ರಿಲಯನ್ಸ್ ಇಂಡಸ್ರ್ಟೀಸ್ ಲಿಮಿಟೆಡ್‌ನ (ಆರ್‌ಐಎಲ್) ಸಂಪೂರ್ಣ ಒಡಡೆತನದ ಅಂಗ ಸಂಸ್ಥೆ ರಿಲಯನ್ಸ್ ನ್ಯೂ ಎನರ್ಜಿ ಸೋಲಾರ್ ಲಿಮಿಟೆಡ್ (ಆರ್ ಎನ್ಇಎಸ್‌ಎಲ್) ತಾಂತ್ರಿಕ ಹೂಡಿಕೆದಾರರಾದ ಪಾಲ್ಸನ್ ಅಂಡ್ ಕೋ. ಇಂಕ್.ಅಮೆರಿಕದ ಮೆಸಾಚುಸೆಟ್ಸ್ ಮೂಲದ ವಿದ್ಯುಚ್ಛಕ್ತಿ ಶೇಖರಣಾ ಸಂಸ್ಥೆ ಅಂಬ್ರಿ ಇಂಕ್.ನಲ್ಲಿ ಜಂಟಿಯಾಗಿ 144 ಮಿಲಿಯನ್ ಅಮೆರಿಕನ್ ಡಾಲರ್ (ಅಂದಾಜು 1,071 ಕೋಟಿ ರೂಪಾಯಿ) ಹೂಡಿಕೆ ಮಾಡುವುದಾಗಿ ಘೋಷಿಸಿದೆ.
ಬಿಲ್ ಗೇಟ್ಸ್ ಹಾಗೂ ಇತರ ಕೆಲವು ಸಂಸ್ಥೆಗಳೊಂದಿಗೆ ಸೇರಿಕೊಂಡು ಆರ್ಎನ್ಇಎಸ್‌ಎಲ್ ಈ ಬೃಹತ್ ಹೂಡಿಕೆಯನ್ನು ಮಾಡುತ್ತಿದೆ. ಸಂಸ್ಥೆಯನ್ನು ವಾಣಿಜ್ಯೀಕರಣಗೊಳಿಸುವ ಮತ್ತು ದೀರ್ಘಾವಧಿ ವಿದ್ಯುಚ್ಛಕ್ತಿ ಶೇಖರಣ ಸಾಧನ ಉದ್ಯಮದಲ್ಲಿ ಜಾಗತಿಕವಾಗಿ ಬೆಳೆಯಲು ಈ ಹೂಡಿಕೆ ನೆರವಾಗಲಿದೆ. ಅಂಬ್ರಿ ಸಂಸ್ಥೆಯ 42.3 ಮಿಲಿಯನ್ (4.23 ಕೋಟಿ) ಆದ್ಯತಾ ಷೇರುಗಳನ್ನು ಸ್ವಾಧೀನಪಡಿಸಿಕೊಳ್ಳಲು ಆರ್ ಎನ್ಇಎಸ್ಎಲ್ 50 ಮಿಲಿಯನ್ ಅಮೆರಿಕನ್ ಡಾಲರ್ (ಅಂದಾಜು 372 ಕೋಟಿ ರೂಪಾಯಿ) ಹೂಡಿಕೆ ಮಾಡಲಿದೆ.
4 ರಿಂದ 24 ಗಂಟೆಗಳವರೆಗೆ ಬಾಳಿಕೆ ಬರುವ ವಿನ್ಯಾಸ ಮತ್ತು ಹಕ್ಕುಸ್ವಾಮ್ಯ ಪಡೆದ ತಂತ್ರಜ್ಞಾನದ ನೆರವಿನಿಂದ ಅಂಬ್ರಿಯ ದೀರ್ಘಾವಧಿ ವಿದ್ಯುಚ್ಛಕ್ತಿ ಶೇಖರಣ ವ್ಯವಸ್ಥೆಯು ವೆಚ್ಚವನ್ನು ತಗ್ಗಿಸಲಿದೆ ಮತ್ತು ಗ್ರಿಡ್ ಮಟ್ಟದಲ್ಲಿ ಬಳಸುವ ಲೀಥಿಯಂ-ಐಯಾನ್ ಬ್ಯಾಟರಿ ಸಾಧನಗಳ ದೀರ್ಘ ಬಾಳಿಕೆ ಮತ್ತು ಸುರಕ್ಷತಾ ಸವಾಲುಗಳನ್ನು ನಿವಾರಿಸಲಿದೆ. ವಿದ್ಯುಚ್ಛಕ್ತಿ ಗ್ರಿಡ್‌ಗಳ ಜೊತೆಗೆ ಸಂಯೋಜನೆ ಸಾಧಿಸುವ ಕಾರಣ ನವೀಕರಿಸಬಹುದಾದ ಇಂಧನದ ಶೇಖರಣ ಸಾಮರ್ಥ್ಯ ಹೆಚ್ಚಿಸುವ ಸವಾಲಿನಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತವೆ.

ಭಾರತದಲ್ಲಿ ಬೃಹತ್ ಪ್ರಮಾಣದ ಬ್ಯಾಟರಿ ತಯಾರಿಕಾ ಘಟಕ ಸ್ಥಾಪಿಸುವ ವಿಶೇಷ ಸಹಭಾಗಿತ್ವದ ಕುರಿತಾಗಿಯೂ ಆರ್ ಎನ್ಇಎಸ್ಎಲ್ ಮತ್ತು ಅಂಬ್ರಿ ಚರ್ಚೆಯಲ್ಲಿ ತೊಡಗಿವೆ. ರಿಲಯನ್ಸ್‌ನ ಗ್ರೀನ್ ಎನರ್ಜಿ ಉಪಕ್ರಮದ ಸಾಮರ್ಥ್ಯ ಹೆಚ್ಚಿಸುವ ಮತ್ತು ವೆಚ್ಚ ತಗ್ಗಿಸುವ ನಿಟ್ಟಿನಲ್ಲಿ ಇದು ಸಹಕಾರಿ.
ಕಳೆದ ಜೂನ್ ತಿಂಗಳಿನಲ್ಲಿ ಷೇರುದಾರರನ್ನುದ್ದೇಶಿಸಿ ಮಾತನಾಡಿದ ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿ ಅವರು ದೀರೂಭಾಯಿ ಅಂಬಾನಿ ಗ್ರೀನ್ ಎನರ್ಜಿ ಗಿಗಾ ಕಾಂಪ್ಲೆಕ್ಸ್ ಯೋಜನೆಯ ಭಾಗವಾಗಿ ತಡೆಹಿಡಿಯಬಲ್ಲ ವಿದ್ಯುಚ್ಛಕ್ತಿ ಸಂಗ್ರಹಿಸಲೆಂದೇ ಜಾಮ್ನಗರದಲ್ಲಿ ಗಿಗಾ ಫ್ಯಾಕ್ಟರಿ ನಿರ್ಮಿಸುವುದಾಗಿ ಘೋಷಿಸಿದ್ದರು.
''ನಾವು ಉತ್ಪಾದಿಸುವ ವಿದ್ಯುಚ್ಛಕ್ತಿಯನ್ನು ಬೃಹತ್ ಪ್ರಮಾಣದ ಗ್ರಿಡ್ ಬ್ಯಾಟರಿಗಳಲ್ಲಿ ಸಂಗ್ರಹಿಸಿ ಬಳಸಬಹುದಾದ ವಿನೂತನ ಮತ್ತು ಸುಧಾರಿತ ವಿದ್ಯುತ್-ರಾಸಾಯನಿಕ ತಂತ್ರಜ್ಞಾನವನ್ನು ನಾವು ಅನ್ವೇಷಿಸುತ್ತಿದ್ದೇವೆ. ಉತ್ಪಾದನೆ, ಸಂಗ್ರಹ ಮತ್ತು ಗ್ರಿಡ್‌ಗಳಿಗೆ ಸಂಪರ್ಕಿಸುವ ಸಂಯೋಜನೆಯೊಂದಿಗೆ ನಿರಂತರ ವಿದ್ಯುತ್ ಲಭ್ಯತೆಯಲ್ಲಿ ಗರಿಷ್ಠ ವಿಶ್ವಾಸಾರ್ಹತೆ ಸಾಧಿಸಲು ನಾವು ಬ್ಯಾಟರಿ ತಂತ್ರಜ್ಞಾನದಲ್ಲಿ ಜಾಗತಿಕ ಪ್ರಮುಖ ಸಂಸ್ಥೆಗಳೊಂದಿಗೆ ಕೈಜೋಡಿಸಲಿದ್ದೇವೆ'' ಎಂದು ಅವರು ತಿಳಿಸಿದ್ದರು.
ಪ್ರತಿ ಗಂಟೆಗೆ 10 ಮೆಗಾವಾಟ್‌ನಿಂದ 2 ಗಿಗಾವಾಟ್‌ವರೆಗೂ ಅಧಿಕ ಶಕ್ತಿ ಸಂಗ್ರಹ ವ್ಯವಸ್ಥೆ ಅಗತ್ಯವಿರುವ ಯೋಜನೆಗೆಳಿಗೆ ಅಂಬ್ರಿ ಸೇವೆ ನೀಡಬಲ್ಲದು. ಸಂಸ್ಥೆಯು ಕ್ಯಾಲ್ಸಿಯಂ ಮತ್ತು ಆಂಟಿಮನಿ ಎಲೆಕ್ಟ್ರೋಡ್ ಆಧಾರಿತ ಸೆಲ್‌ಗಳು ಮತ್ತು ಸಂಗ್ರಹ ವ್ಯವಸ್ಥೆಗಳನ್ನು ಉತ್ಪಾದಿಸಲಿದೆ ಮತ್ತು ಅವು ಲೀಥಿಯಂ-ಐಯಾನ್ ಬ್ಯಾಟರಿಗಳಿಗಿಂತ ಕಡಿಮೆ ವೆಚ್ಚದಾಯಕ ಆಗಿರಲಿವೆ. ಅಲ್ಲದೆ, ಎಂತಹ ವಾತಾವರಣದಲ್ಲಾದರೂ ಪೂರಕ ಹವಾ ನಿಯಂತ್ರಣದ ಅಗತ್ಯವಿಲ್ಲದೇ ಸುರಕ್ಷಿತವಾಗಿ ಕಾರ್ಯನಿರ್ವಹಿಸಬಲ್ಲದು ಮತ್ತು ತೀರಾ ಕಡಿಮೆ ಸವಕಳಿಯೊಂದಿಗೆ 20 ವರ್ಷಕ್ಕೂ ಹೆಚ್ಚು ಅವಧಿಗೆ ಬಾಳಿಕೆ ಬರಬಲ್ಲದು.
ಹಗಲಿನ ಸೌರ ವಿದ್ಯುತ್ ಉತ್ಪಾದನೆಯಿಂದ ಸಂಜೆ ಮತ್ತು ಬೆಳಗಿನ ಗರಿಷ್ಠ ಲೋಡ್ ಅವಧಿಗೆ ವಿದ್ಯುಚ್ಛಕ್ತಿಯನ್ನು ಪರಿವರ್ತಿಸುವಂತಹ ಗರಿಷ್ಠ ಬಳಕೆ ಅಗತ್ಯಗಳಿಗೆ ಅಂಬ್ರಿ ವ್ಯವಸ್ಥೆ ಸೂಕ್ತವಾಗಿರಲಿದೆ. 2023 ಮತ್ತು ನಂತರ ಬೃಹತ್ ಪ್ರಮಾಣದ ಯೋಜನೆಯ ಗ್ರಾಹಕರಿಗೆ ವಾಣಿಜ್ಯಿಕ ಕಾರ್ಯಾಚರಣೆಯೊಂದಿಗೆ ತಲುಪುವುದು ಸಂಸ್ಥೆಯ ನಿರೀಕ್ಷೆ.
More From GoodReturns

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ



Click it and Unblock the Notifications