For Quick Alerts
ALLOW NOTIFICATIONS  
For Daily Alerts

ಜಿಯೋಫೈಬರ್ ನಿಂದ 399 ರುಪಾಯಿಗೆ ಅನ್ ಲಿಮಿಟೆಡ್ ಇಂಟರ್ನೆಟ್

|

ರಿಲಯನ್ಸ್ ಜಿಯೋದಿಂದ ಜಿಯೋ ಫೈಬರ್ ಬ್ರಾಡ್ ಬ್ಯಾಂಡ್ ಪ್ಲಾನ್ ಗಳಲ್ಲಿ ಬದಲಾವಣೆ ಮಾಡಲಾಗಿದೆ. ಇದೀಗ ಗ್ರಾಹಕರಿಗೆ ನಿಜವಾಗಲೂ ಅನಿಯಮಿತ ಡೇಟಾ ಆಫರ್ ನೀಡುತ್ತಿದೆ. ಕೊರೊನಾ ಸಮಯದಲ್ಲಿ ಗ್ರಾಹಕರಿಗೆ ಕೈಗೆಟುಕುವ ಬೆಲೆಗೆ ಈ ಪ್ಲಾನ್ ಗಳನ್ನು ರೂಪಿಸಲಾಗಿದೆ ಎಂದು ಕಂಪೆನಿ ತಿಳಿಸಿದೆ.

ಅಂದ ಹಾಗೆ, ಹೊಸ ಬ್ರಾಡ್ ಬ್ಯಾಂಡ್ ಪ್ಲಾನ್ ತಿಂಗಳಿಗೆ 399 ರುಪಾಯಿಯಿಂದ ಶುರುವಾಗುತ್ತದೆ. ಈ ಹೊಸ ಪ್ಲಾನ್ ನಲ್ಲಿ ಜಿಯೋ ಫೈಬರ್ ಗ್ರಾಹಕರಿಗೆ ನಿಜವಾಗಿಯೂ ಅನಿಯಮಿತ ಇಂಟರ್ ನೆಟ್ ದೊರೆಯಲಿದ್ದು, ಉತ್ತಮ ವೇಗವೂ ಇರಲಿದೆ. ಇದರ ಜತೆಗೆ 12 ಒಟಿಟಿ ಪ್ಲಾಟ್ ಫಾರ್ಮ್ ಗಳ (ಆಯ್ದ ಪ್ಲಾನ್ ಗಳಿಗೆ) ಸಬ್ ಸ್ಕ್ರಿಪ್ಷನ್ ಕೂಡ ಸಿಗುತ್ತದೆ.

399 ಹಾಗೂ 699 ರುಪಾಯಿ ಪ್ಲಾನ್

399 ಹಾಗೂ 699 ರುಪಾಯಿ ಪ್ಲಾನ್

ಹೊಸ ಸಂಪರ್ಕ ಪಡೆಯುವಾಗ ಮರುಪಾವತಿ ಆಗುವಂಥ ಒಂದು ಸಲದ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಹೊಸ 399 ರುಪಾಯಿ ಪ್ಲಾನ್ ನಲ್ಲಿ ಅನಿಯಮಿತ ಇಂಟರ್ ನೆಟ್ ಜತೆಗೆ ಡೌನ್ ಲೋಡ್ ಹಾಗೂ ಅಪ್ ಲೋಡ್ ಕೂಡ ಮಾಡಬಹುದು. ವೇಗಕ್ಕೆ 30Mbps ಮಿತಿ ಇರುತ್ತದೆ. ಇದರ ಜತೆಗೆ ಹೆಚ್ಚುವರಿಯಾಗಿ ಅನಿಯಮಿತ ಕರೆ ಸೌಲಭ್ಯವೂ ಇದೆ. ಆದರೆ ಯಾವುದೇ ಒಟಿಟಿ ಪ್ಲಾಟ್ ಪಾರ್ಮ್ ಬರುವುದಿಲ್ಲ. ಇನ್ನು 699 ರುಪಾಯಿ ಪ್ಲಾನ್ ನಲ್ಲಿ ಕಂಪೆನಿಯು ಅನಿಯಮಿತ ಇಂಟರ್ ನೆಟ್ ಸಂಪರ್ಕವನ್ನು 100 Mbps ವೇಗದಲ್ಲಿ ನೀಡುತ್ತದೆ. ಇದರಲ್ಲಿ ಸಹ ಅನಿಯಮಿತವಾದ ಕರೆ ಸೌಲಭ್ಯ ಇದೆ. ಆದರೆ ಯಾವುದೇ ಒಟಿಟಿ ಪ್ಲಾಟ್ ಫಾರ್ಮ್ ಸಬ್ ಸ್ಕ್ರಿಪ್ಷನ್ ದೊರೆಯುವುದಿಲ್ಲ.

999 ಹಾಗೂ 1499 ರುಪಾಯಿಯ ಪ್ಲಾನ್

999 ಹಾಗೂ 1499 ರುಪಾಯಿಯ ಪ್ಲಾನ್

999 ರುಪಾಯಿಯ ಪ್ಲಾನ್ ನಲ್ಲಿ ಕಂಪೆನಿಯಿಂದ ಅನಿಯಮಿತ ಇಂಟರ್ ನೆಟ್ ಅನ್ನು 150 Mbps ವೇಗದಲ್ಲಿ ನೀಡಲಾಗುತ್ತದೆ. ಅದರ ಜತೆಗೆ ಅನಿಯಮಿತ ವಾಯ್ಸ್ ಕಾಲ್ ಹಾಗೂ ಹನ್ನೊಂದು ಒಟಿಟಿ ಅಪ್ಲಿಕೇಷನ್ ಗಳ ಸಬ್ ಸ್ಕ್ರಿಪ್ಷನ್ ದೊರೆಯುತ್ತದೆ. 1499 ರುಪಾಯಿಯ ಮತ್ತೊಂದು ಪ್ಲಾನ್ ಇದ್ದು, ಇದರಲ್ಲಿ ಗ್ರಾಹಕರಿಗೆ 300 Mbps ತನಕ ವೇಗ ದೊರೆಯುತ್ತದೆ. ಇದರ ಜತೆಗೆ ಅನಿಯಮಿತವಾದ ವಾಯ್ಸ್ ಕಾಲಿಂಗ್ ಸೌಲಭ್ಯ ಇದೆ. 12 ಒಟಿಟಿ ಅಪ್ಲಿಕೇಷನ್ ಗಳಿಗೆ ಸಬ್ ಸ್ಕ್ರಿಪ್ಷನ್ ದೊರೆಯಲಿದೆ ಎಂದು ಕಂಪೆನಿ ಹೇಳಿಕೆಯಲ್ಲಿ ತಿಳಿಸಲಾಗಿದೆ.

30 ದಿನಗಳ ಟ್ರಯಲ್
 

30 ದಿನಗಳ ಟ್ರಯಲ್

ಈ ಪ್ಲಾನ್ ನಲ್ಲಿ ಜಿಯೋ ಫೈಬರ್ ಸೆಟ್ ಟಾಪ್ ಬಾಕ್ಸ್ ಕೂಡ ದೊರೆಯಲಿದ್ದು, ಒಟಿಟಿ ಕಂಟೆಂಟ್ ಗೆ ಆನ್ ಲೈನ್ ಸಂಪರ್ಕ ದೊರೆಯುತ್ತದೆ. ಸೆಟ್ ಟಾಪ್ ಬಾಕ್ಸ್ ಗೆ ವಾಯ್ಸ್ ಕಮ್ಯಾಂಡ್ ನ ರಿಮೋಟ್ ದೊರೆಯುತ್ತದೆ. ಜಿಯೋಗೇಮ್ಸ್ ಮತ್ತು ಜಿಯೋಸಾವನ್ ಸೇರಿದಂತೆ ಇತರ ಆನ್ ಲೈನ್ ಸೇವೆಗಳು ಸಹ ದೊರೆಯುತ್ತವೆ. ಈ ಹೊಸ ಪ್ಲಾನ್ ಗಳನ್ನು ಪರಿಚಯಿಸುತ್ತಿರುವ ಸಂದರ್ಭದಲ್ಲಿ 30 ದಿನಗಳ ಟ್ರಯಲ್ ದೊರೆಯುತ್ತದೆ. ಇದರಲ್ಲಿ ರೀಫಂಡ್ ಇರುವುದಿಲ್ಲ. ಈ ಟ್ರಯಲ್ ನಲ್ಲಿ 150 Mbps ವೇಗದ ಇಂಟರ್ ನೆಟ್ ವೇಗ ದೊರೆಯುತ್ತದೆ. 4K ಸೆಟ್ ಟಾಪ್ ಬಾಕ್ಸ್ ಜತೆಗೆ 10 ಪೇಯ್ಡ್ ಒಟಿಟಿ ಪ್ಲಾಟ್ ಫಾರ್ಮ್ಸ್ ಬರುತ್ತದೆ. ಅನಿಯಮಿತ ವಾಯ್ಸ್ ಕಾಲಿಂಗ್ ಸೌಲಭ್ಯ ದೊರೆಯಲಿದೆ. ಮೊದಲಿಗೆ ಗ್ರಾಹಕರು ಸೆಕ್ಯೂರಿಟಿ ಡೆಪಾಸಿಟ್ ಕಟ್ಟಬೇಕು. ಅದು ರೀಫಂಡ್ ಆಗುವುದಿಲ್ಲ. ಆ ನಂತರ ಸೆಟ್ ಟಾಪ್ ಬಾಕ್ಸ್ ಹಾಗೂ ಜಿಯೋಫೈಬರ್ ಮೋಡೆಮ್ ಸಿಗುತ್ತದೆ.

1600ಕ್ಕೂ ಹೆಚ್ಚು ನಗರ ಹಾಗೂ ಪಟ್ಟಣಗಳಲ್ಲಿ ಜಿಯೋ ಬ್ರಾಡ್ ಬ್ಯಾಂಡ್

1600ಕ್ಕೂ ಹೆಚ್ಚು ನಗರ ಹಾಗೂ ಪಟ್ಟಣಗಳಲ್ಲಿ ಜಿಯೋ ಬ್ರಾಡ್ ಬ್ಯಾಂಡ್

ಸೆಪ್ಟೆಂಬರ್ 1ರಿಂದ ಯಾರೆಲ್ಲ ಹೊಸದಾಗಿ ಸಂಪರ್ಕ ಪಡೆಯುವ ಗ್ರಾಹಕರಿಗೆ 30 ದಿನಗಳ ಉಚಿತ ಟ್ರಯಲ್ ದೊರೆಯುತ್ತದೆ. ಇನ್ನು ಈಗಾಗಲೇ ಇರುವ ಜಿಯೋ ಗ್ರಾಹಕರು ಹೊಸ ಪ್ಲಾನ್ ಗೆ ಬದಲಾವಣೆ ಮಾಡಿಕೊಳ್ಳಬಹುದು. ಆಗಸ್ಟ್ 15ರಿಂದ 30ರ ತನಕ ಈ ಸೇವೆ ಆಕ್ಟಿವೇಟ್ ಮಾಡಿದವರಿಗೆ ಉಚಿತ ಟ್ರಯಲ್ ಮೈಜಿಯೋ ಆಪ್ ನಲ್ಲಿ ವೋಚರ್ ರೂಪದಲ್ಲಿ ದೊರೆಯಲಿದೆ. ಜಿಯೋಫೈಬರ್ ಈಗಾಗಲೇ ದೇಶದ ಅತಿ ದೊಡ್ಡ ಫೈಬರ್ ಎನಿಸಿಕೊಂಡಿದೆ. ಹತ್ತು ಲಕ್ಷಕ್ಕೂ ಹೆಚ್ಚು ಮನೆಗಳಿಗೆ ಸಂಪರ್ಕ ಒದಗಿಸಲಾಗಿದೆ. 1600ಕ್ಕೂ ಹೆಚ್ಚು ನಗರ ಹಾಗೂ ಪಟ್ಟಣಗಳಲ್ಲಿ ಜಿಯೋ ಬ್ರಾಡ್ ಬ್ಯಾಂಡ್ ಸೇವೆ ಒದಗಿಸುತ್ತಿದೆ.

English summary

Reliance JioFiber New Broadband Plans Starts at Rs 399; Check Details in Kannada

Reliance JioFiber has new broadband plan with unlimited data. Plan starts from 399. Here is the complete details.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X