ರಿಲಯನ್ಸ್ ಜಿಯೋದಿಂದ ಹೊಸದಾಗಿ ವರ್ಕ್ ಫ್ರಮ್ ಹೋಮ್ ಪ್ಲಾನ್ ಆರಂಭಿಸಿದೆ. ಕೆಲಸ ಹಾಗೂ ಮತ್ತಿತರ ಕಾರಣಗಳಿಗಾಗಿ ಇರುವ ಡೇಟಾದ ಬೇಡಿಕೆ ಗಮನಿಸಿ ಈ ಪ್ಲಾನ್ ಶುರು ಮಾಡಲಾಗಿದೆ. ಇದು ಒಂದು ವರ್ಷದ ಅವಧಿಗೆ ಇರುವಂಥ, ಹೆಚ್ಚಿನ ಡೇಟಾವನ್ನು ದಿನದ ಆಧಾರದಲ್ಲಿ ಪಡೆಯುವಂಥ ಅನುಕೂಲ ಹೊಂದಿದೆ.
ಈ ಹೊಸ ಪ್ಲಾನ್ ನಲ್ಲಿ ಗ್ರಾಹಕರು 2399 ರುಪಾಯಿ ಪಾವತಿ ಮಾಡುತ್ತಾರೆ. ಅಂದಹಾಗೆ ಜಿಯೋದಲ್ಲಿ ಈಗಾಗಲೇ ವಾರ್ಷಿಕ 2121 ರುಪಾಯಿಯದು, 336 ದಿನಗಳ ಅವಧಿಗೆ ಪ್ಲಾನ್ ಇದೆ. ಆದರೆ 2399 ರುಪಾಯಿಯ ಪ್ಲಾನ್ ನಲ್ಲಿ ನಿತ್ಯವೂ 2GB ಡೇಟಾ ದೊರೆಯುತ್ತದೆ. ಇದು ಒಂದು ವರ್ಷದ ಕಾಲ ವ್ಯಾಲಿಡಿಟಿ ಅಂದುಕೊಂಡರೂ ಗ್ರಾಹಕರು ತಿಂಗಳಿಗೆ 200 ರುಪಾಯಿ ಪಾವತಿಸದಂತಾಗುತ್ತದೆ.
ರಿಲಯನ್ಸ್ ಜಿಯೋ ಹೇಳಿಕೊಳ್ಳುವಂತೆ, ಹೊಸ ವಾರ್ಷಿಕ ಪ್ಲಾನ್ ನಲ್ಲಿ ಪ್ರತಿಸ್ಪರ್ಧಿಗಳಿಗಿಂತ 33% ಹೆಚ್ಚು ಮೌಲ್ಯ ಸಿಗುತ್ತದೆ. ಇನ್ನು ವಾರ್ಷಿಕ 2121 ರುಪಾಯಿಯ ಪ್ಲಾನ್ ನಲ್ಲಿ ನಿತ್ಯ 1.5 ಜಿಬಿ ಡೇಟಾ ದೊರೆಯುತ್ತದೆ. ಹೊಸ ಆಡ್ ಆನ್ ಪ್ಯಾಕ್ ಕೂಡ 'ವರ್ಕ್ ಫ್ರಮ್ ಹೋಮ್' ಥೀಮ್ ಅಡಿಯಲ್ಲಿ ಆಫರ್ ನೀಡುತ್ತಿದೆ.

ಈ ಆಡ್ ಆನ್ ಪ್ಯಾಕ್ ಗಳಲ್ಲಿ ದಿವಸಕ್ಕೆ ಇಂತಿಷ್ಟೇ ಎಂಬ ಡೇಟಾ ಮಿತಿ ಇರುವುದಿಲ್ಲ. ಆದ್ದರಿಂದ ಹೆಚ್ಚು ಡೇಟಾ ಬಳಸುವ ಗ್ರಾಹಕರಿಗೆ ಅನುಕೂಲ ಆಗುತ್ತದೆ. ಯಾವಾಗ ದಿನದ ಡೇಟಾ ಮುಗಿದುಹೋಗುತ್ತೋ ಆಗ ಟಾಪ್ ಅಪ್ ಅನ್ನು ತಿಂಗಳ ಯಾವುದೇ ಸಮಯದಲ್ಲಿ ಬಳಸಬಹುದು.
More From GoodReturns

Gold Price Bengaluru: ಯುಗಾದಿಗೂ ಮುನ್ನ ಚಿನ್ನದ ಬೆಲೆ ಇಳಿಕೆ; ನಿನ್ನೆಗಿಂತ 3,300 ರೂ. ಕುಸಿತ

Mysuru: ಮೈಸೂರಲ್ಲಿ ರಾಜ್ಯದ ಮೊದಲ ಗ್ಲೋಬಲ್ ಟೆಕ್ನಾಲಜಿ ಸೆಂಟರ್ ಆರಂಭ; 10 ಸಾವಿರ ಐಟಿ ಉದ್ಯೋಗಗಳ ನಿರೀಕ್ಷೆ

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ ಸ್ಥಳ ಆಯ್ಕೆ ಬಗ್ಗೆ ಹೊಸ ಅಪ್ಡೇಟ್; ಡಿ.ಕೆ ಶಿವಕುಮಾರ್ ಬಳಿ ಸುಳಿವು

Gold Rate: ಚಿನ್ನಪ್ರಿಯರಿಗೆ ‘ಯುಗಾದಿ’ ಸಿಹಿ; ಬೆಂಗಳೂರಿನಲ್ಲಿ 24K ಬಂಗಾರದ ಬೆಲೆಯಲ್ಲಿ 27,800 ರೂ. ಕುಸಿತ

Credit Score: ಸಾಲ ಪಡೆಯಲಷ್ಟೇ ಅಲ್ಲ, ಬ್ಯಾಂಕ್ ಉದ್ಯೋಗಕ್ಕೂ ಬೇಕಿದೆ ಕ್ರೆಡಿಟ್ ಸ್ಕೋರ್; ಈ ಬಗ್ಗೆ ತಿಳಿಯಿರಿ

Karnataka weather: ರಾಜ್ಯದ ಹಲವೆಡೆ ಆಲಿಕಲ್ಲು ಮಳೆ; ಮಾರ್ಚ್ 23ರವರೆಗೂ ಈ ಭಾಗದಲ್ಲಿ ಮಳೆ ಮುಂದುವರಿಕೆ

Silver Price Today: ಬೆಳ್ಳಿ ಖರೀದಿದಾರರಿಗೆ ಗುಡ್ನ್ಯೂಸ್-ಇಂದು ಭಾರತದಲ್ಲಿ 10,000 ರೂ. ಕುಸಿತ

Silver Rates India: ಮತ್ತೆ ಗಗನಕ್ಕೇರಿದ ಬೆಳ್ಳಿ ದರ; ದಿಢೀರ್ 5,000 ರೂ. ಹೆಚ್ಚಳ

LPG cylinder shortage: ಬೆಂಗಳೂರಲ್ಲಿ 1,700ರೂ. ಸಿಲಿಂಡರ್ 5,000 ರೂ.ಗೆ ಮಾರಾಟ..ಹೋಟೆಲ್ ಉದ್ಯಮಕ್ಕೆ ದೊಡ್ಡ ಹೊಡೆತ

Pink Line Metro: ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ; ಶೀಘ್ರದಲ್ಲಿ ಆರಂಭ, ಹೊಸ ರೈಲಿನ ಆಗಮನ

Gold Rates & Silver Rates Today Live: ಚಿನ್ನ-ಬೆಳ್ಳಿ ದರದಲ್ಲಿ ಭಾರಿ ಏರಿಕೆ-ಮಾರುಕಟ್ಟೆಯ ಲೈವ್ ಅಪ್ಡೇಟ್ ತಿಳಿಯಿರಿ



Click it and Unblock the Notifications