ಪ್ರಸಕ್ತ ಹಣಕಾಸು ವರ್ಷದ ಎರಡನೇ ತ್ರೈಮಾಸಿಕದ ಹಣಕಾಸು ವರದಿಯನ್ನು ರಿಲಯನ್ಸ್ ಇಂಡಸ್ಟ್ರೀಸ್ ಪ್ರಕಟಿಸಿದೆ. ರಿಲಯನ್ಸ್ ಕಂಪನಿಯು ತ್ರೈಮಾಸಿಕದಲ್ಲಿ 15,479 ಕೋಟಿ ರೂಪಾಯಿ ತೆರಿಗೆಯ ನಂತರದ ನಿವ್ವಳ ಲಾಭವನ್ನು ವರದಿ ಮಾಡಿದೆ.
ಕಳೆದ ವರ್ಷದ ಇದೇ ತ್ರೈಮಾಸಿಕಕ್ಕೆ ಹೋಲಿಸಿದರೆ ಇದು ಸುಮಾರು ಶೇಕಡಾ 46.0ರಷ್ಟು ಹೆಚ್ಚಳವಾಗಿದೆ. ಅದೇ ಸಮಯದಲ್ಲಿ, ರಿಲಯನ್ಸ್‌ನ ಕ್ರೂಡೀಕೃತ ಆದಾಯವು 30 ಸೆಪ್ಟೆಂಬರ್ 2021 ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ 1.67 ಲಕ್ಷ ಕೋಟಿ ರೂ. ನಷ್ಟಿದೆ. ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಈ ಆದಾಯ 1.40 ಲಕ್ಷ ಕೋಟಿ ರೂ. ನಷ್ಟಿತ್ತು.

ರಿಲಯನ್ಸ್ ಇಂಡಸ್ಟ್ರೀಸ್ ಎರಡನೇ ತ್ರೈಮಾಸಿಕದ ಪ್ರಮುಖ ಅಂಶಗಳು :
*ಪ್ರಸಕ್ತ ಹಣಕಾಸು ವರ್ಷದ ಎರಡನೇ ತ್ರೈಮಾಸಿಕದಲ್ಲಿ ಕ್ರೋಢೀಕೃತ ನಿವ್ವಳ ಲಾಭವು ವರ್ಷದಿಂದ ವರ್ಷಕ್ಕೆ ಶೇಕಡಾ 46.0 ರಷ್ಟು ಏರಿಕೆಯಾಗಿ ರೂ. 15,479 ಕೋಟಿಗೆ ತಲುಪಿದೆ. ಎರಡನೇ ತ್ರೈಮಾಸಿಕದಲ್ಲಿ ಕನ್ಸಾಲಿಡೇಟೆಡ್ ಇಪಿಎಸ್ ಪ್ರತಿ ವರ್ಷಕ್ಕೆ ಶೇ. 40.7 ರಷ್ಟು ಏರಿಕೆಯಾಗಿ ಪ್ರತಿ ಷೇರಿಗೆ ರೂ. 20.9 ಕ್ಕೆ ತಲುಪಿದೆ.
*ರಿಲಯನ್ಸ್‌ನ ಡಿಜಿಟಲ್ ಸೇವೆಗಳು ಇಬಿಐಟಿಡಿಎಯನ್ನು 9,561 ಕೋಟಿ ರೂ. ಸಿಕ್ಕಿದೆ. ರಿಲಯನ್ಸ್ ಜಿಯೋ ಪ್ಲಾಟ್‌ಫಾರ್ಮ್‌ಗಳ ತ್ರೈಮಾಸಿಕ ಏಕೀಕೃತ ನಿವ್ವಳ ಲಾಭವು ವರ್ಷದಿಂದ ವರ್ಷಕ್ಕೆ ಶೇಕಡಾ 23.5 ರಷ್ಟು ಏರಿಕೆಯಾಗಿ 3,728 ಕೋಟಿ ರೂ. ಮುಟ್ಟಿದೆ. ರಿಲಯನ್ಸ್ ಜಿಯೋದ ಎಎಪಿಯು ಎರಡನೇ ತ್ರೈಮಾಸಿಕದಲ್ಲಿ ಪ್ರತಿ ಚಂದಾದಾರರಿಗೆ ತಿಂಗಳಿಗೆ ರೂ 143.6 ರಂತೆ ದಾಖಲಾಗಿದ್ದು, ಹಿಂದಿನ ತ್ರೈಮಾಸಿಕದಲ್ಲಿ ರೂ 138.4 ರಷ್ಟಿತ್ತು.
* ರಿಲಯನ್ಸ್ ರಿಟೇಲ್ ನ ಇಬಿಐಟಿಡಿಎ ಮಾರ್ಜಿನ್ ವರ್ಷದಿಂದ ವರ್ಷಕ್ಕೆ ಶೇ .45.2 ರಷ್ಟು ಏರಿಕೆಯಾಗಿ 2,913 ಕೋಟಿ ರೂ. ತಲುಪಿದೆ. ಕಳೆದ ತ್ರೈಮಾಸಿಕ ಅವಧಿಯಲ್ಲಿ ರಿಲಯನ್ಸ್ ರಿಟೇಲ್ 813 ಹೊಸ ಮಳಿಗೆಗಳನ್ನು ತೆರೆದಿದೆ. ಇವುಗಳನ್ನು ಒಳಗೊಂಡಂತೆ, ಒಟ್ಟು ಮಳಿಗೆಗಳ ಸಂಖ್ಯೆ ಈಗ 13,635 ಕ್ಕೆ ಏರಿದೆ.
ಇನ್ನು ಇಂದು ರಿಲಯನ್ಸ್ ಷೇರುಗಳು ಫಲಿತಾಂಶ ಬಿಡುಗಡೆಗೂ ಮುನ್ನವೇ ಏರಿಕೆ ಕಂಡುಬಂದಿದೆ. ಇಂದು ರಿಲಯನ್ಸ್ ಷೇರು ಎನ್ಎಸ್ಇಯಲ್ಲಿ 5 ರೂಪಾಯಿಗಳ ಲಾಭದೊಂದಿಗೆ 2,627.40 ರೂಗಳಲ್ಲಿ ಕೊನೆಗೊಂಡಿತು. ಅದೇ ಸಮಯದಲ್ಲಿ, ಬಿಎಸ್‌ಇನಲ್ಲಿ ರಿಲಯನ್ಸ್ ನ ಷೇರು ರೂ. 2,627.05 ಕ್ಕೆ ಮುಕ್ತಾಯವಾಯಿತು.


Click it and Unblock the Notifications