ರಿಲಯನ್ಸ್ ಜಿಯೋದಿಂದ ಈಚೆಗೆ ಹೊಸದಾಗಿ 'ವರ್ಕ್ ಫ್ರಮ್ ಹೋಮ್' ಪ್ಲ್ಯಾನ್ ಗಳನ್ನು ಆರಂಭಿಸಲಾಗಿತ್ತು. ಅದರಲ್ಲಿ ಒಂದು ಹೊಸ ವಾರ್ಷಿಕ ಪ್ಲ್ಯಾನ್ ಕೂಡ ಇತ್ತು. ಉಳಿದವು ಆಡ್ ಆನ್ ಪ್ಲ್ಯಾನ್ ಗಳಾಗಿದ್ದವು. ಯಾರು ನಿತ್ಯ ಹೆಚ್ಚಿನ ಡೇಟಾ ಬಳಸುತ್ತಾರೋ ಅಂಥವರಿಗೆ ಇದರಿಂದ ಅನುಕೂಲ ಆಗುವಂತೆ ರೂಪಿಸಲಾಗಿದೆ.
ರಿಲಯನ್ಸ್ ಜಿಯೋ ಗ್ರಾಹಕರಾಗಿದ್ದು, ಬೇರೆ ಪ್ಲ್ಯಾನ್ ಗಳನ್ನು ಬಳಸುತ್ತಿರುವವರು ಸಹ ಈ ಆಡ್ ಆನ್ ಪ್ಲ್ಯಾನ್ ಗಳ ಪ್ರಯೋಜನ ಪಡೆಯಬಹುದು. ಏನಿದು ಆಡ್ ಆನ್ ಪ್ಲ್ಯಾನ್ ಅಂತೀರಾ? ಇದರಲ್ಲಿ 151, 201 ಹಾಗೂ 251 ರುಪಾಯಿಯ ಮೂರು ಆಯ್ಕೆಗಳಿವೆ. ಅದಕ್ಕೆ ಕ್ರಮವಾಗಿ 30 GB, 40 GB, 50 GB ಡೇಟಾ ದೊರೆಯುತ್ತದೆ.
ಈಗಾಗಲೇ ಇರುವ ಗ್ರಾಹಕರಿಗೆ ಲಾಭ
ಈಗಾಗಲೇ ಇರುವ ಪ್ಲ್ಯಾನ್ ನಲ್ಲಿ ಗ್ರಾಹಕರಿಗೆ ದೊರೆಯುವ ಡೇಟಾ ದಿನಕ್ಕೆ ಇಂತಿಷ್ಟೇ ಎಂದು ಮಿತಿ ಇದೆ. ಆ ಮಿತಿಯನ್ನು ಮೀರಿ ಡೇಟಾ ಬಳಕೆ ಮಾಡುವುದಕ್ಕೆ ಈ ಆಡ್ ಆನ್ ಪ್ಯಾಕ್ ನಿಂದ ಸಹಾಯ ಆಗುತ್ತದೆ. ಈಗ ಉದಾಹರಣೆ ನೋಡಿ, ಒಬ್ಬ ಗ್ರಾಹಕರು 84 ದಿನಗಳ ವ್ಯಾಲಿಡಿಟಿಗೆ 599 ರುಪಾಯಿಗೆ ರೀಚಾರ್ಜ್ ಮಾಡಿಸಿರುತ್ತಾರೆ. ಇದರಲ್ಲಿ ನಿತ್ಯ 2 GB ಡೇಟಾ ಸಿಗುತ್ತದೆ. ಆಡ್ ಆನ್ ಪ್ಯಾಕ್ 251 ರುಪಾಯಿ ಖರೀದಿ ಮಾಡಿದರೆ ಆ 599 ರುಪಾಯಿ ಪ್ಲ್ಯಾನ್ ಗೆ ವ್ಯಾಲಿಡಿಟಿ ಅವಧಿಯಲ್ಲಿ 50 GB ಡೇಟಾ ದೊರೆಯುತ್ತದೆ. ಮೊದಲು 2 GB ಡೇಟಾ ಪೂರ್ತಿ ಬಳಕೆಯಾದ ನಂತರವಷ್ಟೇ 50 GB ಡೇಟಾ ಬಳಕೆ ಆಗಲು ಶುರು ಆಗುತ್ತದೆ.
ಹೆಚ್ಚುವರಿ ಡೇಟಾ ಬಳಕೆ ಮಾಡುವವರಿಗಾಗಿ
ಯಾರು ಈಗಾಗಲೇ ಜಿಯೋ ಕನೆಕ್ಷನ್ ಪಡೆದು, ಭಾರೀ ಪ್ರಮಾಣದಲ್ಲಿ ಇಂಟರ್ ನೆಟ್ ಡೇಟಾ ಬಳಸುತ್ತಾರೋ, ಅಂದರೆ ಅತ್ಯುತ್ತಮ ಗುಣಮಟ್ಟದ ವಿಡಿಯೋಗಳ ವೀಕ್ಷಣೆಗೆ ಹಾಗೂ ಇತರ ಕೆಲಸಕ್ಕೆ ಸಂಬಂಧಿಸಿದ ಸಂಗತಿಗಳಿಗೆ ಬಳಸುತ್ತಾರೋ ಅಂಥವರಿಗೆ ಈ ಆಡ್ ಆನ್ ಪ್ಯಾಕ್ ಗಳಿಂದ ಬಹಳ ಪ್ರಯೋಜನ ಆಗುತ್ತದೆ. ದಿನಕ್ಕೆ ಇಂತಿಷ್ಟು ಮಿತಿ ಎಂದು ಇರುವ ಡೇಟಾದಿಂದ ಆ ದಿನದ ಕೋಟಾ ಮುಗಿದ ಮೇಲೆ ವೇಗ ಕಡಿಮೆ ಆಗಿ, ಕೆಲಸ ನಿಧಾನ ಆಗುತ್ತದೆ. ಆ ರೀತಿಯ ಸಮಸ್ಯೆಯನ್ನು ನಿವಾರಿಸಿಕೊಳ್ಳಲು ಆಡ್ ಆನ್ ಪ್ಯಾಕ್ ಖರೀದಿ ಮಾಡುವುದು ಅತ್ಯುತ್ತಮ ಆಯ್ಕೆ.
ಸಣ್ಣ ಮೊತ್ತಕ್ಕೂ ಆಡ್ ಆನ್ ಮಾಡಿಸಬಹುದು
ಇನ್ನು ಸಣ್ಣ ಮೊತ್ತಕ್ಕೆ ಕೂಡ ರಿಲಯನ್ಸ್ ಜಿಯೋದಿಂದ ಆಡ್ ಆನ್ ಪ್ಯಾಕ್ ಗಳನ್ನು ಒದಗಿಸಲಾಗುತ್ತಿದೆ. ಇದು ಕೂಡ ಈಗಾಗಲೇ ಜಿಯೋ ಗ್ರಾಹಕರಾಗಿ ಇರುವವರಿಗೆ ಅನುಕೂಲ ಆಗುತ್ತದೆ. ಅತ್ಯಂತ ಸಣ್ಣ ಮೊತ್ತದ ಆಡ್ ಆನ್ ಪ್ಯಾಕ್ ಅಂದರೆ 11 ರುಪಾಯಿ. ಇದರಲ್ಲಿ 800 MB ಡೇಟಾ ಹಾಗೂ 75 ನಿಮಿಷದ ಜಿಯೋದಿಂದ ಇತರ ನೆಟ್ ವರ್ಕ್ ಗಳಿಗೆ ವಾಯ್ಸ್ ಕಾಲ್ ದೊರೆಯುತ್ತದೆ. 21 ರುಪಾಯಿ ಪ್ಲ್ಯಾನ್ ನಲ್ಲಿ 2 GB ಹೆಚ್ಚುವರಿ ಡೇಟಾ ಹಾಗೂ ಜಿಯೋದಿಂದ ಇತರ ನೆಟ್ ವರ್ಕ್ ಗಳಿಗೆ 200 ನಿಮಿಷಗಳ ವಾಯ್ಸ್ ಕಾಲ್ ದೊರೆಯುತ್ತದೆ. 51 ರುಪಾಯಿಗೆ 6 GB ಡೇಟಾ ಮತ್ತು 500 ನಿಮಿಷ ಜಿಯೋದಿಂದ ಇತರ ನೆಟ್ ವರ್ಕ್ ಗಳಿಗೆ ಉಚಿತ ಕಾಲ್ ಹಾಗೂ 101 ರುಪಾಯಿ ಪ್ಲ್ಯಾನ್ ಗೆ 12 GB ಡೇಟಾ ಮತ್ತು ಜಿಯೋದಿಂದ ಇತರ ನೆಟ್ ವರ್ಕ್ ಗಳಿಗೆ 1000 ನಿಮಿಷಗಳ ಉಚಿತ ಕರೆ ಸೌಲಭ್ಯ ದೊರೆಯುತ್ತದೆ.


Click it and Unblock the Notifications