ದೇಶದಲ್ಲಿ ಬಹುದೊಡ್ಡ ಟೆಲಿಕಾಂ ಸಂಸ್ಥೆಗಳಲ್ಲಿ ಒಂದಾದ ರಿಲಯನ್ಸ್ ಜಿಯೋ ಹೊಸ ಮೊಬೈಲ್ ಡೇಟಾ ಪ್ಯಾಕ್‌ವೊಂದನ್ನು ಪರಿಚಯಿಸಿದೆ. ಹೊಸ 999 ರುಪಾಯಿ ಪ್ರಿಪೇಯ್ಡ್ ಪ್ಲ್ಯಾನ್‌ನಲ್ಲಿ ಬಳಕೆದಾರರಿಗೆ ದಿನಕ್ಕೆ 3 GB ಹೈಸ್ಪೀಡ್ ಡೇಟಾ ದೊರೆಯಲಿದೆ.
ಡೇಟಾ ಸ್ಪೀಡ್ ಅಷ್ಟೇ ಅಲ್ಲದೆ, ಜಿಯೋದಿಂದ ಜಿಯೋ ಮಾತ್ರವಲ್ಲದೆ, ಇತರ ನೆಟ್‌ವರ್ಕ್‌ಗೂ ಅನಿಯಮಿತ ಕರೆ ಸೌಲಭ್ಯ ಮತ್ತು ಎಸ್‌ಎಂಎಸ್ ಕೊಡುಗೆ ಲಭ್ಯವಿದೆ. ರಿಲಯನ್ಸ್ ಜಿಯೋ ಅಧಿಕೃತ ವೆಬ್‌ಸೈಟ್‌ನಲ್ಲಿ ನೂತನ ಪ್ಲ್ಯಾನ್ ವಿವರವನ್ನು ಪ್ರಕಟಿಸಿದ್ದು, ಹೆಚ್ಚು ಡೇಟಾ ಬಳಸುವ ಗ್ರಾಹಕರು ಕೊಡುಗೆಯ ಪ್ರಯೋಜನ ಪಡೆಯಬಹುದು. ಹೆಚ್ಚು ವ್ಯಾಲಿಡಿಟಿ ಮತ್ತು ಹೆಚ್ಚು ಡೇಟಾ ಬಯಸುವವರಿಗೆ ಈ ಪ್ಯಾಕ್ ಉತ್ತಮವಾಗಿದೆ.
999 ರುಪಾಯಿ ಪ್ಯಾಕ್‌ನಲ್ಲಿ ಏನೇನಿದೆ?
ಈ ಜಿಯೋ ಡೇಟಾ ಪ್ಯಾಕ್‌ನಲ್ಲಿ 84 ದಿನಗಳ ವ್ಯಾಲಿಡಿಟಿ ಹೊಂದಿದೆ. ದಿನಕ್ಕೆ 3GB ಡೇಟಾ ದೊರೆಯಲಿದ್ದು, ಅಂದರೆ ಒಟ್ಟಾರೆ 252 ಜಿಬಿ ಹೈ ಸ್ಪೀಡ್ ಡೇಟಾ ಲಭ್ಯವಾಗುತ್ತದೆ. ಮತ್ತೆ ಜಿಯೋದಿಂದ ಜಿಯೋ ಅನಿಯಮಿತ ಕರೆ ಮಾತ್ರವಲ್ಲದೆ, ಇತರ ನೆಟ್‌ವರ್ಕ್‌ಗೂ 3,000 ನಿಮಿಷಗಳ ಕರೆ ಪ್ರಯೋಜನ ನೀಡಲಾಗಿದೆ. ಜೊತೆಗೆ ಜಿಯೋ ಸೇವೆಗಳಿಗೆ ಉಚಿತ ಪ್ರವೇಶ, ದಿನಕ್ಕೆ 100 ಎಸ್‌ಎಂಎಸ್ ಕೂಡ ದೊರೆಯಲಿದೆ.
555 ರುಪಾಯಿ ಪ್ಲ್ಯಾನ್‌ನಲ್ಲಿ ಏನು ಆಫರ್?
ಈ ಹಿಂದೆಯೇ ಪ್ರಕಟಿಸಿರುವ ಜಿಯೋ 555 ರುಪಾಯಿ ಪ್ಲ್ಯಾನ್ ಕೂಡ 84 ದಿನಗಳ ವ್ಯಾಲಿಡಿಟಿ ಹೊಂದಿದೆ. ಪ್ರತಿದಿನ 1.5GB ಮೊಬೈಲ್ ಡೇಟಾ ದೊರೆಯಲಿದ್ದು, ಜಿಯೋಯಿಂದ ಜಿಯೋ ಅನಿಯಮಿತ ಕರೆ ಲಭ್ಯವಿದೆ. ಇತರೆ ಮೊಬೈಲ್‌ಗಳಿಗೆ 3,000 ನಿಮಿಷಗಳ ಉಚಿತ ಕರೆ ಸೌಲಭ್ಯವಿದೆ. ಜೊತೆಗೆ ದಿನಕ್ಕೆ 100 ಎಸ್‌ಎಂಎಸ್ ಕೂಡ ದೊರೆಯಲಿದೆ.
599 ರುಪಾಯಿ ಪ್ಲ್ಯಾನ್
ರಿಲಯನ್ಸ್ ಜಿಯೋ 599 ರುಪಾಯಿ ಪ್ಲ್ಯಾನ್‌ನಲ್ಲಿ ಪ್ರತಿದಿನ 2 GB ಮೊಬೈಲ್ ಡೇಟಾ ದೊರೆಯಲಿದ್ದು, ಜಿಯೋಯಿಂದ ಜಿಯೋ ಮೊಬೈಲ್ ಮತ್ತು ಲ್ಯಾಂಡ್‌ಲೈನ್‌ಗೆ ಅನಿಯಮಿತ ಕರೆ ಲಭ್ಯವಿದೆ. ಇತರೆ ಮೊಬೈಲ್‌ಗಳಿಗೆ 3,000 ನಿಮಿಷಗಳ ಉಚಿತ ಕರೆ ಸೌಲಭ್ಯವಿದೆ. ಜೊತೆಗೆ ದಿನಕ್ಕೆ 100 ಎಸ್‌ಎಂಎಸ್ ಕೂಡ ದೊರೆಯಲಿದೆ. ಇದರ ವ್ಯಾಲಿಡಿಟಿ ಕೂಡ 84 ದಿನಗಳು.


Click it and Unblock the Notifications