RRVLನಲ್ಲಿ 10.09% ಷೇರು ಮಾರಿ, 47,265 ಕೋಟಿ ಸಂಗ್ರಹ ಪೂರ್ಣ

ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಹಾಗೂ ರಿಲಯನ್ಸ್ ರೀಟೇಲ್ ವೆಂಚರ್ಸ್ ಲಿಮಿಟೆಡ್ (RRVL)ನಿಂದ ಸಹಭಾಗಿಗಳ ಸೇರ್ಪಡೆ ಹಾಗೂ ಹಣ ಸಂಗ್ರಹ ಮುಗಿಸಿವೆ. ಇದು ಎರಡು ತಿಂಗಳಲ್ಲಿ ಸಂಗ್ರಹ ಆಗಿರುವ ಮೊತ್ತವಾಗಿದ್ದು, ರಿಲಯನ್ಸ್ ರೀಟೇಲ್ ವೆಂಚರ್ಸ್ ಒಟ್ಟಾರೆಯಾಗಿ 69,27,81,234 ಈಕ್ವಿಟಿ ಷೇರುಗಳನ್ನು ವಿತರಿಸಿ, 10.09% ಷೇರು ಮಾರಾಟ ಮಾಡಿ, 47,265 ಕೋಟಿ ರುಪಾಯಿಯನ್ನು ಸಂಗ್ರಹಿಸಿದೆ.

ರಿಲಯನ್ಸ್ ರೀಟೇಲ್ ವೆಂಚರ್ಸ್ ನಲ್ಲಿ ಫುಲ್ಲಿ ಡೈಲ್ಯೂಟೆಡ್ ಆಧಾರದಲ್ಲಿ ಈಕ್ವಿಟಿ ಷೇರುಗಳ ವಿತರಣೆ ಮಾಡಲಾಗಿದ್ದು, ಯಾವ ಕಂಪೆನಿ, ಎಷ್ಟು ಮೊತ್ತ ಹಾಗೂ ಆ ಷೇರಿನ ಪ್ರಮಾಣ ಎಷ್ಟು ಎಂಬ ಮಾಹಿತಿ ಹೀಗಿದೆ:

* ಸಿಲ್ವರ್ ಲೇಕ್ ಪಾರ್ಟನರ್ಸ್- 7,500 ಕೋಟಿ ರು., 1.60%

* ಸಿಲ್ವರ್ ಲೇಕ್ ಪಾರ್ಟನರ್ಸ್ ಸಹ ಹೂಡಿಕೆದಾರರು 1,875 ಕೋಟಿ ರು., 0.40%

* ಕೆಕೆಆರ್ 5,550 ಕೋಟಿ ರು., 1.19%

* ಮುಬದಾಲ 6,247 ಕೋಟಿ ರು., 1.33%

* ಎಡಿಐಎ 5,512.50 ಕೋಟಿ ರು., 1.18%

* ಜಿಐಸಿ 5,512.50 ಕೋಟಿ ರು., 1.18%

* ಟಿಪಿಜಿ 1,837.50 ಕೋಟಿ ರು., 0.39%

* ಜನರಲ್ ಅಟ್ಲಾಂಟಿಕ್ 3,675 ಕೋಟಿ ರು., 0.78%

* ಪಿಐಎಫ್ 9,555 ಕೋಟಿ ರು., 2.04%

RRVLನಲ್ಲಿ 10.09% ಷೇರು ಮಾರಿ, 47,265 ಕೋಟಿ ಸಂಗ್ರಹ ಪೂರ್ಣ

ರಿಲಯನ್ಸ್ ರೀಟೇಲ್ ವೆಂಚರ್ಸ್ ಲಿಮಿಟೆಡ್ ನಿರ್ದೇಶಕಿ ಇಶಾ ಮುಕೇಶ್ ಅಂಬಾನಿ ಮಾತನಾಡಿ, ರಿಲಯನ್ಸ್ ರೀಟೇಲ್ ವೆಂಚರ್ಸ್ ನಲ್ಲಿ ಇಂಥ ಪ್ರಬಲ ಹಾಗೂ ಗೌರವಾನ್ವಿತ ಸಹಭಾಗಿಗಳನ್ನು ಹೊಂದಿರುವುದಕ್ಕೆ ಹೆಮ್ಮೆ ಆಗುತ್ತದೆ. ನಮ್ಮ ಉದ್ಯಮದ ಬಗ್ಗೆ ಹೂಡಿಕೆದಾರರು ಇಂಥ ಅಭೂತಪೂರ್ವ ಆಸಕ್ತಿ ತೋರಿರುವುದು ನಮಗೆ ಸಿಕ್ಕ ಗೌರವ ಎನಿಸುತ್ತದೆ ಎಂದಿದ್ದಾರೆ.

ಜಾಗತಿಕ ಸಂಪರ್ಕ ಹಾಗೂ ಅವರ ಅನುಭವದ ಅನುಕೂಲ ಪಡೆದು ಕೆಲಸ ಮಾಡಲು ಎದುರು ನೋಡುತ್ತಿದ್ದೇವೆ. ಹೊಸ ವಾಣಿಜ್ಯ ವ್ಯವಹಾರಗಳ ಮೇಲೆ ನಮ್ಮ ಗಮನ ಇದ್ದು, ಹತ್ತಾರು ಲಕ್ಷ ವರ್ತಕರು ಹಾಗೂ ಕಿರು, ಸಣ್ಣ ಮತ್ತು ಮಧ್ಯಮ ಸಂಸ್ಥೆಗಳನ್ನು ಬಲಪಡಿಸುವ ಮೂಲಕ ಭಾರತದ ರೀಟೇಲ್ ವಲಯದಲ್ಲಿ ಬದಲಾವಣೆ ತರುವುದಕ್ಕೆ ನಾವು ಬದ್ಧರಾಗಿದ್ದೇವೆ ಎಂದು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+