ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಸತತ ಐದನೇ ಬಾರಿಗೆ ರೆಪೋ ದರವನ್ನು ಸ್ಥಿರವಾಗಿರಿಸಿದೆ. ಪ್ರಸ್ತುತ ರೆಪೋ ದರ ಶೇಕಡ 6.5 ಆಗಿದೆ. ಈ ಹಿಂದೆ ಒಟ್ಟಾಗಿ ಆರು ಬಾರಿ ಆರ್‌ಬಿಐ ರೆಪೋ ದರ ಏರಿಸಿದೆ. ಇನ್ನು ಆರ್‌ಬಿಐ ರೆಪೋ ದರ ಘೋಷಣೆ ಮಾಡುತ್ತಿದ್ದಂತೆ, ಮಾರುಕಟ್ಟೆಯು ಭಾರೀ ಪ್ರಮಾಣದಲ್ಲಿ ಜಿಗಿತ ಕಂಡಿದೆ. ನಿಫ್ಟಿ ಸಾರ್ವಕಾಲಿಕವಾಗಿ ಏರಿಕೆಯಾಗಿದೆ.
ಶುಕ್ರವಾರದಂದು ದೇಶೀಯ ಷೇರು ಮಾರುಕಟ್ಟೆಯು ದಾಖಲೆಯ ಮಟ್ಟಕ್ಕೆ ತಲುಪಿದೆ. ಈ ಸಮಯಕ್ಕೆ ಸೆನ್ಸೆಕ್ಸ್ ಶೇಕಡ 0.42 ರಷ್ಟು ಅಥವಾ 292.14 ಪಾಯಿಂಟ್ ಏರಿಕೆಯಾಗಿ 69,813.83 ಕ್ಕೆ ತಲುಪಿದೆ. ಇನ್ನು ನಿಫ್ಟಿ 50 ಈ ಸಮಯಕ್ಕೆ ಶೇಕಡ 0.41 ರಷ್ಟು ಏರಿಕೆಯಾಗಿ ಅಥವಾ 85.40 ಪಾಯಿಂಟ್ ಜಿಗಿತವಾಗಿ 20,986.55ಕ್ಕೆ ತಲುಪಿದೆ. ನಿಫ್ಟಿ ಮೊದಲ ಬಾರಿಗೆ 21,000 ಕ್ಕಿಂತ ಮೇಲಕ್ಕೆ ಏರಿದೆ. 61 ಸೆಷನ್‌ಗಳ ಬಳಿಕ ನಿಫ್ಟಿ 20,000 ರಿಂದ 21,000 ಕ್ಕೆ ಏರಿದೆ.

ಆರ್‌ಬಿಐ ರೆಪೋ ದರ ಘೋಷಿಸುವ ಮುನ್ನ ನಂತರ
ಆರ್‌ಬಿಐ ರೆಪೋ ದರ ಘೋಷಿಸುವ ಸಂದರ್ಭದಲ್ಲಿ ಅಂದರೆ 10 ಗಂಟೆಗೆ ಸೆನ್ಸೆಕ್ಸ್ 311.57 ಪಾಯಿಂಟ್ ಅಥವಾ ಶೇಕಡ 0.45 ರಷ್ಟು ಏರಿಕೆಯಾಗಿ 69,833.26 ಕ್ಕೆ ತಲುಪಿದೆ. ನಿಫ್ಟಿ 90.00 ಪಾಯಿಂಟ್ ಅಥವಾ ಶೇಕಡ 0.43 ರಷ್ಟು ಏರಿಕೆಯಾಗಿ 20,991.20 ಕ್ಕೆ ತಲುಪಿದೆ. ಸುಮಾರು 2073 ಷೇರುಗಳು ಏರಿಕೆಯಾಗಿದ್ದು, 877 ಷೇರುಗಳು ಕುಸಿದಿದೆ. 94 ಷೇರುಗಳು ಸ್ಥಿರವಾಗಿದೆ.
ಆದರೆ ಆರ್‌ಬಿಐ ರೆಪೋ ದರ ಘೋಷಿಸುವಷ್ಟರಲ್ಲಿ ನಿಫ್ಟಿ ಸಾರ್ವಕಾಲಿಕ ಏರಿಕೆ ಕಂಡಿದೆ. ಕೆಎಸ್‌ಡಬ್ಲ್ಯೂ ಸ್ಟೀಲ್ ಗೇನರ್ ಆಗಿದ್ದು, 847.90 ಕ್ಕೆ ತಲುಪಿದೆ. ಎಂ&ಎಂ ಅತೀ ನಷ್ಟವನ್ನು ಕಂಡಿದ್ದು, 1680 ರೂಪಾಯಿ ಆಗಿದೆ. ನಿಫ್ಟಿ ಮೆಟಲ್ ಬೆಸ್ಟ್ ಸೆಕ್ಟರ್ ಆಗಿದ್ದು 7447.45 ಗೆ ತಲುಪಿದೆ. ನಿಫ್ಟಿ ಆಟೋ ಅತೀ ಅಧಿಕವಾಗಿ ನಷ್ಟವನ್ನು ಕಂಡ ಸೆಕ್ಟರ್ ಆಗಿದ್ದು, 17831.50 ರಲ್ಲಿದೆ.
ಆರ್‌ಬಿಐ ಅಪ್‌ಡೇಟ್
ಆರ್‌ಬಿಐ ಹಣಕಾಸು ನೀತಿ ಸಮಿತಿಯು ಹಣಕಾಸು ವರ್ಷ 2024 ರ ಹಣದುಬ್ಬರದ ಮುನ್ಸೂಚನೆಗಳನ್ನು ಶೇಕಡ 5.4ರಲ್ಲಿ ಬದಲಾಗಿಸದೆ ಇರಿಸಿದೆ. ಹಾಗೆಯೇ ಹಣಕಾಸು ವರ್ಷ 2024 ರ ರಿಯಲ್ ಜಿಡಿಪಿ ಬೆಳವಣಿಗೆಯನ್ನು ಶೇಕಡ 6.5 ರಿಂದ ಶೇಕಡ 7ಕ್ಕೆ ಏರಿಸಿದೆ. ಆರ್‌ಬಿಐ ಎಂಎಸ್‌ಎಫ್ ಮತ್ತು ಎಸ್‌ಡಿಎಫ್ ದರಗಳನ್ನು ಕ್ರಮವಾಗಿ ಶೇಕಡ 6.75 ಮತ್ತು ಶೇಕಡ 6.25 ರಲ್ಲಿ ಸ್ಥಿರವಾಗಿರಿಸಿದೆ.


Click it and Unblock the Notifications