For Quick Alerts
ALLOW NOTIFICATIONS  
For Daily Alerts

ಜಿಯೋ ಪ್ರೀಪೇಯ್ಡ್ ವಾರ್ಷಿಕ ಪ್ಲ್ಯಾನ್ ದರ ಹೆಚ್ಚಳ, ಈಗ ಎಷ್ಟು ಗೊತ್ತಾ?

|

ಪ್ರೀಪೇಯ್ಡ್ ಗ್ರಾಹಕರಿಗಾಗಿ ರಿಲಯನ್ಸ್ ಜಿಯೋದಿಂದ ವಾರ್ಷಿಕ ಪ್ಲ್ಯಾನ್ ಅನ್ನು ಪರಿಷ್ಕರಣೆ ಮಾಡಲಾಗಿದೆ. ಈ ಹಿಂದೆ 2020 ರುಪಾಯಿ ಇದ್ದ ದರವು 2121 ರುಪಾಯಿಗೆ ಏರಿಕೆ ಮಾಡಲಾಗಿದೆ. ಆದರೆ ಈ ಪ್ಲ್ಯಾನ್ ಗೆ ದೊರೆಯುತ್ತಿದ್ದ ಅನುಕೂಲಗಳಲ್ಲಿ ಯಾವುದೇ ಬದಲಾವಣೆಯನ್ನು ಮಾಡಿಲ್ಲ.

101 ರುಪಾಯಿ ಏರಿಕೆ ಮಾಡುವ ಮೂಲಕ ತಿಂಗಳಿಗೆ (ಜಿಯೋ ಪ್ರಕಾರ 28 ದಿನಕ್ಕೆ ಒಂದು ತಿಂಗಳು) 8.4 ರುಪಾಯಿ ಹೆಚ್ಚಳ ಮಾಡಿದೆ. 336 ದಿನಕ್ಕೆ 504 ಜಿ.ಬಿ. ಡೇಟಾ ದೊರೆಯುತ್ತದೆ. ಬಳಕೆದಾರರಿಗೆ ನಿತ್ಯವೂ 1.5 ಜಿ.ಬಿ. ಡೇಟಾ ದೊರೆಯಲಿದೆ. ಜಿಯೋದಿಂದ ಜಿಯೋ ನೆಟ್ ವರ್ಕ್ ನ ಇತರ ಫೋನ್ ಗಳಿಗೆ ಅನಿಯಮಿತ ಕರೆಗಳು ಹಾಗೂ ಇತರ ನೆಟ್ ವರ್ಕ್ ಗೆ 12000 ನಿಮಿಷಗಳ ಉಚಿತ ಕರೆಗಳು ಇರುತ್ತವೆ.

ರಿಲಯನ್ಸ್ ಜಿಯೋದಿಂದ 'ಹ್ಯಾಪಿ ನ್ಯೂ ಇಯರ್' ಪ್ಲಾನ್ರಿಲಯನ್ಸ್ ಜಿಯೋದಿಂದ 'ಹ್ಯಾಪಿ ನ್ಯೂ ಇಯರ್' ಪ್ಲಾನ್

ಒಂದು ದಿನಕ್ಕೆ 100 ಎಸ್ಸೆಮ್ಮೆಸ್ ಮಾಡಬಹುದು. ಡೇಟಾ ಪ್ಯಾಕೇಜ್ ಅಡಿಯಲ್ಲಿ ಜಿಯೋ ಅಪ್ಲಿಕೇಷನ್ ಎಲ್ಲಕ್ಕೂ ಉಚಿತವಾದ ಚಂದಾ ದೊರೆಯುತ್ತದೆ. ಇತರ ಇದೇ ರೀತಿ ಪ್ಲ್ಯಾನ್ ಗಳಲ್ಲಿ 84 ದಿನಗಳ ವ್ಯಾಲಿಡಿಟಿಗೆ 555 ರುಪಾಯಿ ಆಗುತ್ತದೆ. 126 ಜಿಬಿ ಡೇಟಾ ದೊರೆಯುತ್ತದೆ. ಜಿಯೋ ಹೊರತಾದ ನೆಟ್ ವರ್ಕ್ ಗೆ 3000 ನಿಮಿಷಗಳ ಕರೆ ಸೌಲಭ್ಯ ದೊರೆಯುತ್ತದೆ. ಉಳಿದ ಅನುಕೂಲಗಳು ಮಾಮೂಲಿನಂತೆ ಇರುತ್ತವೆ.

ಜಿಯೋ ಪ್ರೀಪೇಯ್ಡ್ ವಾರ್ಷಿಕ ಪ್ಲ್ಯಾನ್ ದರ ಹೆಚ್ಚಳ, ಈಗ ಎಷ್ಟು ಗೊತ್ತಾ?

56 ದಿನಗಳ ವ್ಯಾಲಿಡಿಟಿಗೆ 399 ರುಪಾಯಿ ಆಗುತ್ತದೆ. ಇದರಲ್ಲಿ ಜಿಯೋ ಹೊರತಾದ ನೆಟ್ ವರ್ಕ್ ಗಳಿಗೆ 2000 ನಿಮಿಷಗಳ ಉಚಿತ ಕರೆ ಸೌಲಭ್ಯ ಇದೆ. ಅತ್ಯಂತ ಅಗ್ಗದ ಪ್ಲ್ಯಾನ್ ಅಂದರೆ, 28 ದಿನಕ್ಕೆ 199 ರುಪಾಯಿ. ದಿನಕ್ಕೆ 1.5 ಜಿ.ಬಿ. ಉಚಿತ ಡೇಟಾ ದೊರೆಯಲಿದ್ದು, ಜಿಯೋ ಹೊರತಾದ ನೆಟ್ ವರ್ಕ್ ಗೆ 1000 ನಿಮಿಷಗಳ ಉಚಿತ ಕರೆ ಮಾಡಬಹುದು.

English summary

Reliance Jio Yearly Plan Changed, Price Increased

Reliance Jio yearly plan changed and price has been increased. Here is the complete details.
Story first published: Friday, February 21, 2020, 13:55 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X