ಅಂದಾಜಿನಂತೆ ಭಾರತದಲ್ಲಿ ಮಾರ್ಚ್ ತಿಂಗಳಿನಲ್ಲಿ ರಿಟೇಲ್ ಹಣದುಬ್ಬರವು ಇಳಿಕೆಯಾಗಿದೆ. ಆರ್‌ಬಿಐನ ಗರಿಷ್ಠ ಹಣದುಬ್ಬರ ಮಿತಿಗಿಂತ ರಿಟೇಲ್ ಹಣದುಬ್ಬರವು ಕೆಳಕ್ಕೆ ಇಳಿದಿದ್ದು, ಮಾರ್ಚ್ ರಿಟೇಲ್ ಹಣದುಬ್ಬರ ಶೇಕಡ 5.66 ಆಗಿದೆ. ಮಾರ್ಚ್‌ನಲ್ಲಿ ಹಣದುಬ್ಬರುವ ಶೇಕಡ 6ಕ್ಕಿಂತ ಕಡಿಮೆ ಇರಲಿದೆ ಎಂದು ಹಲವಾರು ಅರ್ಥಶಾಸ್ತ್ರಜ್ಞರು ಅಂದಾಜು ವ್ಯಕ್ತಪಡಿಸಿದ್ದರು. ಅದರಂತೆಯೇ ಮಾರ್ಚ್‌ನಲ್ಲಿ ರಿಟೇಲ್ ಹಣದುಬ್ಬರವು ಶೇಕಡ 6ಕ್ಕಿಂತ ಕೆಳಗಿದೆ.
ಇನ್ನು ಫೆಬ್ರವರಿಯಲ್ಲಿ ರಿಟೇಲ್ ಹಣದುಬ್ಬರ ಶೇಕಡ 6.44ರಷ್ಟಿತ್ತು. ಮಾರ್ಚ್‌ನಲ್ಲಿ ಶೇಕಡ 5ರಿಂದ ಶೇಕಡ 5.3ರ ನಡುವೆ ಇರಲಿದೆ ಎಂಬ ಅಂದಾಜು ಕೂಡಾ ಇತ್ತು. ಈ ಹಿಂದೆ ಹಣದುಬ್ಬರದ ಬಗ್ಗೆ ಮಾತನಾಡಿದ್ದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕೋವಿಡ್ ಸಾಂಕ್ರಾಮಿಕ ಮತ್ತು ರಷ್ಯಾ ಉಕ್ರೇನ್ ಯುದ್ಧದ ನಡುವೆಯೂ ಸಭಾರತದಲ್ಲಿ ಹಣದುಬ್ಬರವನ್ನು ಶೇಕಡ 6 ಅಥವಾ ಅದಕ್ಕಿಂತ ಕಡಿಮೆಯ ನಿಯಂತ್ರಣಕ್ಕೆ ತರಲಾಗಿದೆ," ಎಂದು ತಿಳಿಸಿದ್ದರು.

ಕಳೆದ ವಾರ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಎಂಪಿಸಿ ಸಭೆಯನ್ನು ನಡೆಸಿದೆ. ಈ ಸಭೆಯ ಬಳಿಕ ರೆಪೋ ದರವನ್ನು ಸ್ಥಿರವಾಗಿರಿಸುವ ಘೋಷಣೆಯನ್ನು ಆರ್‌ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಮಾಡಿದ್ದಾರೆ. ಅದಕ್ಕೂ ಮುನ್ನ ಆರ್‌ಬಿಐ ಸತತ ಆರು ಬಾರಿ ರೆಪೋ ದರವನ್ನು ಏರಿಕೆ ಮಾಡಿದೆ. ಹಾಗೆಯೇ, "ಈ ಬಾರಿ ರೆಪೋ ದರವನ್ನು ಸ್ಥಿರವಾಗಿರಿಸಲಾಗುವುದು, ಆದರೆ ಹಣದುಬ್ಬರದ ವಿರುದ್ಧದ ಆರ್‌ಬಿಐ ಹೋರಾಟ ಕೊನೆಯಾಗದು. ಅಗತ್ಯ ಬಂದಾಗ ಕ್ರಮಕೈಗೊಳ್ಳಲಾಗುವುದು," ಎಂದು ಆರ್‌ಬಿಐ ಹೇಳಿತ್ತು.
ಫೆಬ್ರವರಿ ರಿಟೇಲ್ ಹಣದುಬ್ಬರ ಎಷ್ಟಿದೆ?
ರಿಟೇಲ್ ಹಣದುಬ್ಬರವು ಜನವರಿಯಲ್ಲಿ ಮೂರು ತಿಂಗಳ ಗರಿಷ್ಠ ಮಟ್ಟಕ್ಕೆ ಏರಿಕೆಯಾಗಿದೆ. ಆದರೆ ಫೆಬ್ರವರಿ 2023ರಲ್ಲಿ ಸಿಪಿಐ ಹಣದುಬ್ಬರ ಕೊಂಚ ಇಳಿಕೆಯಾಗಿ ಶೇಕಡ 6.44ಕ್ಕೆ ತಲುಪಿದೆ. ಆದರೂ ಆರ್ಥಿಕ ಸ್ಥಿತಿ ಇನ್ನೂ ಕೂಡಾ ಸುಧಾರಿಸಿಲ್ಲ. ಕನ್ಸ್ಯೂಮರ್ ಪ್ರೈಸ್ ಇಂಡೆಕ್ಸ್ (ಸಿಪಿಐ) ಸತತ ಎರಡನೇ ತಿಂಗಳು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ (ಆರ್‌ಬಿಐ) ಸಹಿಷ್ಣು ಮಿತಿಗಿಂತ ಹೆಚ್ಚಳವಾಗಿತ್ತು. ಆದರೆ ಮಾರ್ಚ್‌ನಲ್ಲಿ ಶೇಕಡ 6ಕ್ಕಿಂತ ಕಡಿಮೆ ರಿಟೇಲ್ ಹಣದುಬ್ಬರವಿದೆ. ಜನವರಿಯಲ್ಲಿ ರಿಟೇಲ್ ಹಣದುಬ್ಬರ ಶೇಕಡ 6.52 ಆಗಿದೆ.
ರಿಟೇಲ್ ಹಣದುಬ್ಬರ ಎಷ್ಟಿತ್ತು, ಎಷ್ಟಾಗಿದೆ?
ಏಪ್ರಿಲ್ 2022: ಶೇಕಡ 7.79
ಮೇ 2022: ಶೇಕಡ 7.04
ಜೂನ್ 2022: ಶೇಕಡ 7.01
ಜುಲೈ 2022: ಶೇಕಡ 6.71
ಆಗಸ್ಟ್ 2022: ಶೇಕಡ 7
ಸೆಪ್ಟೆಂಬರ್ 2022: ಶೇಕಡ 7.41
ಅಕ್ಟೋಬರ್ 2022: ಶೇಕಡ 6.77
ನವೆಂಬರ್ 2022: ಶೇಕಡ 5.88
ಡಿಸೆಂಬರ್ 2022: ಶೇಕಡ 5.72
ಜನವರಿ 2023: ಶೇಕಡ 6.52
ಫೆಬ್ರವರಿ 2023: ಶೇಕಡ 6.44
ಮಾರ್ಚ್ 2023: ಶೇಕಡ 5.66
ರೆಪೋ ದರ ಆರು ಬಾರಿ ಏರಿಕೆ?
ಹಣದುಬ್ಬರವನ್ನು ನಿಯಂತ್ರಣಕ್ಕೆ ತರುವ ನಿಟ್ಟಿನಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಸತತ ಆರು ಬಾರಿ ರೆಪೋ ದರವನ್ನು ಏರಿಕೆ ಮಾಡಿದೆ. 2022ರ ಏಪ್ರಿಲ್‌ವರೆಗೆ ಸುಮಾರು 10 ಬಾರಿ ರೆಪೋ ದರ ಸ್ಥಿರವಾಗಿರಿಸಿದ್ದ ಆರ್‌ಬಿಐ 2022ರ ಮೇ ತಿಂಗಳಿನಿಂದ ರೆಪೋ ದರ ಏರಿಕೆ ಮಾಡುತ್ತಾ ಬಂದಿದೆ. ಈವರೆಗೆ ಒಟ್ಟಾಗಿ 250 ಮೂಲಾಂಕದಷ್ಟು ರೆಪೋ ದರವನ್ನು ಆರ್‌ಬಿಐ ಹೆಚ್ಚಿಸಿದ್ದು ಪ್ರಸ್ತುತ ರೆಪೋ ದರ ಶೇಕಡ 6.5 ಆಗಿದೆ. ಇನ್ನು ಈ ರೆಪೋ ದರ ಬದಲಾವಣೆಯೂ ಸಾಲದ ಬಡ್ಡಿದರ, ಎಫ್‌ಡಿ ಬಡ್ಡಿದರದ ಮೇಲೆ ಪ್ರಭಾವ ಬೀರಿದೆ.
More From GoodReturns

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್‌ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಆರ್‌ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್‌ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಸೇಫ್ಟಿ ಕಂಟ್ರೋಲ್ಸ್ ಐಪಿಒ: ಹೂಡಿಕೆದಾರರೇ ಇಂದೇ ಕೊನೆಯ ಅವಕಾಶ!

ಆರ್‌ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಆರ್‌ಬಿಐ ಪಾಲಿಸಿ: ಇಂದಿನ ನಿರ್ಧಾರ ನಿಮ್ಮ ಹೂಡಿಕೆಯನ್ನು ಬದಲಿಸುತ್ತಾ?

ಗೃಹ ಸಾಲದ ಇಎಂಐ ಇಳಿಕೆ: ಆರ್‌ಬಿಐ ನಿರ್ಧಾರದ ಅಸಲಿ ಸತ್ಯ

ಆರ್‌ಬಿಐ ರೆಪೋ ದರ ಸ್ಥಿರ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಚಿನ್ನದ ಬೆಲೆ ಏರಿಕೆ: ಹೂಡಿಕೆದಾರರೇ ಎಚ್ಚರ, ಈ ತಪ್ಪು ಮಾಡಬೇಡಿ!

ಆರ್‌ಬಿಐ ರೆಪೋ ದರ: ನಿಮ್ಮ ಇಎಂಐ ಹೊರೆ ಹೆಚ್ಚಾಗುತ್ತಾ?



Click it and Unblock the Notifications