ಭಾರತದ ರಿಟೇಲ್ ಹಣದುಬ್ಬರವು ಮೇ ತಿಂಗಳಲ್ಲಿ 25 ತಿಂಗಳ ಕನಿಷ್ಠ ಮಟ್ಟಕ್ಕೆ ಕುಸಿತ ಕಂಡಿದೆ. ರಿಟೇಲ್ ಹಣದುಬ್ಬರವು ಮೇ ತಿಂಗಳಿನಲ್ಲಿ ಶೇಕಡ 4.25ಕ್ಕೆ ತಲುಪಿದೆ. ಏಪ್ರಿಲ್‌ನಲ್ಲಿ ಶೇಕಡ 4.70ರಷ್ಟಿದ್ದ ರಿಟೇಲ್ ಹಣದುಬ್ಬರವು ಮೇ ತಿಂಗಳಲ್ಲಿ ಮತ್ತೆ ಕುಸಿತ ಕಂಡಿದೆ ಎಂದು ಅಂಕಿಅಂಶ ಮತ್ತು ಯೋಜನಾ ಅನುಷ್ಠಾನ ಸಚಿವಾಲಯವು ಸೋಮವಾರ ಜಾರಿ ಮಾಡಿದ ವರದಿಯಲ್ಲಿ ಉಲ್ಲೇಖ ಮಾಡಲಾಗಿದೆ.
ಗ್ರಾಹಕ-ಬೆಲೆ ಸೂಚ್ಯಂಕ (ಸಿಪಿಐ) ಆಧಾರಿತ ಹಣದುಬ್ಬರವು ಭಾರತೀಯ ರಿಸರ್ವ್ ಬ್ಯಾಂಕ್‌ನ (ಆರ್‌ಬಿಐ) ಸಹಿಷ್ಣುತೆಯ ಮಟ್ಟ ಶೇಕಡ 2-6ಕ್ಕಿಂತ ಕಡಿಮೆ ಇದೆ. ಸತತ ಮೂರನೇ ತಿಂಗಳು ಆರ್‌ಬಿಐನ ಸಹಿಷ್ಣು ಮಟ್ಟಕ್ಕಿಂತ ಕೆಳಗಿದೆ. ಗ್ರಾಹಕ ಆಹಾರ ಬೆಲೆ ಸೂಚ್ಯಂಕ (ಸಿಎಫ್‌ಪಿಐ) ಏಪ್ರಿಲ್‌ನಲ್ಲಿ ಶೇ 3.84 ರಿಂದ ಮೇ ತಿಂಗಳಲ್ಲಿ ಶೇ 2.91 ಕ್ಕೆ ಇಳಿದಿದೆ. ಗ್ರಾಮೀಣ ಹಣದುಬ್ಬರವು ಶೇಕಡ 4.17 ರಷ್ಟಿದ್ದರೆ, ನಗರ ಹಣದುಬ್ಬರವು ಶೇಕಡ 4.27 ರಷ್ಟಿದೆ.

ಕ್ರಮವಾಗಿ ಹಣದುಬ್ಬರವು ಮೇ ತಿಂಗಳಲ್ಲಿ ಶೇಕಡ 0.51ರಲ್ಲಿ ಬದಲಾಗದೆ ಉಳಿದಿದೆ. ತರಕಾರಿಗಳ ಹಣದುಬ್ಬರ ದರವು ಮೇ ತಿಂಗಳಿನಲ್ಲಿ ಶೇಕಡ 8.1 ರಷ್ಟು ಇಳಿಕೆ ಕಂಡಿದೆ. ಆಹಾರ ಮತ್ತು ಪಾನೀಯ ಹಾಗೂ ಇಂಧನ ವಿಭಾಗಗಳ ಹಣದುಬ್ಬರ ಮಟ್ಟವು ಕ್ರಮವಾಗಿ ಶೇಕಡ 3.29 ಮತ್ತು ಶೇಕಡ 4.64 ರಷ್ಟಿದೆ. ಧಾನ್ಯಗಳಿಗೆ, ಹಣದುಬ್ಬರ ದರವು ಶೇಕಡ 13. 67ರಿಂದ ಶೇಕಡ 12.65ಕ್ಕೆ ಇಳಿಕೆಯಾಗಿದೆ.
ಆಹಾರ ಮತ್ತು ಇಂಧನ ಬೆಲೆಗಳು ಕಡಿಮೆಯಾಗಿರುವ ಕಾರಣದಿಂದಾಗಿ ಹಣದುಬ್ಬರವು ಕೂಡಾ ಕೊಂಚ ನಿಯಂತ್ರಣಕ್ಕೆ ಬರುತ್ತಿದೆ. ಇಂಧನ ಬೆಲೆಯು ಕಡಿಮೆಯಾಗುತ್ತಿದ್ದಂತೆ ಧಾನ್ಯಗಳು ಮತ್ತು ತರಕಾರಿಗಳ ಬೆಲೆಯು ಕೂಡಾ ಸುಧಾರಿಸಿ ಹಣದುಬ್ಬರ ಮಟ್ಟದಲ್ಲಿ ಕೆಳಕ್ಕೆ ಇಳಿದಿದೆ. ಎಲ್‌ಪಿಜಿ ಮತ್ತು ಸೀಮೆಎಣ್ಣೆಯ ಅಂತಾರಾಷ್ಟ್ರೀಯ ಬೆಲೆಗಳಲ್ಲಿ ತೀವ್ರ ಕುಸಿತದಿಂದಾಗಿ ಮೇ ತಿಂಗಳಿನಲ್ಲಿ ಇಂಧನದ ಹಣದುಬ್ಬರವು ಕಡಿಮೆಯಾಗಿದೆ.
ಹಣದುಬ್ಬರ ಇಳಿಕೆಯಾಗುವ ಅಂದಾಜು ವ್ಯಕ್ತಪಡಿಸಿದ್ದ ಅರ್ಥಶಾಸ್ತ್ರಜ್ಞರು
ಭಾರತದ ರಿಟೇಲ್ ಹಣದುಬ್ಬರವು ಸತತ ಮೂರು ತ್ರೈಮಾಸಿಕಗಳಲ್ಲಿ ಆರ್‌ಬಿಐನ ಶೇಕಡ 6ರ ಸಹಿಷ್ಣು ಮಟ್ಟಕ್ಕಿಂತ ಹೆಚ್ಚಳವಾಗಿತ್ತು. ನವೆಂಬರ್ 2022 ರಲ್ಲಿ ಮಾತ್ರ ಆರ್‌ಬಿಐನ ಮಟ್ಟಕ್ಕಿಂತ ಕೆಳಕ್ಕೆ ಇತ್ತು. ಇನ್ನು ಸುಮಾರು 45 ಅರ್ಥಶಾಸ್ತ್ರಜ್ಞರುಗಳು ಮೇ ತಿಂಗಳಿನಲ್ಲಿ ರಿಟೇಲ್ ಹಣದುಬ್ಬರ ದರವು ಇಳಿಕೆ ಕಾಣುತ್ತದೆ ಎಂದು ಅಂದಾಜು ವ್ಯಕ್ತಪಡಿಸಿದ್ದರು. ರಿಟೇಲ್ ಹಣದುಬ್ಬರವು ಶೇಕಡ 4.70ರಿಂದ ಶೇಕಡ 4.42ಕ್ಕೆ ಇಳಿಕೆಯಾಗಲಿದೆ ಎಂದು ಹೇಳಿದ್ದರು. ಅಕ್ಟೋಬರ್ 2021 ರಿಂದ ಈ ಸಂಖ್ಯೆಯು ಅತೀ ಕಡಿಮೆ ಎಂದು ನಿಗದಿಪಡಿಸಲಾಗಿದೆ ಎಂದು ಅದು ಹೇಳಿದೆ.
ಈ ಹಿಂದಿನ ರಿಟೇಲ್ ಹಣದುಬ್ಬರ
ರಿಟೇಲ್ ಹಣದುಬ್ಬರವು ಜನವರಿಯಲ್ಲಿ ಮೂರು ತಿಂಗಳ ಗರಿಷ್ಠ ಮಟ್ಟಕ್ಕೆ ಏರಿಕೆಯಾಗಿದೆ. ಆದರೆ ಫೆಬ್ರವರಿ 2023ರಲ್ಲಿ ಸಿಪಿಐ ಹಣದುಬ್ಬರ ಕೊಂಚ ಇಳಿಕೆಯಾಗಿ ಶೇಕಡ 6.44ಕ್ಕೆ ತಲುಪಿದೆ. ಆದರೂ ಆರ್ಥಿಕ ಸ್ಥಿತಿ ಇನ್ನೂ ಕೂಡಾ ಸುಧಾರಿಸಿಲ್ಲ. ಕನ್ಸ್ಯೂಮರ್ ಪ್ರೈಸ್ ಇಂಡೆಕ್ಸ್ (ಸಿಪಿಐ) ಸತತ ಎರಡನೇ ತಿಂಗಳು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ (ಆರ್‌ಬಿಐ) ಸಹಿಷ್ಣು ಮಿತಿಗಿಂತ ಹೆಚ್ಚಳವಾಗಿತ್ತು. ಆದರೆ ಮಾರ್ಚ್‌ನಲ್ಲಿ ಶೇಕಡ 6ಕ್ಕಿಂತ ಕಡಿಮೆ ರಿಟೇಲ್ ಹಣದುಬ್ಬರವಿದೆ. ಜನವರಿಯಲ್ಲಿ ರಿಟೇಲ್ ಹಣದುಬ್ಬರ ಶೇಕಡ 6.52 ಆಗಿದೆ.
ಅಂದಾಜಿನಂತೆ ಭಾರತದಲ್ಲಿ ಮಾರ್ಚ್ ತಿಂಗಳಿನಲ್ಲಿ ರಿಟೇಲ್ ಹಣದುಬ್ಬರವು ಇಳಿಕೆಯಾಗಿದೆ. ಆರ್‌ಬಿಐನ ಗರಿಷ್ಠ ಹಣದುಬ್ಬರ ಮಿತಿಗಿಂತ ರಿಟೇಲ್ ಹಣದುಬ್ಬರವು ಕೆಳಕ್ಕೆ ಇಳಿದಿದ್ದು, ಮಾರ್ಚ್ ರಿಟೇಲ್ ಹಣದುಬ್ಬರ ಶೇಕಡ 5.66 ಆಗಿದೆ. ಮಾರ್ಚ್‌ನಲ್ಲಿ ಹಣದುಬ್ಬರುವ ಶೇಕಡ 6ಕ್ಕಿಂತ ಕಡಿಮೆ ಇರಲಿದೆ ಎಂದು ಹಲವಾರು ಅರ್ಥಶಾಸ್ತ್ರಜ್ಞರು ಅಂದಾಜು ವ್ಯಕ್ತಪಡಿಸಿದ್ದರು. ಇನ್ನು ಏಪ್ರಿಲ್ ತಿಂಗಳಿನಲ್ಲಿ ರಿಟೇಲ್ ಹಣದುಬ್ಬರವು ಶೇಕಡ 4.70ರಷ್ಟಿದೆ.


Click it and Unblock the Notifications