ರಿಟೇಲ್ ಹಣದುಬ್ಬರವು ಜನವರಿಯಲ್ಲಿ ಮೂರು ತಿಂಗಳ ಗರಿಷ್ಠ ಮಟ್ಟಕ್ಕೆ ಏರಿಕೆಯಾಗಿದೆ. ಆದರೆ ಫೆಬ್ರವರಿ 2023ರಲ್ಲಿ ಸಿಪಿಐ ಹಣದುಬ್ಬರ ಕೊಂಚ ಇಳಿಕೆಯಾಗಿ ಶೇಕಡ 6.44ಕ್ಕೆ ತಲುಪಿದೆ. ಆದರೂ ಆರ್ಥಿಕ ಸ್ಥಿತಿ ಇನ್ನೂ ಕೂಡಾ ಸುಧಾರಿಸಿಲ್ಲ. ಕನ್ಸ್ಯೂಮರ್ ಪ್ರೈಸ್ ಇಂಡೆಕ್ಸ್ (ಸಿಪಿಐ) ಸತತ ಎರಡನೇ ತಿಂಗಳು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ (ಆರ್‌ಬಿಐ) ಸಹಿಷ್ಣು ಮಿತಿಗಿಂತ ಹೆಚ್ಚಳವಾಗಿದೆ. ಜನವರಿಯಲ್ಲಿ ರಿಟೇಲ್ ಹಣದುಬ್ಬರ ಶೇಕಡ 6.52 ಆಗಿದೆ.
ನ್ಯಾಷನಲ್ ಸ್ಟಾಟಿಸ್ಟಿಕಲ್ ಆಫೀಸ್ (ಎನ್‌ಎಸ್‌ಒ) ಡೇಟಾದ ಪ್ರಕಾರ ಗ್ರಾಮೀಣ ಪ್ರದೇಶದಲ್ಲಿ ಹಣದುಬ್ಬರವು ಫೆಬ್ರವರಿಯಲ್ಲಿ ಶೇಕಡ 6.72ರಷ್ಟಿದೆ, ಜನವರಿಯಲ್ಲಿ ರಿಟೇಲ್ ಹಣದುಬ್ಬರ ಶೇಕಡ 6.85 ಆಗಿತ್ತು. ಇನ್ನು ನಗರ ಪ್ರದೇಶಗಳಲ್ಲಿ ರಿಟೇಲ್ ಹಣದುಬ್ಬರವು ಶೇಕಡ 6ರಿಂದ ಶೇಕಡ 6.10ಕ್ಕೆ ಏರಿಕೆಯಾಗಿದೆ. ಇನ್ನು ಆಹಾರ ಹಣದುಬ್ಬರವು ಕೂಡಾ ಕೊಂಚ ಏರಿದೆ. ಜನವರಿಯಲ್ಲಿದ್ದ ಶೇಕಡ 5.94ರಿಂದ ಫೆಬ್ರವರಿಯಲ್ಲಿ ಶೇಕಡ 5.95ಕ್ಕೆ ತಲುಪಿದೆ. ಸಿಪಿಐ ಬಾಸ್ಕೆಟ್‌ನ ಅರ್ಧದಷ್ಟು ಆಹಾರ ಹಣದುಬ್ಬರವಿದೆ.

ರಿಟೇಲ್ ಹಣದುಬ್ಬರ ಎಷ್ಟಿತ್ತು, ಎಷ್ಟಾಗಿದೆ?
ಏಪ್ರಿಲ್ 2022: ಶೇಕಡ 7.79
ಮೇ 2022: ಶೇಕಡ 7.04
ಜೂನ್ 2022: ಶೇಕಡ 7.01
ಜುಲೈ 2022: ಶೇಕಡ 6.71
ಆಗಸ್ಟ್ 2022: ಶೇಕಡ 7
ಸೆಪ್ಟೆಂಬರ್ 2022: ಶೇಕಡ 7.41
ಅಕ್ಟೋಬರ್ 2022: ಶೇಕಡ 6.77
ನವೆಂಬರ್ 2022: ಶೇಕಡ 5.88
ಡಿಸೆಂಬರ್ 2022: ಶೇಕಡ 5.72
ಜನವರಿ 2023: ಶೇಕಡ 6.52
ಫೆಬ್ರವರಿ 2023: ಶೇಕಡ 6.44
ಹಣದುಬ್ಬರವನ್ನು ನಿಯಂತ್ರಣ ಮಾಡುವ ನಿಟ್ಟಿನಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಸುಮಾರು 10 ತಿಂಗಳ ಬಳಿಕ 2022ರ ಮೇ ತಿಂಗಳಿನಲ್ಲಿ ರಿಟೇಲ್ ಹಣದುಬ್ಬರವನ್ನು ಏರಿಸಿದೆ. ಆರ್‌ಬಿಐ ಒಟ್ಟು ಆರು ಬಾರಿ ರೆಪೋ ದರವನ್ನು ಏರಿಸಿದೆ. ಮೇ ತಿಂಗಳಿನಿಂದ ಈವರೆಗೆ 250 ಮೂಲಾಂಕ ಹೆಚ್ಚಿಸಿದೆ. ಕಳೆದ ಬಾರಿ ಮೇ ತಿಂಗಳಿನಲ್ಲಿ 25 ಮೂಲಾಂಕ ಏರಿಸಿದ್ದು ಪ್ರಸ್ತುತ ರೆಪೋ ದರ ಶೇಕಡ 6.50ರಷ್ಟಿದೆ.
ಮೇ ತಿಂಗಳಿನಲ್ಲಿ ಆರ್‌ಬಿಐ ರೆಪೋ ದರವನ್ನು 40 ಮೂಲಾಂಕ ಕೂಡಲೇ ಜಾರಿಗೆ ಬರುವಂತೆ ಏರಿಕೆ ಮಾಡಿತ್ತು. ಆ ಬಳಿಕ ಆರ್‌ಬಿಐ ಜೂನ್ ತಿಂಗಳಿನಲ್ಲಿ 50 ಮೂಲಾಂಕ ಏರಿಕೆ ಮಾಡಿದ್ದು, ಶೇಕಡ 4.90ಕ್ಕೆ ತಲುಪಿತ್ತು. ಆಗಸ್ಟ್‌ನಲ್ಲಿ ಮತ್ತೆ 50 ಮೂಲಾಂಕ ಏರಿಕೆ ಮಾಡಲಾಗಿತ್ತು. ಬಳಿಕ ಸೆಪ್ಟೆಂಬರ್‌ನಲ್ಲಿ ರೆಪೋ ದರವನ್ನು 50 ಮೂಲಾಂಕ ಹೆಚ್ಚಳ ಮಾಡಲಾಗಿದೆ. ಅದಾದ ಬಳಿಕ ಡಿಸೆಂಬರ್‌ನಲ್ಲಿ 35 ಮೂಲಾಂಕ ಹೆಚ್ಚಿಸಲಾಗಿದೆ. ಈಗ 25 ಮೂಲಾಂಕ ಏರಿಸಲಾಗಿದೆ.


Click it and Unblock the Notifications