For Quick Alerts
ALLOW NOTIFICATIONS  
For Daily Alerts

40,000 ಸ್ವದೇಶಿ ಉತ್ಪನ್ನ ಮಾರಾಟ ದಾಖಲಿಸಿದ ರಿಲಯನ್ಸ್ ರೀಟೇಲ್

|

ಮುಂಬೈ, ನ 24: ಸ್ಥಳೀಯ ಕುಶಲಕರ್ಮ ಉತ್ಪನ್ನಗಳಿಗೆ ಉತ್ತೇಜನ ನೀಡುವ ಉದ್ದೇಶದಿಂದ ರಿಲಯನ್ಸ್ ರೀಟೇಲ್ ನಿಂದ 50 ಜಿಯಾಗ್ರಫಿಕಲ್ ಇಂಡಿಕೇಷನ್ (GI) ಕ್ಲಸ್ಟರ್ ಗಳ 40,000ಕ್ಕೂ ಹೆಚ್ಚು ಕುಶಲಕರ್ಮಿಗಳು ತಯಾರಿಸಿದ ಉತ್ಪನ್ನಗಳನ್ನು ಈ ಹಬ್ಬದ ಋತುವಿನಲ್ಲಿ ಗ್ರಾಹಕರಿಗಾಗಿ ಪ್ರದರ್ಶಿಸಲಾಗಿತ್ತು.

ಮೂರು ವರ್ಷದ ಹಿಂದೆ ಆರಂಭಿಸಲಾದ "ಇಂಡಿ ಬೈ AJIO" ಮತ್ತು "ಸ್ವದೇಶ್" ಅಭಿಯಾನದ ನೇರ ಫಲಿತಾಂಶ ಇದು. ಸ್ಥಳೀಯ ಕುಶಲಕರ್ಮಿಗಳಿಗೆ ಮಾರಾಟಕ್ಕೆ ದಾರಿ ಹಾಗೂ ಉದ್ಯೋಗಾವಕಾಶ ದೊರಕಿಸಬೇಕು ಎಂದು ಆರಂಭವಾದದ್ದೇ ಈ "ಇಂಡಿ ಬೈ AJIO" ಮತ್ತು "ಸ್ವದೇಶ್" ಅಭಿಯಾನ.

ಈಗ ಈ ಕಾರ್ಯಕ್ರಮದಲ್ಲಿ 30,000ಕ್ಕೂ ಹೆಚ್ಚು ಕುಶಲಕರ್ಮಿಗಳು ನಿರತರಾಗಿದ್ದು, 600ಕ್ಕೂ ಹೆಚ್ಚು ಉತ್ಪನ್ನಗಳು- ಬಟ್ಟೆ, ಟೆಕ್ಸ್ಟ್ ಟೈಲ್ಸ್, ಕೈಮಗ್ಗ ಹಾಗೂ ಕೈಯಿಂದಲೇ ತಯಾರಿಸಿದ ವಸ್ತುಗಳನ್ನು ಪ್ರತಿನಿಧಿಸುತ್ತಿದ್ದಾರೆ.

ಸಾಂಪ್ರದಾಯಿಕ ಕೈಮಗ್ಗ ಉತ್ಪನ್ನಗಳು

ಸಾಂಪ್ರದಾಯಿಕ ಕೈಮಗ್ಗ ಉತ್ಪನ್ನಗಳು

ಸಾಂಪ್ರದಾಯಿಕ ಕೈಮಗ್ಗ ಉತ್ಪನ್ನಗಳನ್ನು ಇಂದಿನ ಆಧುನಿಕ ರೀಟೇಲ್ ಮಾದರಿಗೆ ಒಗ್ಗಿಸಿರುವುದು ರಿಲಯನ್ಸ್ ರೀಟೇಲ್ ನ ಅತಿ ದೊಡ್ಡ ಯಶಸ್ಸು. ಈಗಲೂ ಇಂಥ ಉತ್ಪನ್ನಗಳಿಗೆ ಬೇಡಿಕೆ ಇದೆ ಎಂಬುದಕ್ಕೆ ನಿದರ್ಶನ. ಗ್ರಾಹಕರ ನಿರೀಕ್ಷೆಯಂತೆ ಗುಣಮಟ್ಟ, ಸ್ಟೈಲ್ ಹಾಗೂ ಅನುಕೂಲಕ್ಕೆ ತಕ್ಕಂತೆ ಉತ್ಪನ್ನಗಳನ್ನು ತಯಾರಿಸಿದರೆ ರೀಟೇಲ್ ವ್ಯವಹಾರ ಮಾಡಬಹುದು ಎಂಬುದು ಗೊತ್ತಾಗುತ್ತದೆ.

"ಹಲವು ವರ್ಷಗಳ ನಮ್ಮ ಪರಿಶ್ರಮ ಈಗ ಫಲಿತಾಂಶ ನೀಡುತ್ತಿದೆ. ಕುಶಲಕರ್ಮಿಗಳ ಸಂಖ್ಯೆ ಹೆಚ್ಚಳ ಆಗುತ್ತಿರುವುದು ಮತ್ತು ಇಂದಿನ ಗ್ರಾಹಕರು ಸ್ವೀಕರಿಸುವಂಥ ಉತ್ಪನ್ನಗಳನ್ನು ತಯಾರಿಸುತ್ತಿರುವುದು ನಮ್ಮ ಶ್ರಮದ ಸಾರ್ಥಕ್ಯವನ್ನು ತೋರಿಸುತ್ತದೆ," ಎಂದು ರಿಲಯನ್ಸ್ ಫ್ಯಾಷನ್ ಮತ್ತು ಲೈಫ್ ಸ್ಟೈಲ್ ಅಧ್ಯಕ್ಷ ಅಖಿಲೇಶ್ ಪ್ರಸಾದ್ ಹೇಳಿದ್ದಾರೆ.

 

AJIOದ ಇಂಡಿ ಎಂಬುದು ಆನ್ ಲೈನ್ ಮಾರ್ಕೆಟ್

AJIOದ ಇಂಡಿ ಎಂಬುದು ಆನ್ ಲೈನ್ ಮಾರ್ಕೆಟ್

AJIOದ ಇಂಡಿ ಎಂಬುದು ಆನ್ ಲೈನ್ ಮಾರ್ಕೆಟ್. ಸ್ಥಳೀಯ ಕುಶಲಕರ್ಮಿಗಳಿಗಾಗಿಯೇ ಇರುವಂಥದ್ದು. ಕೈ ಮಗ್ಗ ಉತ್ಪನ್ನಗಳನ್ನು, ನೇಯ್ಗೆಗಳನ್ನು ಇಂದಿನ ದಿನಮಾನಕ್ಕೆ ಒಗ್ಗಿಸಿ, ಮಾರಾಟ ಮಾಡಲಾಗುತ್ತಿದೆ. AJIOದಲ್ಲಿ ಮನೆಗೆ ಅಗತ್ಯ ಇರುವ ಲೈಫ್ ಸ್ಟೈಲ್ ಉತ್ಪನ್ನಗಳಿಂದ ಆರಂಭವಾಗಿ, ಆಭರಣಗಳು ಹಾಗೂ ಪಾದರಕ್ಷೆಗಳ ತನಕ ಎಲ್ಲವೂ ದೊರೆಯುತ್ತದೆ.

ಐಕತ್, ಶಿಬೋರಿ, ಬನಾರಸಿ, ಬಾಘ್, ಅಜರಖ್ ನಿಂದ ಜಮ್ ದನಿ, ತಂಗೈಲ್, ಚಂಡೇರಿ ಇನ್ನೂ ಹಲವು ಉತ್ಪನ್ನಗಳನ್ನು ಒಳಗೊಂಡಿದೆ. ಇಂಡಿಯಲ್ಲಿ ಭಾರತದಾದ್ಯಂತದ 50ಕ್ಕೂ ಹೆಚ್ಚು GI ಕ್ಲಸ್ಟರ್ ಗಳ ಉತ್ಪನ್ನಗಳಿವೆ. ಅದರಲ್ಲಿ ಗುಜರಾತ್, ರಾಜಸ್ಥಾನ, ಉತ್ತರಪ್ರದೇಶ, ಮಧ್ಯಪ್ರದೇಶ, ಬಿಹಾರ, ಒಡಿಶಾ, ಜಾರ್ಖಂಡ್, ತೆಲಂಗಾಣ, ಆಂಧ್ರಪ್ರದೇಶ, ಪಶ್ಚಿಮ ಬಂಗಾಲದ GI ಕ್ಲಸ್ಟರ್ ಗಳ ಉತ್ಪನ್ನಗಳಿವೆ.

 

ನೇರವಾಗಿ ಗ್ರಾಹಕರ ಮನೆ ಬಾಗಿಲಿಗೆ  ತಲುಪಿಸುತ್ತಿದೆ

ನೇರವಾಗಿ ಗ್ರಾಹಕರ ಮನೆ ಬಾಗಿಲಿಗೆ ತಲುಪಿಸುತ್ತಿದೆ

GI ಅಂದರೆ ನೈಸರ್ಗಿಕ ಉತ್ಪನ್ನ, ಕೈನಿಂದ ತಯಾರಿ ಮಾಡಿದ್ದು ಅಥವಾ ಸ್ಥಳೀಯ ಭಾಗದಲ್ಲಿ ಹಾಗೂ ನಿರ್ದಿಷ್ಟ ಬಗೆಯಲ್ಲಿ ಸ್ಥಳೀಯ ಭೌಗೋಳಿಕ ಭಾಗದಲ್ಲಿ ಮತ್ತು ವಿಶಿಷ್ಟವಾಗಿ ತಯಾರಿಸಿದ್ದು. ಇವುಗಳನ್ನು ನೇರವಾಗಿ ಗ್ರಾಹಕರ ಮನೆ ಬಾಗಿಲಿಗೇ ತಲುಪಿಸುತ್ತಿದೆ AJIOದ ಇಂಡಿ (Indie).
"ಭಾರತದಾದ್ಯಂತ ಇರುವ ವೈವಿಧ್ಯಮಯ ಉತ್ಪನ್ನಗಳನ್ನು ಒದಗಿಸುವುದರಿಂದ ಅಗಾಧವಾದ ಪೋರ್ಟ್ ಫೋಲಿಯೋ ರಚನೆಗೆ ಮಾತ್ರವಲ್ಲ, ಮೂವತ್ತು ಸಾವಿರಕ್ಕೂ ಹೆಚ್ಚು ಮಂದಿ ಕೌಶಲ ಇರುವ ಕುಶಲಕರ್ಮಿಗಳಿಗೆ ಉದ್ಯೋಗ ಒದಗಿಸುತ್ತದೆ. ಕಾಲದೊಂದಿಗೆ ಈ ಸೆಗ್ಮೆಂಟ್ ನಲ್ಲಿ ನಾವು ಮುಂದುವರಿಯುತ್ತೇವೆ," ಎಂದು ಅಖಿಲೇಶ್ ಪ್ರಸಾದ್ ಹೇಳಿದ್ದಾರೆ.

ಮಹಿಳೆಯರ ಆದಾಯಕ್ಕೆ ದಾರಿ ಮಾಡಿಕೊಟ್ಟಿದೆ

ಮಹಿಳೆಯರ ಆದಾಯಕ್ಕೆ ದಾರಿ ಮಾಡಿಕೊಟ್ಟಿದೆ

ಉದಯ್ ಪುರ್ ನ ಅಕೋಲಾದಲ್ಲಿ ಪಿಂಟೂ ಲಾಲ್ ಛಿಪ್ಪಾ ಎಂಬ ಕುಶಲಕರ್ಮಿ ಕಳೆದ ನಾಲ್ಕು ವರ್ಷದಿಂದ ರಿಲಯನ್ಸ್ ರೀಟೇಲ್ ಸಹಭಾಗಿ ಆಗಿದ್ದಾರೆ. ಅವರ ಜತೆ ಮೂವತ್ತು ಜನ ಕುಶಲಕರ್ಮಿಗಳು ಇದ್ದಾರೆ. ಇವರು ಹ್ಯಾಂಡ್ ಬ್ಲಾಕ್ ಪ್ರಿಂಟಿಂಗ್ ಮಾಡುತ್ತಾರೆ.

ಇನ್ನು ದೇವ್ ಚಂದ್ ಎಂಬುವರು ಬಿಕನೇರ್ ನಲ್ಲಿದ್ದು, ಹೆಣ್ಣು ಮಕ್ಕಳು ತಯಾರಿಸುವ ಕುಶಲ ವಸ್ತುಗಳನ್ನು ರಿಲಯನ್ಸ್ ರೀಟೇಲ್ ಗೆ ತಲುಪಿಸುವ ಕೊಂಡಿ ಆಗಿದ್ದು, ಆ ಮಹಿಳೆಯರ ಆದಾಯಕ್ಕೆ ದಾರಿ ಮಾಡಿಕೊಟ್ಟಿದ್ದಾರೆ.

 

ಒರಿಜಿನಲ್ ಕೈಮಗ್ಗ ಉತ್ಪನ್ನ

ಒರಿಜಿನಲ್ ಕೈಮಗ್ಗ ಉತ್ಪನ್ನ

ಸ್ವದೇಶ್ ಎಂಬುದು ರಿಲಯನ್ಸ್ ರೀಟೇಲ್ ನ ವಿಶಿಷ್ಟವಾದ ಬ್ರ್ಯಾಂಡ್. ಭಾರತದ ಶ್ರೀಮಂತ ಕೈಮಗ್ಗ ಪದ್ಧತಿಯನ್ನು ಉಳಿಸುವ ಉದ್ದೇಶದಿಂದ ಇದನ್ನು ತಂದಿದೆ. ನಾನೂರಕ್ಕೂ ಹೆಚ್ಚು ಕೈಮಗ್ಗ ಟೆಕ್ಸ್ಟ್ ಟೈಲ್, ಕೃಷಿ ಉತ್ಪನ್ನಗಳು ಮೊದಲಾದವನ್ನು ಇದರ ಅಡಿಯಲ್ಲಿ ಪಟ್ಟಿ ಮಾಡಲಾಗಿದೆ. ಟೆಕ್ಸ್ಟ್ ಟೈಲ್ ಸಚಿವಾಲಯದ ಜತೆಗೆ ಸ್ವದೇಶ್ ಒಪ್ಪಂದ ಮಾಡಿಕೊಂಡಿದ್ದು, ಶೇಕಡಾ ನೂರರಷ್ಟು ನಂಬಿಕಸ್ಥ ಉತ್ಪನ್ನವನ್ನು ಕುಶಲಕರ್ಮಿಗಳಿಂದ ಜನರಿಗೆ ತಲುಪಿಸಲಾಗುತ್ತಿದೆ. ಸ್ವದೇಶ್ ಬ್ರ್ಯಾಂಡ್ AJIO ಮತ್ತು Trends ಸೇರಿ ವಿವಿಧೆಡೆ ದೊರೆಯುತ್ತದೆ. ಇವು ಒರಿಜಿನಲ್ ಕೈಮಗ್ಗ ಉತ್ಪನ್ನ ಎಂದು ಭಾರತ ಸರ್ಕಾರವೇ ಅನುಮತಿ ನೀಡಿದೆ.

English summary

Reliance Retail’s 'Vocal for Local' Mission Expands to 30,000 Artisans

Reliance Retail showcased more than 40,000 artisan crafted products from over 50 GI clusters to its customers this festive season.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X