For Quick Alerts
ALLOW NOTIFICATIONS  
For Daily Alerts

ಮೊರೊಟೋರಿಯಂ ಅವಧಿಯಲ್ಲಿ ಪಿಎಸ್‌ಬಿ ಬ್ಯಾಂಕುಗಳಿಗೆ ಬರಬೇಕಾದ ಸಾಲ ಎಷ್ಟು ಗೊತ್ತಾ?

|

ನವದೆಹಲಿ, ಜೂನ್ 30: ಕೊರೊನಾವೈರಸ್ ಹಾವಳಿಯಿಂದ ಬ್ಯಾಂಕುಗಳಲ್ಲಿನ ಸಾಲಗಳಿಗೆ ಆರು ತಿಂಗಳ ವಿನಾಯಿತಿಯನ್ನು ನೀಡಬೇಕು ಎಂದು ಆರ್‌ಬಿಐ ಎಲ್ಲ ಬ್ಯಾಂಕುಗಳಿಗೆ ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ಸಾಲಗಾರರಿಗೆ ಆರು ತಿಂಗಳು ಇಎಂಐ ಕಟ್ಟಲು (ಮೊರೊಟೋರಿಯಂ) ವಿನಾಯಿತಿ ನೀಡಲಾಗಿದೆ.

ಈ ಹಿನ್ನೆಲೆಯಲ್ಲಿ ಭಾರತದ ಐದು ದೊಡ್ಡ ಸರ್ಕಾರಿ ಬ್ಯಾಂಕುಗಳು ಒಟ್ಟಾರೆಯಾಗಿ ಕನಿಷ್ಠ 7.9 ಲಕ್ಷ ಕೋಟಿ ರು.ಗಳ ಸಾಲವನ್ನು ಮೊರೊಟೋರಿಯಂ ಅವಧಿಯಲ್ಲಿ ಹೊಂದಿವೆ.

ಕೊರೊನಾವೈರಸ್ ಸದ್ಯಕ್ಕೆ ತೊಲಗುವ ಲಕ್ಷಣಗಳು ಕಾಣುತ್ತಿಲ್ಲ ಎಂದ WHOಕೊರೊನಾವೈರಸ್ ಸದ್ಯಕ್ಕೆ ತೊಲಗುವ ಲಕ್ಷಣಗಳು ಕಾಣುತ್ತಿಲ್ಲ ಎಂದ WHO

ಅಂದರೆ ಕನಿಷ್ಠ 7.9 ಲಕ್ಷ ಕೋಟಿ ರು ಸಾಲ ಬ್ಯಾಂಕುಗಳಿಗೆ ಆರು ತಿಂಗಳ ಅವಧಿಯಲ್ಲಿ ಬರಬೇಕಾಗಿದೆ.

ಐದು ಬ್ಯಾಂಕುಗಳು

ಐದು ಬ್ಯಾಂಕುಗಳು

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ), ಬ್ಯಾಂಕ್ ಆಫ್ ಬರೋಡಾ, ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್‌ಬಿ), ಬ್ಯಾಂಕ್ ಆಫ್ ಇಂಡಿಯಾ ಮತ್ತು ಕೆನರಾ ಬ್ಯಾಂಕ್ ಆ ಐದು ಪ್ರಮುಖ ಬ್ಯಾಂಕುಗಳು.

ಎಸ್‌ಬಿಐಗೆ 5.63 ಲಕ್ಷ ಕೋಟಿ ರುಪಾಯಿ

ಎಸ್‌ಬಿಐಗೆ 5.63 ಲಕ್ಷ ಕೋಟಿ ರುಪಾಯಿ

ಎಸ್‌ಬಿಐಗೆ 5.63 ಲಕ್ಷ ಕೋಟಿ ರುಪಾಯಿ ಬರಬೇಕಾಗಿದ್ದರೆ. ಇತರ ನಾಲ್ಕು ಸಾರ್ವಜನಿಕ ವಲಯದ ಬ್ಯಾಂಕುಗಳಿಗೆ 1.46 ಕೋಟಿ ರುಪಾಯಿ ಬರಬೇಕಿದೆ ಎಂದು ದಿ ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.

ಮೊರೊಟೋರಿಯಂ ನಿಷೇಧವನ್ನು ಕೊನೆಗೊಳಿಸಲು ಕಾಯುತ್ತಿದ್ದಾರೆ

ಮೊರೊಟೋರಿಯಂ ನಿಷೇಧವನ್ನು ಕೊನೆಗೊಳಿಸಲು ಕಾಯುತ್ತಿದ್ದಾರೆ

7.9 ಲಕ್ಷ ಕೋಟಿ ರುಪಾಯಿ ಬ್ಯಾಂಕುಗಳ ಒಟ್ಟು ಸಾಲದ ಸುಮಾರು 20% ರಷ್ಟಿದೆ. ಇದರ ಪ್ರಮಾಣ ಇನ್ನೂ ಹೆಚ್ಚಿದೆ ಎನ್ನಲಾಗಿದೆ. ಇತರ ಬ್ಯಾಂಕುಗಳು ನಿಷೇಧಕ್ಕೆ ಒಳಗಾದ ಸಾಲಗಳ ಬಗ್ಗೆ ಮಾತ್ರ ಡೇಟಾವನ್ನು ನೀಡಿವೆ. ಪ್ರಮಾಣಿತ ಬಹಿರಂಗಪಡಿಸುವಿಕೆಯ ಸ್ವರೂಪ ಇರಬೇಕು ಎಂದು ವಿಶ್ಲೇಷಕರು ಹೇಳಿದ್ದಾರೆ. ಆದರೆ, ಡೆಟಾ ಕುರಿತು ಹೆಚ್ಚಿನ ಸ್ಪಷ್ಟತೆಗಾಗಿ ಬ್ಯಾಂಕುಗಳು ಮೊರೊಟೋರಿಯಂ ನಿಷೇಧವನ್ನು ಕೊನೆಗೊಳಿಸಲು ಕಾಯುತ್ತಿದ್ದಾರೆ ಎಂದು ವರದಿ ಹೇಳುತ್ತದೆ.

ಬಡ್ಡಿಯನ್ನು ಮನ್ನಾ ಮಾಡಲು ಆಗುವುದಿಲ್ಲ

ಬಡ್ಡಿಯನ್ನು ಮನ್ನಾ ಮಾಡಲು ಆಗುವುದಿಲ್ಲ

ಸೆಪ್ಟೆಂಬರ್ ವೇಳೆಗೆ, ಬ್ಯಾಂಕುಗಳು ಮೊರೊಟೋರಿಯಂ ಸಾಲದ ಪ್ರಮಾಣದ ಬಗ್ಗೆ ಅಂತಿಮ ಅಂಕಿ ಸಂಖ್ಯೆಗಳನ್ನು ನೀಡಲಿವೆ ಎನ್ನಲಾಗಿದೆ. ಏತನ್ಮದ್ಯೆ ಮೊರೊಟೋರಿಯಂ ಅವಧಿಯಲ್ಲಿನ ಬಡ್ಡಿಯನ್ನು ಮನ್ನಾ ಮಾಡುವ ಕುರಿತು ಕೇಂದ್ರ ಸರ್ಕಾರ ಆಗಸ್ಟ್‌ನಲ್ಲಿ ನಿರ್ಧಾರ ಕೈಗೊಳ್ಳಲಿದೆ. ಈಗಾಗಲೇ ಎಲ್ಲ ಬ್ಯಾಂಕುಗಳು ಬಡ್ಡಿಯನ್ನು ಮನ್ನಾ ಮಾಡಲು ಆಗುವುದಿಲ್ಲ ಎಂದು ಹೇಳಿವೆ.

English summary

RS 7.9 Lakh  Crore Loan Pending Under Moratorium For Top 5 PSB Banks

RS 7.9 Lakh  Crore Rupees Loan Pending Under Moratorium For Top 5 PSB Banks
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X