ನವದೆಹಲಿ, ಜೂನ್ 7: ಭಾರತೀಯ ರಿಸರ್ವ್ ಬ್ಯಾಂಕ್ ಸತತ ಎಂಟನೇ ಬಾರಿಗೆ ರೆಪೋ ದರವನ್ನು ಯಥಾಸ್ಥಿತಿಯಲ್ಲಿ ಇರಿಸಲು ನಿರ್ಧರಿಸಿರುವುದಾಗಿ ಶುಕ್ರವಾರ ತಿಳಿಸಿದೆ.
ಇಂದು ಮುಂಬೈಯಲ್ಲಿ ಗವರ್ನರ್ ಶಕ್ತಿಕಾಂತ ದಾಸ್ ಅವರು ಹಣಕಾಸು ನೀತಿ ಸಮಿತಿ (MPC) ನಿರ್ಧಾರಗಳನ್ನು ಪ್ರಕಟಿಸಿದ್ದು ರೇಪೋ ದರವನ್ನು ಈ ಹಿಂದಿನಂತೆ ಶೇ ೬.೫ ರಲ್ಲೇ ಮುಂದುವರಿಸುವ ತೀರ್ಮಾನಿಸಲಾಗಿದ್ದು, ಹಣದುಬ್ಬರದ ಮೇಲೆ ಬಿಗಿಯಾದ ನಿಗಾ ವಹಿಸುವುದಾಗಿ ಹೇಳಿದೆ.

ಅನಿರೀಕ್ಷಿತ ಚುನಾವಣಾ ಫಲಿತಾಂಶ ಹಾಗು ಅನಿಶ್ಚಿತತೆಯ ಮಧ್ಯೆ ನಂತರ ನೀತಿಸಮಿತಿ ಹಣದುಬ್ಬರದ ಮೇಲೆ ತನ್ನ ಗಮನವನ್ನು ಇಟ್ಟುಕೊಂಡು ನಿರೀಕ್ಷೆಯಂತೆ ಭಾರತದ ಕೇಂದ್ರೀಯ ಬ್ಯಾಂಕ್ ತನ್ನ ಮಾನದಂಡದ ಬಡ್ಡಿದರವನ್ನು ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ನೀತಿ ಸಮಿತಿ ನಿರ್ಧರಿಸಿದೆ. ಮೇ 2022 ರಿಂದ 250 ಬೇಸಿಸ್ ಪಾಯಿಂಟ್‌ಗಳಿಗೆ ಒಟ್ಟು ಆರು ಸತತ ದರ ಹೆಚ್ಚಳದ ನಂತರ ಕಳೆದ ವರ್ಷ ಏಪ್ರಿಲ್‌ನಲ್ಲಿ ದರ ಹೆಚ್ಚಳವನ್ನು ಸ್ಥಗಿತಗೊಳಿಸಲಾಗಿತ್ತು
ಈ ಬಾರಿಯ ಎಂಪಿಸಿ ಸಭೆಯ ವಿಶೇಷತೆ ಎಂದರೆ ಯಥಾಸ್ಥಿತಿ ಮುಂದುವರಿಸುವ ನಿರ್ಧಾರದ ಪರವಾಗಿ 4:2ರ ಬಹುಮತ ವ್ಯಕ್ತವಾಗಿದೆ. ಆರು ಎಂಪಿಸಿ ಸದಸ್ಯರಲ್ಲಿ ನಾಲ್ವರು ರೆಪೊ ದರವನ್ನು ಯಥಾಸ್ಥಿತಿಯಲ್ಲಿಡುವ ಪರವಾಗಿ ಮತ ಚಲಾಯಿಸಿದ್ದಾರೆ. ಈ ಹಿಂದಿನ ಕೆಲ ಎಂಪಿಸಿ ಸಭೆಗಳಲ್ಲಿ 5:1ರ ಬಹುಮತದಿಂದ ನಿರ್ಧಾರ ಪ್ರಕಟವಾಗುತ್ತಿತ್ತು.
ದರ ಕಡಿತದ ನಿರ್ಧಾರದ ನಂತರ ಬಿಎಸ್‌ಇ ಸೆನ್ಸೆಕ್ಸ್ 0.72 ರಷ್ಟು ಏರಿಕೆಯಾಗಿ 75,618 ಪಾಯಿಂಟ್‌ಗಳಿಗೆ ಮತ್ತು ಎನ್‌ಎಸ್‌ಇ ನಿಫ್ಟಿ ಶೇಕಡಾ 0.74 ರಷ್ಟು ಏರಿಕೆ ಕಂಡು 22,991 ಪಾಯಿಂಟ್‌ಗಳಿಗೆ ತಲುಪಿದೆ.
ರೆಪೋ ದರ ಎಂದರೇನು?
ರೆಪೋ ಅಂದರೆ ರೀ ಪರ್ಚೇಸಿಂಗ್ ಆಪ್ಷನ್. ರೆಪೊ ದರವನ್ನು ಬೆಂಚ್‌ಮಾರ್ಕ್ ಬಡ್ಡಿ ದರ ಅಥವಾ ನೀತಿ ದರ ಎಂದೂ ಕರೆಯುತ್ತಾರೆ, ಇದು ಕೇಂದ್ರ ಬ್ಯಾಂಕ್‌ಗಳು ವಾಣಿಜ್ಯ ಬ್ಯಾಂಕ್‌ಗಳಿಗೆ ಹಣವನ್ನು ನೀಡುವ ದರವಾಗಿದೆ. ಅಂದರೆ ನಮಗೆ ಹೇಗೆ ಸಾಲವನ್ನು ನೀಡುವಾಗ ಬಡ್ಡಿ ದರ ವಿಧಿಸುತ್ತದೆಯೋ ಅದೇ ರೀತಿ ಬ್ಯಾಂಲುಗಳಿಗೆ ಸಾಲ ನೀಡುವಾಗ ಆರ್ ಬಿಐ ಇಂತಿಷ್ಟು ಬಡ್ಡಿ ಹಾಕುತ್ತದೆ. ಆ ಬಡ್ಡಿಯ ದರವೇ ರೆಪೋ ದರ ಎಂದು ಸರಳವಾಗಿ ಹೇಳಬಹುದು.
ರೆಪೊ ದರವನ್ನು ಕಡಿತಗೊಳಿಸಿದರೆ ಏನಾಗುತ್ತದೆ: ಆರ್‌ಬಿಐ ಪ್ರಮುಖ ಸಾಲದ ದರವನ್ನು ಕಡಿಮೆ ಮಾಡಿದಾಗ, ಬ್ಯಾಂಕುಗಳು ಸಾಮಾನ್ಯವಾಗಿ ಸಾಲದ ಮೇಲಿನ ಬಡ್ಡಿದರಗಳನ್ನು ಕಡಿಮೆ ಮಾಡುತ್ತವೆ. ಕಡಿಮೆ ಬಡ್ಡಿದರಗಳು ಸಾಲ ಪಡೆದುಕೊಂಡ ಗ್ರಾಹಕರಿಗೆ ಮಾಸಿಕ ಕಂತು( ಇಎಂಐ) ಗಳು ಕಡಿಮೆಯಾಗುತ್ತದೆ
ರೆಪೋ ದರವನ್ನು ಹೆಚ್ಚಿಸಿದರೆ: ಆರ್‌ಬಿಐ ರೆಪೋ ಹೆಚ್ಚಿಸಿದಾಗ, ಬ್ಯಾಂಕುಗಳು ಸಾಮಾನ್ಯವಾಗಿ ಸಾಲದ ಮೇಲಿನ ಬಡ್ಡಿದರಗಳನ್ನು ಹೆಚ್ಚಾಗುತ್ತದೆ. ಹೆಚ್ಚಿನ ಬಡ್ಡಿ ದರಗಳು ಎಂದರೆ ಸಾಲಗಾರರ ಇಎಂಐ ಹೆಚ್ಚಾಗುತ್ತದೆ. ಆರ್‌ಬಿಐ ರೆಪೋ ಹೆಚ್ಚು ಕಮ್ಮಿ ಆದಾಗ ಅದು ನೇರ ಪರಿಣಾಮ ಬೀರುವುದು ಮಧ್ಯಮ ವರ್ಗದವರು ಅಥವಾ ತಿಂಗಳ ಸಂಬಳ ನಂಬಿಕೊಂಡು ಮನೆ ನೆಡಸುವವರ ಮೇಲೆ. ಏಕೆಂದರೆ, ಇಎಂಐ ಹೆಚ್ಚಾದರೆ ಅವರ ಮನೆಯ ಬಜೆಟ್ ಹಾಗೂ ಇತರ ಖರ್ಚು ವೆಚ್ಚಗಳ ಮೇಲೂ ನೇರ ಪರಿಣಾಮ ಬೀರುತ್ತದೆ.


Click it and Unblock the Notifications