ಆಹಾರ ವಸ್ತುಗಳ ಬೆಲೆ ಏರಿಕೆ ಮಟ್ಟ ಕಡಿಮೆ ಆಗಿರುವುದು ಹಣದುಬ್ಬರ ಇಳಿಕೆಯಾಗಿದೆ. ಹೌದು,ಸರ್ಕಾರ ಬಿಡುಗಡೆ ಮಾಡಿದ ದತ್ತಾಂಶದ ಪ್ರಕಾರ ಶೇ.4.31 ರಷ್ಟು ಡಿಸೆಂಬರ್ ತಿಂಗಳಲ್ಲಿ ಶೇ. 5.22ರಷ್ಟಿದ್ದ ಹಣದುಬ್ಬರ ಜನವರಿ ತಿಂಗಳಲ್ಲಿ ಶೇ. 4.31ಕ್ಕೆ ಇಳಿಕೆಯಾಗಿದೆ.
ಆಹಾರ ಹಣದುಬ್ಬರದಲ್ಲಿ ಈ ತಿಂಗಳಲ್ಲಿ ಇಳಿಕೆ ಕಂಡುಬಂದಿರುವುದರಿಂದ ಚಿಲ್ಲರೆ ಹಣದುಬ್ಬರದ ಅಂಕಿಅಂಶಗಳು ಕಡಿಮೆಯಾಗಿವೆ. ವಿಶೇಷವೆಂದರೆ, ರಿಸರ್ವ್ ಬ್ಯಾಂಕ್ (ಆರ್‌ಬಿಐ) ಸುಮಾರು 5 ವರ್ಷಗಳ ನಂತರ ಬಡ್ಡಿದರಗಳನ್ನು ಕಡಿತಗೊಳಿಸಿರುವ ಸಮಯದಲ್ಲಿ ಹಣದುಬ್ಬರ ಕುಸಿತವನ್ನು ಕಂಡಿದೆ.

ಜನವರಿಯಲ್ಲಿ, ಹಣದುಬ್ಬರ ದರ (ಚಿಲ್ಲರೆ ಹಣದುಬ್ಬರ) ಇನ್ನೂ ರಿಸರ್ವ್ ಬ್ಯಾಂಕ್ ನಿಗದಿಪಡಿಸಿದ ಶೇ.2-6 ವ್ಯಾಪ್ತಿಯಲ್ಲಿದೆ. ಫೆಬ್ರವರಿ ನೀತಿಯಲ್ಲಿ, ರಿಸರ್ವ್ ಬ್ಯಾಂಕ್ 5 ವರ್ಷಗಳ ನಂತರ ಪಾಲಿಸಿ ದರಗಳಲ್ಲಿ 25 ಬೇಸಿಸ್ ಪಾಯಿಂಟ್‌ಗಳ ಕಡಿತವನ್ನು ಘೋಷಿಸಿತು.ಇದರ ಅಡಿಯಲ್ಲಿ, ಡಿಸೆಂಬರ್ ನೀತಿಯಲ್ಲಿ ಶೇ.6.50ರಷ್ಟಿದ್ದ ರೆಪೊ ದರವು ಈಗ ಶೇ.6.25 ಕ್ಕೆ ಇಳಿದಿದೆ.
ಬೆಲೆ ಏರಿಕೆ ಮಟ್ಟ ಇಳಿಕೆ
ನಿರೀಕ್ಷೆಸಿದಂತೆ ಹಣದುಬ್ಬರ ಜನವರಿಯಲ್ಲಿ ತಗ್ಗಬಹುದು ಎಂದು ಬಹುತೇಕ ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದರು. ಆರ್ಬಿಐ ಹಾಗೂ ಹಲವು ಸಂಸ್ಥೆಗಳೂ ಕೂಡ ಬೆಲೆ ಏರಿಕೆ ಮಟ್ಟ ಇಳಿಯಬಹುದು ಎಂದು ನಿರೀಕ್ಷಿಸಿದ್ದವು. ಆದರೆ, ನಿರೀಕ್ಷೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಹಣದುಬ್ಬರ ಇಳಿಕೆಯಾಗಿದೆ.
ರಾಯ್ಟರ್ಸ್ ಪೋಲ್ನಲ್ಲಿ ಸರಾಸರಿಯಾಗಿ ಹಣದುಬ್ಬರ ಜನವರಿಯಲ್ಲಿ ಶೇ 4.6ರಷ್ಟಿರಬಹುದು ಎನ್ನಲಾಗಿತ್ತು. ಅಂತಿಮವಾಗಿ ಹಣದುಬ್ಬರ ಶೇ. 4.31ಕ್ಕೆ ಇಳಿದಿದೆ.
ಜನವರಿಯಲ್ಲಿ ಆಹಾರ ಹಣದುಬ್ಬರ ಇಳಿಕೆ
ಸರ್ಕಾರ ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, ಆಹಾರ ಹಣದುಬ್ಬರದಿಂದ ಪರಿಹಾರ ಕಂಡುಬಂದಿದೆ. ಜನವರಿಯಲ್ಲಿ ಶೇ.6 ಕ್ಕೆ ಇಳಿದಿದ್ದು, ಕಳೆದ 4 ತಿಂಗಳಲ್ಲಿ ಇದೇ ಮೊದಲ ಬಾರಿಗೆ ಶೇ.8 ಕ್ಕಿಂತ ಕಡಿಮೆಯಾಗಿದೆ. ಇದಕ್ಕೆ ಕಾರಣ ಬೇಳೆಕಾಳುಗಳು, ಧಾನ್ಯಗಳು ಮತ್ತು ತರಕಾರಿಗಳ ಬೆಲೆ ಕುಸಿತ. ಧಾನ್ಯ ಹಣದುಬ್ಬರವು ಶೇ.6.5 ರಿಂದ ಶೇ.6.24ಕ್ಕೆ ಇಳಿದಿದೆ. ತರಕಾರಿಗಳ ಹಣದುಬ್ಬರ ದರವು ಶೇ.26.6 ರಿಂದ ಶೇ.11.4ಕ್ಕೆ ಇಳಿದಿದೆ. ಬೇಳೆಕಾಳುಗಳು ಸಹ ಅಗ್ಗವಾಗಿದ್ದು, ಶೇ. 3.83 ರಿಂದ ಶೇ. 2.59 ಕ್ಕೆ ಇಳಿಕೆಯಾಗಿದೆ.
ಆಹಾರವಸ್ತುಗಳ ಬೆಲೆಗಳು ನಿರೀಕ್ಷೆಯಂತೆ ಕಡಿಮೆ ಆಗಿವೆ. ಇದು ಒಟ್ಟಾರೆ ಹಣದುಬ್ಬರ ಇಳಿಕೆಗೆ ಕಾರಣವಾಗಿದೆ. ಗ್ರಾಮೀಣ ಭಾಗದ ಹಣದುಬ್ಬರ ಶೇ. 5.76ರಿಂದ ಶೇ. 4.64ಕ್ಕೆ ಇಳಿದಿದೆ. ನಗರ ಭಾಗದ ಹಣದುಬ್ಬರ ಶೇ. 4.58ರಿಂದ ಶೇ. 3.87ಕ್ಕೆ ಇಳಿಕೆಯಗಿದೆ.
ಹಣದುಬ್ಬರದ ಬಗ್ಗೆ ರಿಸರ್ವ್ ಬ್ಯಾಂಕಿನ ಅಂದಾಜು
ಫೆಬ್ರವರಿಯಲ್ಲಿ ನಡೆದ ನೀತಿ ಸಭೆಯಲ್ಲಿ (RBI MPC ಸಭೆ) ಹಣದುಬ್ಬರಕ್ಕೆ ಸಂಬಂಧಿಸಿದ ತನ್ನ ಅಂದಾಜನ್ನು ರಿಸರ್ವ್ ಬ್ಯಾಂಕ್ ಬಿಡುಗಡೆ ಮಾಡಿದೆ. ಇದರ ಅಡಿಯಲ್ಲಿ, FY25 ರ ಹಣದುಬ್ಬರ ದರವನ್ನು ಶೇ.4.2 ಎಂದು ಅಂದಾಜಿಸಲಾಗಿದೆ. 2025ನೇ ಹಣಕಾಸು ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ ಹಣದುಬ್ಬರವು ಸರಾಸರಿ ಶೇ.4.4 2026ನೇ ಹಣಕಾಸು ವರ್ಷದ ಮೊದಲ ತಿಂಗಳಲ್ಲಿ ಶೇ.4.5 ಎರಡನೇ ತಿಂಗಳಲ್ಲಿ ಶೇ.4 ಮೂರನೇ ತಿಂಗಳಲ್ಲಿ ಶೇ.3.8 ಮತ್ತು ನಾಲ್ಕನೇ ತಿಂಗಳಲ್ಲಿ ಶೇ. 4.2 ಇರಲಿದೆ ಎಂದು ಅಂದಾಜಿಸಲಾಗಿದೆ.
ಆರ್ಬಿಐ ಕೂಡ ಹಣದುಬ್ಬರ ಇಳಿಕೆ ಆಗುವ ನಿರೀಕ್ಷೆಯಲ್ಲಿ ಕಳೆದ ವಾರ ರಿಪೋ ದರವನ್ನು ಶೇ. 6.25ಕ್ಕೆ ಇಳಿಸಿದೆ.
ಫೆಬ್ರುವರಿ ತಿಂಗಳಲ್ಲೂ ಹಣದುಬ್ಬರ ಇದೇ ಮಟ್ಟದಲ್ಲಿ ಇದ್ದರೆ ಏಪ್ರಿಲ್ನಲ್ಲಿ ನಡೆಯುವ ಎಂಪಿಸಿ ಸಭೆಯಲ್ಲಿ ರಿಪೋ ದರವನ್ನು ಮತ್ತಷ್ಟು 25 ಮೂಲಾಂಕಗಳಷ್ಟು ಕಡಿಮೆ ಮಾಡಲು ಆರ್ಬಿಐ ನಿರ್ಧರಿಸುವ ಸಾಧ್ಯತೆ ಇರುವುದಿಲ್ಲ ಎಂದು ಹೇಳಿದೆ.
More From GoodReturns

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!



Click it and Unblock the Notifications