For Quick Alerts
ALLOW NOTIFICATIONS  
For Daily Alerts

50,000 ಕೋಟಿ ರೂಪಾಯಿಗೆ ಯಾರು ದಿಕ್ಕೇ ಇಲ್ಲ: ಕ್ಲೈಮ್ ಆಗದೇ ಹಾಗೆ ಉಳಿದಿದೆ..!

|

ಯಾವುದೇ ಹಕ್ಕುದಾರರಿಲ್ಲದ ದೇಶದ ಬ್ಯಾಂಕ್ ಅಕೌಂಟ್‌ಗಳಲ್ಲಿ ಮತ್ತು ವಿಮಾ ಕಂಪನಿಗಳಲ್ಲಿ ಬರೋಬ್ಬರಿ 50,000 ಕೋಟಿ ರೂಪಾಯಿಗೂ ಅಧಿಕ ಕ್ಲೈಮ್ ಆಗದ ಹಣ ಹಾಗೆಯೇ ಉಳಿದಿದೆ ಎಂದು ಕೇಂದ್ರ ಸರ್ಕಾರ ಸಂಸತ್ತಿನಲ್ಲಿ ಲಿಖಿತ ಉತ್ತರದಲ್ಲಿ ತಿಳಿಸಿದೆ.

 

ಒಂದು ಅಂದಾಜಿನ ಪ್ರಕಾರ, 2020 ರಲ್ಲಿಯೇ 5,977 ಕೋಟಿ ರೂಪಾಯಿಗಳನ್ನು ಬ್ಯಾಂಕುಗಳಿಗೆ ಲಗತ್ತಿಸಲಾಗಿದೆ. ಅಂದರೆ, ಕೆಲವರು ಹಣವನ್ನು ಬ್ಯಾಂಕುಗಳಲ್ಲಿ ಠೇವಣಿ ಇಟ್ಟು ಮರೆತರೆ, ಕೆಲವರು ಪಾಲಿಸಿಗಳನ್ನು ಖರೀದಿಸಿದರೂ, ಕ್ಲೈಮ್ ಮಾಡುವುದನ್ನೇ ಮರೆತಿದ್ದಾರೆ.

 

ರೈಲ್ವೆ ಟಿಕೆಟ್ ಬುಕ್ ಮಾಡುವ ಮುನ್ನ ಇಲ್ಲಿ ಗಮನಿಸಿ: 1 ಲಕ್ಷ ರೂಪಾಯಿ ಗೆಲ್ಲುವ ಅವಕಾಶ!ರೈಲ್ವೆ ಟಿಕೆಟ್ ಬುಕ್ ಮಾಡುವ ಮುನ್ನ ಇಲ್ಲಿ ಗಮನಿಸಿ: 1 ಲಕ್ಷ ರೂಪಾಯಿ ಗೆಲ್ಲುವ ಅವಕಾಶ!

ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಹಣಕಾಸು ರಾಜ್ಯ ಸಚಿವ ಭಗವತ್ ಕರದ್ ಮಾರ್ಚ್ 31, 2020 ರ ವೇಳೆಗೆ, ರಿಸರ್ವ್ ಬ್ಯಾಂಕ್ ಅಂಕಿ-ಅಂಶಗಳ ಪ್ರಕಾರ, ದೇಶದ ಬ್ಯಾಂಕುಗಳಲ್ಲಿ 24,356 ಕೋಟಿ ಹಾಗೆಯೇ ಉಳಿದಿದೆ. ಇದರ ಜೊತೆಗೆ 2020ರ ಹಣಕಾಸು ವರ್ಷದ ಅಂತ್ಯಕ್ಕೆ ವಿಮಾ ಕಂಪನಿಗಳಲ್ಲಿ ಯಾವುದೇ ಕ್ಲೈಮ್ ಮಾಡದ ಪಾಲಿಸಿಗಳ ಅಡಿಯಲ್ಲಿ 8.1 ಕೋಟಿ ಖಾತೆಗಳಲ್ಲಿ 24,856 ಕೋಟಿ ರೂಪಾಯಿ ಇದೆ.

50,000 ಕೋಟಿ ರೂಪಾಯಿಗೆ ಯಾರು ದಿಕ್ಕೇ ಇಲ್ಲ..!

ಪ್ರತಿ ಖಾತೆಯಲ್ಲಿ ಸರಾಸರಿ 3000 ರೂ.ಗಳು ತುಂಬಾ ಸಮಯದಿಂದ ಹಿಂಪಡೆಯದೇ ಹಾಗೆಯೇ ಉಳಿದಿದ್ದು, ಇದುವರೆಗೂ ಯಾರೂ ಕ್ಲೈಮ್ ಮಾಡಿಲ್ಲ. ಇದರಲ್ಲಿ ಸಹ ಸರ್ಕಾರಿ ಬ್ಯಾಂಕುಗಳ ಖಾತೆಯಲ್ಲಿ ಸರಾಸರಿ 3030 ರೂ. ಸರಾಸರಿಯಿದೆ.

ಅದರಲ್ಲೂ ಎಸ್‌ಬಿಐನನಲ್ಲಿ 2,710 ರೂ., ಖಾಸಗಿ ಬ್ಯಾಂಕ್‌ಗಳಲ್ಲಿ ಸರಾಸರಿ 3,340 ರೂ. ವಿದೇಶಿ ಬ್ಯಾಂಕುಗಳಲ್ಲಿ, ಈ ಸರಾಸರಿ ಮೊತ್ತ 9,250 ರೂ. ನಷ್ಟಿದೆ. ಈ ಎಲ್ಲಾ ಹಣಗಳ ಖಾತೆಗಳ ಸಂಖ್ಯೆಯು 6.6 ಲಕ್ಷದಷ್ಟಿದೆ.

ಇನ್ನು ವಿಮೆಯ ವಿಷಯಕ್ಕೂ ಬಂದರೂ ಹಣ ಕಟ್ಟಿ ಅವಧಿಯಲ್ಲಿ ಕ್ಲೈಮ್ ಮಾಡದೇ ಹಾಗೆಯೇ ಉಳಿದಿರುವ ಸಾಕಷ್ಟು ಉದಾಹರಣೆಯಿದೆ. ಏಕೆಂದರೆ ಅನೇಕ ಪಾಲಿಸಿದಾರರು ಅಥವಾ ಅವರ ಕುಟುಂಬಗಳು ವಿಮಾ ಕಂಪನಿಗಳಿಂದ ಮುಕ್ತಾಯದ ಮೊತ್ತವನ್ನು ಪಡೆಯುವುದಿಲ್ಲ, ಮತ್ತು ಅದು ಅನೇಕ ವರ್ಷಗಳಾಗಿದ್ದರೂ ಕ್ಲೈಮ್ ಮಾಡಿಲ್ಲ.

ಏರುತ್ತಲೇ ಸಾಗಿದ ಚಿನ್ನದ ಬೆಲೆ: ಜುಲೈ 30ರಂದು 10ಗ್ರಾಂ ಬೆಲೆ ಎಷ್ಟಿದೆ?ಏರುತ್ತಲೇ ಸಾಗಿದ ಚಿನ್ನದ ಬೆಲೆ: ಜುಲೈ 30ರಂದು 10ಗ್ರಾಂ ಬೆಲೆ ಎಷ್ಟಿದೆ?

ಪಾಲಿಸಿದಾರನ ಸಾವು ಅಥವಾ ಬೇರೆ ಯಾವುದೇ ಕಾರಣದಿಂದಾಗಿ ಆತನ ಪಾಲಿಸಿಯೊಂದನ್ನು ಖರೀದಿಸಿದ್ದ ಎಂದು ಅವರ ಕುಟುಂಬಕ್ಕೆ ತಿಳಿಯದೇ ಇರುವ ಅನೇಕ ಘಟನೆಗಳು ಸಹ ಇವೆ. ಕೆಲವೊಮ್ಮೆ ಪಾಲಿಸಿದಾರನು ಸ್ವತಃ ಪಾಲಿಸಿ ಪೇಪರ್‌ಗಳನ್ನು ಕಳೆದುಕೊಳ್ಳುತ್ತಾನೆ ಅಥವಾ ಮುಕ್ತಾಯ ದಿನಾಂಕವನ್ನು ತಪ್ಪಿಸಿಕೊಳ್ಳುತ್ತಾನೆ ಅಥವಾ ಮರೆತುಬಿಡುತ್ತಾನೆ.

ಹಣಕಾಸು ಖಾತೆ ರಾಜ್ಯ ಸಚಿವರ ಪ್ರಕಾರ, ಬ್ಯಾಂಕುಗಳಲ್ಲಿ ಕ್ಲೈಮ್ ಮಾಡದ ಹಣವನ್ನು ಠೇವಣಿದಾರರ ಹಿತಾಸಕ್ತಿಗಳನ್ನು ಉತ್ತೇಜಿಸಲು ಬಳಸಬಹುದು ಎಂದು ರಿಸರ್ವ್ ಬ್ಯಾಂಕಿನ ನಿಯಮಗಳು ಹೇಳುತ್ತವೆ.

50,000 ಕೋಟಿ ರೂಪಾಯಿಗೆ ಯಾರು ದಿಕ್ಕೇ ಇಲ್ಲ..!

ಯಾವ ಬ್ಯಾಂಕ್‌ಗಳಲ್ಲಿ ಎಷ್ಟು ಹಣ ಬಾಕಿ ಉಳಿದಿದೆ ಎಂಬುದನ್ನು ಈ ಕೆಳಗೆ ತಿಳಿಯಿರಿ:

ಒಟ್ಟಾರೆ ಬ್ಯಾಂಕ್‌ನಲ್ಲಿ ಉಳಿದಿರುವ ಮೊತ್ತ 24,356 ಕೋಟಿ
ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ 5.5 ಕೋಟಿ ಅಕೌಂಟ್‌ (16,597 ಕೋಟಿ ರೂ.)
ಎಸ್‌ಬಿಐನಲ್ಲಿ 1.3 ಕೋಟಿ ಅಕೌಂಟ್ ( 3,578 ಕೋಟಿ ರೂಪಾಯಿ)
ಖಾಸಗಿ ಬ್ಯಾಂಕ್‌ಗಳು 0.9 ಕೋಟಿ (2,964 ಕೋಟಿ ರೂಪಾಯಿ)
ವಿದೇಶಿ ಬ್ಯಾಂಕ್‌ಗಳಲ್ಲಿ 0.07 ಕೋಟಿ (612 ಕೋಟಿ ರೂಪಾಯಿ)
ಆರ್ಆರ್‌ಬಿಸ್ 0.4 ಕೋಟಿ (601 ಕೋಟಿ ರೂಪಾಯಿ)

ಇನ್ಸುರೆನ್ಸ್ ಕಂಪನಿಗಳಲ್ಲಿ ಕ್ಲೈಮ್ ಆಗದೆ ಹಾಗೆಯೇ ಉಳಿದಿರುವ ಹಣ 24,586 ಕೋಟಿ ರೂಪಾಯಿನಷ್ಟಿದೆ.

English summary

Rs 50000 Crore Lying Unclaimed Amount in Banks, Insurance Companies says Govt

Total unclaimed funds worth Rs 24,356 crore are lying with banks in India in 8.1 crore accounts
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X