ಮುಂಬೈ, ನವೆಂಬರ್ 29: ಭಾರತದ ಪ್ರಮುಖ ಟೆಲಿಕಾಂ ಸೇವಾ ಪೂರೈಕೆದಾರ ಕಂಪನಿಗಳು ತಮ್ಮ ಪ್ರೀಪೇಯ್ಡ್ ಗ್ರಾಹಕರಿಗೆ ಹೊಸ ಆಫರ್ ಜೊತೆಗೆ ದರ ಪಟ್ಟಿಯನ್ನು ಪರಿಷ್ಕರಿಸುತ್ತಿವೆ. ಭಾರ್ತಿ ಏರ್‌ಟೆಲ್, ವೋಡಾಫೋನ್ ಐಡಿಯಾ ನಂತರ ರಿಲಯನ್ಸ್ ಜಿಯೋಪ್ರಿಪೇಯ್ಡ್ ದರ ಪಟ್ಟಿಯೂ ಬದಲಾಗಿದೆ. ಶೇ 21ರಷ್ಟು ದರ ಏರಿಕೆ ಪ್ರಕಟಿಸಿದೆ.
ವೊಡಾಫೋನ್ ಐಡಿಯಾ ಲಿಮಿಟೆಡ್ (ವಿಐಎಲ್), ಭಾರತದಲ್ಲಿ ಪ್ರಿಪೇಯ್ಡ್ ಬಳಕೆದಾರರಿಗಾಗಿ ತನ್ನ ಹೊಸ ಶುಲ್ಕ ಯೋಜನೆಗಳನ್ನು ಪ್ರಕಟಿಸಿದ್ದು, ಹೊಸ ಯೋಜನೆಗಳು ನವೆಂಬರ್ 25ರಿಂದ ಜಾರಿಗೆ ಬರಲಿದೆ ಎಂದು ಸಂಸ್ಥೆ ಹೇಳಿದೆ. ಇದೀಗ ಹೊಸ ಅನ್‌ಲಿಮಿಟೆಡ್ ಪ್ಲಾನ್‌ಗಳು ಡಿಸೆಂಬರ್ 1, 2021ರಿಂದ ಲಭ್ಯವಿರಲಿವೆ ಹಾಗೂ ಅಸ್ತಿತ್ವದಲ್ಲಿರುವ ಎಲ್ಲ ಟಚ್‌ಪಾಯಿಂಟ್‌ಗಳು ಮತ್ತು ಚಾನಲ್‌ಗಳಿಂದಲೂ ಅವನ್ನು ಪಡೆದುಕೊಳ್ಳಬಹುದಾಗಿದೆ.
ತನ್ನ ಗ್ರಾಹಕರಿಗೆ ಸರಳ ಮತ್ತು ಅನುಕೂಲಕರ ಉತ್ಪನ್ನಗಳನ್ನು ಒದಗಿಸುವ ಅದರ ಬದ್ಧತೆಗೆ ಅನುಗುಣವಾಗಿ, ಧ್ವನಿ ಮತ್ತು ಡೇಟಾ ಎರಡಕ್ಕೂ ಅತ್ಯುತ್ತಮವಾದ ವೈಶಿಷ್ಟ್ಯದ ಸಮೃದ್ಧ ಯೋಜನೆಗಳನ್ನು ಸಂಗ್ರಹಿಸಿದೆ. ಗ್ರಾಹಕರು ತಮ್ಮ ನಿರ್ದಿಷ್ಟ ಅಗತ್ಯಗಳಿಗೆ ಸೂಕ್ತವಾದ ಯೋಜನೆಯನ್ನು ಆಯ್ಕೆ ಮಾಡುವ ಮೂಲಕ ತಮ್ಮ ಪ್ರಯೋಜನಗಳನ್ನು ಪಡೆಯಬಹುದು.

ಎಲ್ಲ ಭಾರತೀಯರನ್ನೂ ನಿಜವಾದ ಡಿಜಿಟಲ್ ಜೀವನದೊಂದಿಗೆ ಸಶಕ್ತರನ್ನಾಗಿಸುವ ಸುಸ್ಥಿರ ಟೆಲಿಕಾಂ ಉದ್ಯಮವನ್ನು ಮತ್ತಷ್ಟು ಬಲಪಡಿಸುವ ಬದ್ಧತೆಗೆ ಅನುಗುಣವಾಗಿ, ಜಿಯೋ ಇಂದು ತನ್ನ ಹೊಸ ಅನ್‌ಲಿಮಿಟೆಡ್ ಪ್ಲಾನ್‌ಗಳನ್ನು ಪ್ರಕಟಿಸಿದೆ. ಈ ಪ್ಲಾನ್‌ಗಳು ಮಾರುಕಟ್ಟೆಯಲ್ಲೇ ಅತ್ಯುತ್ತಮ ಮೌಲ್ಯವನ್ನು ನೀಡಲಿವೆ. ಜಾಗತಿಕವಾಗಿ ಅತ್ಯಂತ ಕಡಿಮೆ ಬೆಲೆಯಲ್ಲಿ ಅತ್ಯುತ್ತಮ ಗುಣಮಟ್ಟದ ಸೇವೆ ನೀಡುವ ಜಿಯೋ ಭರವಸೆಯನ್ನು ಎತ್ತಿಹಿಡಿಯುವ ಮೂಲಕ, ಜಿಯೋ ಗ್ರಾಹಕರು ಅತ್ಯಂತ ದೊಡ್ಡ ಫಲಾನುಭವಿಗಳಾಗಿ ಮುಂದುವರಿಯಲಿದ್ದಾರೆ.
| ಜಿಯೋ ಪ್ರೀಪೇಯ್ಡ್ ಮೊಬೈಲ್ ದರ ಪರಿಷ್ಕರಣೆ | |||
|---|---|---|---|
| ಹಾಲಿ ದರ(Rs) | ವ್ಯಾಲಿಡಿಟಿ | ಹೊಸ ದರ (Rs) | ಪ್ರಯೋಜನ |
| ಜಿಯೋ ಫೋನ್ ಯೋಜನೆ | |||
| 75 | 28 ದಿನ | 91 | 3 ಜಿಬಿ ಡೇಟಾ, ಅನಿಯಮಿತ ವಾಯ್ಸ್ ಹಾಗೂ 50 ಎಸ್ಎಂಎಸ್ |
| ಅನಿಯಮಿತ ವಾಯ್ಸ್ ಹಾಗೂ ಡೇಟಾ | |||
| 129 | 28 ದಿನಗಳು | 155 | 2 ಜಿಬಿ ಡೇಟಾ, ಅನಿಯಮಿತ ವಾಯ್ಸ್ ಹಾಗೂ 300 ಎಸ್ಎಂಎಸ್ |
| 149 | 24 ದಿನಗಳು | 179 | ದಿನಕ್ಕೆ 1 ಜಿಬಿ ಡೇಟಾ, ಅನಿಯಮಿತ ವಾಯ್ಸ್ ಹಾಗೂ 100 ಎಸ್ಎಂಎಸ್ |
| 199 | 28 ದಿನಗಳು | 239 | ದಿನಕ್ಕೆ 1.5 ಜಿಬಿ ಡೇಟಾ, ಅನಿಯಮಿತ ವಾಯ್ಸ್ ಹಾಗೂ 100 ಎಸ್ಎಂಎಸ್ |
| 249 | 28 ದಿನಗಳು | 299 | ದಿನಕ್ಕೆ 2 ಜಿಬಿ ಡೇಟಾಅನಿಯಮಿತ ಕರೆ, 100 ಎಸ್ಎಂಎಸ್/ದಿನ |
| 399 | 56 ದಿನಗಳು | 479 | ಅನಿಯಮಿತ ಕರೆ, 100 ಎಸ್ಎಂಎಸ್/ದಿನ, 1.5 ಜಿಬಿ ಡೇಟಾ |
| 444 | 56 ದಿನಗಳು | 533 | ಅನಿಯಮಿತ ಕರೆ, 100 ಎಸ್ಎಂಎಸ್/ದಿನ, 2 ಜಿಬಿ ಡೇಟಾ |
| 329 | 84 ದಿನಗಳು | 395 | ಅನಿಯಮಿತ ಕರೆ, 100 ಎಸ್ಎಂಎಸ್/ದಿನ, 6 ಜಿಬಿ ಡೇಟಾ |
| 555 | 84 ದಿನಗಳು | 666 | ಅನಿಯಮಿತ ಕರೆ, 100 ಎಸ್ಎಂಎಸ್/ದಿನ, ದಿನಕ್ಕೆ 1.5 ಜಿಬಿ ಡೇಟಾ |
| 599 | 84 ದಿನಗಳು | 719 | ಅನಿಯಮಿತ ಕರೆ, 100 ಎಸ್ಎಂಎಸ್/ದಿನ, ದಿನಕ್ಕೆ 2 ಜಿಬಿ ಡೇಟಾ |
| 1299 | 336 ದಿನಗಳು | 1559 | ಅನಿಯಮಿತ ಕರೆ, 3600 ಎಸ್ಎಂಎಸ್, 24 ಜಿಬಿ ಡೇಟಾ |
| 2399 | 365 ದಿನಗಳು | 2879 | ಅನಿಯಮಿತ ಕರೆ, 100 ಎಸ್ಎಂಎಸ್/ದಿನ, ದಿನಕ್ಕೆ 2 ಜಿಬಿ ಡೇಟಾ |
| Data ಆಡ್ ಆನ್ | |||
| 51 | ಅನಿಯಮಿತ | 61 | 6 ಜಿಬಿ ಡಾಟಾ |
| 101 | ಅನಿಯಮಿತ | 121 | 12 ಜಿಬಿ ಡಾಟಾ |
| 251 | 30 | 301 | 50 ಜಿಬಿ ಡಾಟಾ |
ರಿಲಯನ್ಸ್ ಜಿಯೋ ಇನ್‍ಫೋಕಾಮ್ ಲಿಮಿಟೆಡ್: ಜಿಯೋ ಪ್ಲಾಟ್‌ಫಾರ್ಮ್ಸ್ ಲಿಮಿಟೆಡ್‍ನ ಅಧೀನ ಸಂಸ್ಥೆಯಾಗಿರುವ ರಿಲಯನ್ಸ್ ಜಿಯೋ ಇನ್‍ಫೋಕಾಮ್ ಲಿಮಿಟೆಡ್, ಅತ್ಯಾಧುನಿಕ 4ಜಿ ಎಲ್‍ಟಿಇ ತಂತ್ರಜ್ಞಾನದೊಂದಿಗೆ ವಿಶ್ವದರ್ಜೆಯ ಆಲ್-ಐಪಿ ಡೇಟಾ ಸ್ಟ್ರಾಂಗ್ ಫ್ಯೂಚರ್ ಪ್ರೂಫ್ ಜಾಲವನ್ನು ರೂಪಿಸಿದೆ. ಮೊಬೈಲ್ ವೀಡಿಯೋ ಜಾಲದ ಪರಿಕಲ್ಪನೆಯೊಡನೆಯೇ ರೂಪಿಸಲಾದ ಹಾಗೂ ವಾಯ್ಸ್ ಓವರ್ ಎಲ್‍ಟಿಇ ತಂತ್ರಜ್ಞಾನವನ್ನು ಬೆಂಬಲಿಸುವ ಏಕೈಕ ಜಾಲ ಇದಾಗಿದೆ. ಮುಂದೆ 5ಜಿ, 6ಜಿ ಮುಂತಾದ ತಂತ್ರಜ್ಞಾನಗಳ ಪರಿಚಯವಾದಂತೆ ಭವಿಷ್ಯದ ಬೇಡಿಕೆಗಳಿಗಾಗಿ ಹೆಚ್ಚು ಹೆಚ್ಚು ಡೇಟಾವನ್ನು ಬೆಂಬಲಿಸುವಂತೆ ಈ ಜಾಲವನ್ನು ಸುಲಭವಾಗಿ ಉನ್ನತೀಕರಿಸಬಹುದಾಗಿದೆ.
More From GoodReturns

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!



Click it and Unblock the Notifications