಯವಾಗಲಿದೆ.

ಜಿಯೋ ವೀಡಿಯೊ ಕಾಲ್ ಅಸಿಸ್ಟೆಂಟ್

ಜಿಯೋ ವೀಡಿಯೊ ಕಾಲ್ ಅಸಿಸ್ಟೆಂಟ್

ಎಐ ಆಧಾರಿತ ಜಿಯೋ ವೀಡಿಯೊ ಕಾಲ್ ಅಸಿಸ್ಟೆಂಟ್, ತಮ್ಮ ಗ್ರಾಹಕರ ಪುನರಾವರ್ತಿತ ಪ್ರಶ್ನೆಗಳನ್ನು ತ್ವರಿತವಾಗಿ ಮತ್ತು ಶ್ರಮವಿಲ್ಲದೆ ಪರಿಹರಿಸುವ ಮೂಲಕ ವಾಣಿಜ್ಯ ಸಂಸ್ಥೆಗಳು ಮತ್ತು ಇತರ ಬಳಕೆದಾರರಿಗೆ ಹೆಚ್ಚಿನ ಶಕ್ತಿ ನೀಡುತ್ತದೆ ಮತ್ತು ಗ್ರಾಹಕರ ಜೊತೆಗಿನ ಅವರ ಸಂವಹನವನ್ನು ಸುಗಮಗೊಳಿಸುತ್ತದೆ. ಉತ್ತಮ ಗುಣಮಟ್ಟದ ಕಸ್ಟಮರ್ ಎಂಗೇಜ್‌ಮೆಂಟ್ ಅನುಭವವನ್ನು ಪರಿಣಾಮಕಾರಿಯಾಗಿ ಹಾಗೂ ಶ್ರಮವಿಲ್ಲದೆ ನೀಡುವುದಕ್ಕೂ ಇದು ಬ್ರ್ಯಾಂಡ್‌ಗಳಿಗೆ ಸಹಾಯ ಮಾಡುತ್ತದೆ.

ಗ್ರಾಹಕರ ಪ್ರಶ್ನೆಗಳನ್ನು ಕೇಳಲು ಮತ್ತು ಅವುಗಳಿಗೆ ಹೆಚ್ಚು ಸೂಕ್ತವಾದ ರೀತಿಯಲ್ಲಿ ಪ್ರತಿಕ್ರಿಯಿಸಲು ಜಿಯೋ ವೀಡಿಯೊ ಬಾಟ್ ಸಶಕ್ತವಾದ ಎಐ ಆಧಾರಿತ ವೇದಿಕೆಯನ್ನು ಬಳಸುತ್ತದೆ. ಅಲ್ಲದೆ, ಈ ವೇದಿಕೆಯಲ್ಲಿ ವಿಶಿಷ್ಟವಾದ ಸ್ವಯಂ-ಕಲಿಕೆಯ ಸಾಮರ್ಥ್ಯವೂ ಇದ್ದು ಉತ್ತರಗಳ ನಿಖರತೆಯನ್ನು ಸುಧಾರಿಸಲು ಅದು ನೆರವಾಗುತ್ತದೆ.

ವೈ-ಫೈ ಕಾಲಿಂಗ್‌ನಿಂದಾಗಿ ಗ್ರಾಹಕರಿಗೆ ಲಾಭಗಳು:

ವೈ-ಫೈ ಕಾಲಿಂಗ್‌ನಿಂದಾಗಿ ಗ್ರಾಹಕರಿಗೆ ಲಾಭಗಳು:

1. ಗ್ರಾಹಕರು ಯಾವುದೇ ವೈ-ಫೈ ನೆಟ್‌ವರ್ಕ್ ಅನ್ನು ಜಿಯೋ ವೈ-ಫೈ-ಕರೆಗಾಗಿ ಬಳಸಬಹುದು.

2. ಉತ್ತಮ ಆಡಿಯೋ / ವಿಡಿಯೋ-ಕರೆ ಅನುಭವವನ್ನು ನೀಡುವ ಸಲುವಾಗಿ ಆಡಿಯೋ ಮತ್ತು ವೀಡಿಯೊ ಕರೆಗಳು VoLTE ಮತ್ತು Wi-Fi ನಡುವೆ ಬದಲಾಗುತ್ತದೆ.

3. ಜಿಯೋ ವೈ-ಫೈ ಕರೆ ಹ್ಯಾಂಡ್‌ಸೆಟ್‌ಗಳ ಅತಿದೊಡ್ಡ ಇಕೋ ಸಿಸ್ಟಮ್‌ನಲ್ಲಿ ಕಾರ್ಯನಿರ್ವಹಿಸುತ್ತದೆ.

4. ಜಿಯೋ ಗ್ರಾಹಕರು ವೈ-ಫೈ ಕರೆಗಳನ್ನು ವೀಡಿಯೊ ಮೂಲಕ ಮಾಡಬಹುದು

5. ಮತ್ತು ಇವುಗಳಿಗಾಗಿ ಗ್ರಾಹಕರು ಯಾವುದೇ ಹೆಚ್ಚುವರಿ ವೆಚ್ಚವನ್ನು ಭರಿಸಬೇಕಾಗಿಲ್ಲ

ಹೊಸ ಸೌಲಭ್ಯದ ಬಗ್ಗೆ ಆಕಾಶ್ ಅಂಬಾನಿ
 

ಹೊಸ ಸೌಲಭ್ಯದ ಬಗ್ಗೆ ಆಕಾಶ್ ಅಂಬಾನಿ

ಈ ಸೇವೆಯನ್ನು ಆರಂಭಿಸುವ ಮುನ್ನ ಮಾತನಾಡಿದ ಜಿಯೋ ನಿರ್ದೇಶಕ ಆಕಾಶ್ ಅಂಬಾನಿ, ''ಜಿಯೋ ಗ್ರಾಹಕರ ಬಳಕೆಯ ಅನುಭವವನ್ನು ಹೆಚ್ಚಿಸಲು ಮತ್ತು ಅವರ ಸಮಸ್ಯೆಗಳನ್ನು ಪರಿಹರಿಸಲು ನಾವು ಬದ್ದರಾಗಿದ್ದೇವೆ, ಇದಕ್ಕಾಗಿ ನಿರಂತರವಾಗಿ ಹೊಸತನವನ್ನು ಹುಡುಕುತ್ತಿದ್ದೇವೆ, ಈ ಸಮಯದಲ್ಲಿ, ಸರಾಸರಿ ಜಿಯೋ ಗ್ರಾಹಕರು ಪ್ರತಿ ತಿಂಗಳು 900 ನಿಮಿಷಗಳ ಆಡೊಯೋ ಕರೆಗಳನ್ನು ಬಳಸುತ್ತಿದ್ದಾರ ಮತ್ತು ಈ ಸೇವೆಯನ್ನು ಬಳಕೆ ಮಾಡುವ ಗ್ರಾಹಕರ ಸಂಖ್ಯೆಯೂ ಹೆಚ್ಚುತ್ತಿರುವ ನೆಲೆಯಲ್ಲಿ ಜಿಯೋ ವೈ-ಫೈ ಕರೆ ಮಾಡುವಿಕೆಯನ್ನು ಪರಿಚಯಿಸುತ್ತಿದೆ, ಇದು ಪ್ರತಿ ಜಿಯೋ ಗ್ರಾಹಕರ ಆಡಿಯೋ-ಕರೆ ಅನುಭವವನ್ನು ಇನ್ನಷ್ಟು ಹೆಚ್ಚಿಸುತ್ತದೆ, ಇದು ಈಗಾಗಲೇ ಒಂದು ಭಾರತದ ಮೊದಲ ಎಲ್ಲ VoLTE ನೆಟ್‌ವರ್ಕ್‌ನೊಂದಿಗೆ ಉದ್ಯಮಕ್ಕೆ ಬೆಂಚ್‌ ಮಾರ್ಕ್‌ ಆಗಲಿದೆ'' ಎಂದಿದ್ದಾರೆ

ವೈಫೈ ಸೌಲಭ್ಯ ಸಕ್ರಿಯಗೊಳಿಸುವುದು ಹೇಗೆ?

ವೈಫೈ ಸೌಲಭ್ಯ ಸಕ್ರಿಯಗೊಳಿಸುವುದು ಹೇಗೆ?

* ಜಿಯೋ ಆಪ್, ವೆಬ್ ಸೈಟ್ ಸೆಟ್ಟಿಂಗ್ ನಲ್ಲಿ ವೈಫೈ ಕಾಲಿಂಗ್ ಸರ್ಚ್ ಮಾಡಿ ಸಕ್ರಿಯಗೊಳಿಸಿ.

* ಜಿಯೋ ವೈ-ಫೈ ಕರೆ ಮಾಡುವಿಕೆಯನ್ನು ಸಕ್ರಿಯಗೊಳಿಸಲು, Jio.com/wificalling ನಲ್ಲಿ ಹಂತ-ಹಂತದ ಮಾರ್ಗದರ್ಶಿ ಲಭ್ಯವಿದೆ.

* ಜಿಯೋ ವೈ-ಫೈ ಕರೆ ಮಾಡುವಿಕೆಯನ್ನು ಪ್ಯಾನ್-ಇಂಡಿಯಾ ಜನವರಿ 7 ಮತ್ತು 16, 2020 ರ ನಡುವೆ ಸಕ್ರಿಯಗೊಳಿಸಲಾಗುತ್ತದೆ.

English summary

Reliance Jio launches free voice calls over WiFi How to enable it

Reliance Jio on Wednesday also launched Video and Voice Over Wi-Fi (VoWiFi) service in India. Here is How to enable it on your phone.
Story first published: Wednesday, January 8, 2020, 17:52 [IST]
Company Search
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more