ಭಾರತದ ಅತಿದೊಡ್ಡ ಟೆಲಿಕಾಂ ಆಪರೇಟರ್ ರಿಲಯನ್ಸ್ ಜಿಯೋ ಇನ್ಫೋಕಾಮ್ ಸೆಪ್ಟೆಂಬರ್‌ನಲ್ಲಿ ಅಂತ್ಯವಾಗುವ ತ್ರೈಮಾಸಿಕದಲ್ಲಿ ತನ್ನ ನಿವ್ವಳ ಲಾಭದಲ್ಲಿ ವರ್ಷದಿಂದ ವರ್ಷಕ್ಕೆ ಶೇಕಡ 28ರಷ್ಟು ಜಿಗಿತ ಕಂಡಿದ ಎಂದು ಶುಕ್ರವಾರ ಘೋಷಣೆ ಮಾಡಿದೆ. ಈ ಮೂಲಕ ನಿವ್ವಳ ಆದಾಯ 4,518 ಕೋಟಿ ರೂಪಾಯಿಗೆ ಏರಿಕೆಯಾಗಿದೆ.
ಏಕೆಂದರೆ ARPU-ಲಿಫ್ಟ್, ಉತ್ತಮ ಚಂದಾದಾರರು, ಡೇಟಾ ಟ್ರಾಫಿಕ್ ಬೆಳವಣಿಗೆಯ ನಡುವೆ ನಿವ್ವಳ ಆದಾಯ ಏರಿಕೆಯನ್ನು ಘೋಷಣೆ ಮಾಡಲಾಗಿದೆ. ಡಿಸೆಂಬರ್ 2023ರ ವೇಳೆಗೆ 5ಜಿಯನ್ನು ರಿಲಯನ್ಸ್ ಜಿಯೋ ಕಂಪನಿ ದೇಶದಾದ್ಯಂತ ವಿಸ್ತರಿಸಲು ಸಿದ್ಧವಾಗಿದೆ ಎಂದು ಕಂಪನಿ ಹೇಳಿದೆ.
ರಿಲಯನ್ಸ್ ಜಿಯೋ ಇನ್ಫೋಕಾಮ್ (RJIL) ನ ಆದಾಯವು ಶೇಕಡ 20.2ರಷ್ಟು ಜಿಗಿದಿದೆ. ಈಗಷ್ಟೇ ಕೊನೆಗೊಂಡ ತ್ರೈಮಾಸಿಕದಲ್ಲಿ 22,521 ಕೋಟಿ ರೂಪಾಯಿ ಆಗಿದೆ. 18,735 ಕೋಟಿ ರೂಪಾಯಿಯಿಂದ 22,521 ಕೋಟಿ ರೂಪಾಯಿಗೆ ಏರಿಕೆಯಾಗಿದೆ. ದೇಶಾದಾದ್ಯಂತ 5ಜಿ ಸೇವೆ ಆರಂಭವಾಗುತ್ತಿರುವ ನಡುವೆ ರಿಲಯನ್ಸ್ ಜಿಯೋದ ಎರಡನೇ ತ್ರೈಮಾಸಿಕದ ಫಲಿತಾಂಶ ಹೊರಬಿದ್ದಿದೆ. ವರದಿ ಮಾಡಿದ ತ್ರೈಮಾಸಿಕದಲ್ಲಿ ಜಿಯೋ ಪ್ಲಾಟ್‌ಫಾರ್ಮ್‌ಗಳ (ಜೆಪಿಎಲ್) ನಿವ್ವಳ ಲಾಭವು ಸುಮಾರು ಶೇ.27 ರಷ್ಟು ಏರಿಕೆಯಾಗಿ 4,729 ಕೋಟಿ ರೂಪಾಯಿಗೆ ತಲುಪಿದೆ.

ಕಳೆದ ವರ್ಷ ಎಷ್ಟಿತ್ತು, ಈಗ ಎಷ್ಟಿದೆ?
ಟೆಲಿಕಾಂ ಮತ್ತು ಡಿಜಿಟಲ್ ವ್ಯವಹಾರ ಎರಡನ್ನೂ ಹೊಂದಿರುವ ಜಿಯೋ ಪ್ಲಾಟ್‌ಫಾರ್ಮ್‌ನ ಆದಾಯವು ಸೆಪ್ಟೆಂಬರ್ 2021 ರ ತ್ರೈಮಾಸಿಕದಲ್ಲಿ 19,777 ಕೋಟಿ ರೂಪಾಯಿಗಳಿಗೆ ಹೋಲಿಕೆ ಮಾಡಿದಾಗ ಈ ವರ್ಷದ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಶೇಕಡ 22.7ರಷ್ಟು ಹೆಚ್ಚಳವಾಗಿದೆ. ಅಂದರೆ 4,275 ಕೋಟಿ ರೂಪಾಯಿಗಳಿಗೆ ಏರಿಕೆಯಾಗಿದೆ.
ತ್ರೈಮಾಸಿಕದಲ್ಲಿ ಕಂಪನಿಯ ಪ್ರತಿ ಬಳಕೆದಾರರಿಗೆ (ARPU) ಸರಾಸರಿ ಆದಾಯವು ವರ್ಷದಿಂದ ವರ್ಷಕ್ಕೆ 23.5 ಪ್ರತಿಶತದಷ್ಟು ಏರಿದೆ. ಪ್ರತಿ ಚಂದಾದಾರರಿಗೆ ತಿಂಗಳಿಗೆ 177.2 ರೂಪಾಯಿ ಆದಾಯವಿದೆ. ಜೂನ್ ತ್ರೈಮಾಸಿಕದಲ್ಲಿ ರೂ 175.7ರಷ್ಟಾಗಿತ್ತು.
ಜಿಯೋ ನೆಟ್‌ವರ್ಕ್‌ನಲ್ಲಿನ ಒಟ್ಟು ಡೇಟಾ ಟ್ರಾಫಿಕ್ ಶೇಕಡಾ 22.7 ರಷ್ಟು ಬೆಳೆದು 28.2 ಬಿಲಿಯನ್ ಗಿಗಾಬೈಟ್‌ಗಳಿಗೆ ತಲುಪಿದೆ. ಜಿಯೋ 20 ವರ್ಷಗಳವರೆಗೆ 25,040 MHz ತಂತ್ರಜ್ಞಾನದ ಸ್ಪೆಕ್ಟ್ರಮ್ ಅನ್ನು 88,078 ಕೋಟಿ ರೂಪಾಯಿಗಳಿಗೆ ಬಳಸುವ ಹಕ್ಕನ್ನು ಪಡೆದುಕೊಂಡಿದೆ. ಈ ಮೊತ್ತವನ್ನು 20 ಸಮಾನ ವಾರ್ಷಿಕ ಕಂತುಗಳಿಗೆ ಪಾವತಿಸಬೇಕಾಗುತ್ತದೆ. ಬಡ್ಡಿಯನ್ನು ವಾರ್ಷಿಕವಾಗಿ 7.2 ರಷ್ಟು ಲೆಕ್ಕಹಾಕಲಾಗುತ್ತದೆ. ಇದರಿಂದ ವಾರ್ಷಿಕ 7,877 ಕೋಟಿ ರೂಪಾಯಿ ಆಗಿದೆ.


Click it and Unblock the Notifications