For Quick Alerts
ALLOW NOTIFICATIONS  
For Daily Alerts

ಫ್ಯೂಚರ್ ಜೊತೆ ಡೀಲ್, ಮಧ್ಯಂತರ ಆದೇಶದ ಬಗ್ಗೆ RIL ಪ್ರತಿಕ್ರಿಯೆ

|

ಫ್ಯೂಚರ್ ಗ್ರೂಪ್‌ನ ಪ್ರವರ್ತಕರೊಂದಿಗೆ ಷೇರುದಾರರ ಒಪ್ಪಂದದ ಪ್ರಕಾರ ಅಮೆಜಾನ್ ಕೋರಿದ್ದ ಮಧ್ಯಸ್ಥಿಕೆ ಪ್ರಕ್ರಿಯೆಯಲ್ಲಿ ತುರ್ತು ಮಧ್ಯಸ್ಥಿಕೆದಾರರು ನೀಡಿರುವ ಮಧ್ಯಂತರ ಆದೇಶದ ಬಗ್ಗೆ ರಿಲಯನ್ಸ್ ರಿಟೇಲ್ ವೆಂಚರ್ಸ್ ಲಿಮಿಟೆಡ್‌ಗೆ (ಆಆರ್‌ವಿಎಲ್) ಅಧಿಕೃತ ಪ್ರತಿಕ್ರಿಯೆ ನೀಡಿದೆ.

 

ಫ್ಯೂಚರ್ ರಿಟೇಲ್ ಲಿಮಿಟೆಡ್‌ನ ಆಸ್ತಿ ಮತ್ತು ವ್ಯವಹಾರವನ್ನು ಸ್ವಾಧೀನಪಡಿಸಿಕೊಳ್ಳುವ ವಹಿವಾಟನ್ನು ಆರ್‌ಆರ್‌ವಿಎಲ್ ಸರಿಯಾದ ಕಾನೂನು ಸಲಹೆಯ ಮೇರೆಗೆ ಪ್ರಾರಂಭಿಸಿದೆ ಹಾಗೂ ಹಕ್ಕುಗಳು ಮತ್ತು ಮತ್ತು ಕಟ್ಟುಪಾಡುಗಳನ್ನು ಭಾರತೀಯ ಕಾನೂನಿನಡಿ ಸಂಪೂರ್ಣವಾಗಿ ಜಾರಿಗೊಳಿಸಬಹುದಾಗಿದೆ.

 

ರಿಲಯನ್ಸ್-ಫ್ಯೂಚರ್ ಡೀಲ್ ಸ್ಥಗಿತ, ಅಮೆಜಾನ್‌ಗೆ ತಾತ್ಕಾಲಿಕ ರಿಲೀಫ್ರಿಲಯನ್ಸ್-ಫ್ಯೂಚರ್ ಡೀಲ್ ಸ್ಥಗಿತ, ಅಮೆಜಾನ್‌ಗೆ ತಾತ್ಕಾಲಿಕ ರಿಲೀಫ್

ಯಾವುದೇ ವಿಳಂಬವಿಲ್ಲದೆ ತನ್ನ ಹಕ್ಕುಗಳನ್ನು ಜಾರಿಗೊಳಿಸಲು ಹಾಗೂ ಕಾರ್ಯಯೋಜನೆ ಮತ್ತು ಫ್ಯೂಚರ್ ಗ್ರೂಪ್ ಜೊತೆಗಿನ ಒಪ್ಪಂದಕ್ಕೆ ಸಂಬಂಧಿಸಿದಂತೆ ವಹಿವಾಟನ್ನು ಪೂರ್ಣಗೊಳಿಸಲು ಆರ್‌ಆರ್‌ವಿಎಲ್ ಉದ್ದೇಶಿಸಿದೆ ಎಂದು ಸಂಸ್ಥೆ ಪ್ರಕಟಿಸಿದೆ.

ಫ್ಯೂಚರ್ ಜೊತೆ ಡೀಲ್, ಮಧ್ಯಂತರ ಆದೇಶದ ಬಗ್ಗೆ RIL ಪ್ರತಿಕ್ರಿಯೆ

ಸರಿ ಸುಮಾರು 24,713 ಕೋಟಿ ರು ಮೌಲ್ಯಕ್ಕೆ ಫ್ಯೂಚರ್ ಗ್ರೂಪ್ ಸಂಸ್ಥೆಯನ್ನು ಖರೀದಿಸಲು ರಿಲಯನ್ಸ್ ಇಂಡಸ್ಟ್ರೀಸ್ ಮುಂದಾಗಿತ್ತು. ಆದರೆ, ಇದರ ವಿರುದ್ಧ ಅಮೆಜಾನ್ ಸಂಸ್ಥೆ ಸಿಂಗಪುರದಲ್ಲಿ ದಾವೆ ಹೂಡಿತ್ತು. ಅರ್ಜಿ ವಿಚಾರಣೆ ನಡೆಸಿದ ಸಿಂಗಪುರದ ಏಕಸದಸ್ಯ ನ್ಯಾಯಪೀಠವು ರಿಲಯನ್ಸ್-ಫ್ಯೂಚರ್ ಒಪ್ಪಂದಕ್ಕೆ ತಡೆಯಾಜ್ಞೆ ನೀಡಿದೆ.

ಬಿಯಾನಿ ಅವರ ಫ್ಯೂಚರ್ ಗ್ರೂಪ್ ಸಂಸ್ಥೆಯು ರಿಲಯನ್ಸ್ ರಿಟೇಲ್ ಜೊತೆ ಒಪ್ಪಂದವನ್ನು ಘೋಷಿಸುವ ಮೂಲಕ ಈ ಹಿಂದೆ ಅಮೆಜಾನ್ ಜೊತೆಗಿನ ಒಪ್ಪಂದದ ಕಟ್ಟುಪಾಡುಗಳನ್ನು ಉಲ್ಲಂಘಿಸಿದೆ ಎಂದು ಅಮೆಜಾನ್ ಆರೋಪಿಸಿದೆ.

English summary

Reliance Media Statement on Interim Order on deal with Future group

RRVL has entered into the transaction for acquisition of assets and business of Future Retail Limited under proper legal advice and the rights and obligations are fully enforceable under Indian Law.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X