ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಿಂದ ಬುಧವಾರ ಘೋಷಣೆ ಮಾಡಿದಂತೆ ರಿಯಲ್ ಟೈಮ್ ಗ್ರಾಸ್ ಸೆಟ್ಲ್ ಮೆಂಟ್ ಸಿಸ್ಟಮ್ (ಆರ್ ಟಿಜಿಎಸ್) 24X7, ವರ್ಷದ ಎಲ್ಲ ದಿನವೂ ಡಿಸೆಂಬರ್ 14, 2020ರಿಂದ ಕಾರ್ಯ ನಿರ್ವಹಿಸಲು ಆರಂಭವಾಗಲಿದೆ. ಆರ್ ಬಿಐನಿಂದ NEFT ಕಾರ್ಯ ನಿರ್ವಹಣೆ 24X7 ಕಾರ್ಯ ನಿರ್ವಹಿಸಲು ಆರಂಭಿಸಿದ ಒಂದು ವರ್ಷದೊಳಗೆ ಆರ್ ಟಿಜಿಎಸ್ ಕೂಡ ಅದೇ ಹಾದಿಗೆ ಬಂದಿದೆ.
"ವರ್ಷದ ಎಲ್ಲ ದಿನವೂ ಇಪ್ಪತ್ನಾಲ್ಕು ಗಂಟೆಯೂ ಆರ್ ಟಿಜಿಎಸ್ ವ್ಯವಸ್ಥೆ ಕಾರ್ಯ ನಿರ್ವಹಿಸುವ ವಿಶ್ವದಲ್ಲಿನ ಕೆಲವೇ ದೇಶಗಳಲ್ಲಿ ಭಾರತ ಕೂಡ ಒಂದು," ಎಂದು ಕೇಂದ್ರೀಯ ಬ್ಯಾಂಕ್ ಹೇಳಿಕೆಯಲ್ಲಿ ತಿಳಿಸಿದೆ. ಈಚೆಗೆ ನಡೆದಿದ್ದ ಹಣಕಾಸು ಸಮಿತಿ ಸಭೆಯಲ್ಲಿ ಆರ್ ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರು ಆರ್ ಟಿಜಿಎಸ್ ಬಗ್ಗೆ ಘೋಷಣೆ ಮಾಡಿದ ಕೆಲವೇ ದಿನಗಳಲ್ಲಿ ಇದೀಗ ಜಾರಿ ದಿನಾಂಕವನ್ನು ತಿಳಿಸಲಾಗಿದೆ.
ಆರ್ ಟಿಜಿಎಸ್ ವ್ಯವಸ್ಥೆ ಪ್ರಾಥಮಿಕವಾಗಿ ಇರುವುದು ದೊಡ್ಡ ಮೊತ್ತದ ವ್ಯವಹಾರಕ್ಕೆ. ರಿಯಲ್ ಟೈಮ್ ಆಧಾರದಲ್ಲಿ ಇದು ನಡೆಯುತ್ತದೆ. ಆರ್ ಟಿಜಿಎಸ್ ಮೂಲಕ ಕನಿಷ್ಠ 2 ಲಕ್ಷ ರುಪಾಯಿಯನ್ನು ವರ್ಗಾವಣೆ ಮಾಡಬೇಕಾದರೆ, ಗರಿಷ್ಠ ಮಿತಿ ಎಂಬುದಿಲ್ಲ. ಫಲಾನುಭವಿ ಖಾತೆಗೆ ತಕ್ಷಣವೇ ಹಣ ವರ್ಗಾವಣೆ ಆಗುತ್ತದೆ.

NEFT ಮತ್ತು RTGS ಮೂಲಕ ವ್ಯವಹಾರ ನಡೆಸುವುದಕ್ಕೆ 2019ರ ಜುಲೈನಿಂದ ಶುಲ್ಕ ವಿಧಿಸುವುದನ್ನು ಆರ್ ಬಿಐ ನಿಲ್ಲಿಸಿದೆ. ದೇಶದಲ್ಲಿ ಡಿಜಿಟಲ್ ವ್ಯವಹಾರಗಳನ್ನು ಉತ್ತೇಜಿಸಲು ಈ ಕ್ರಮ ಕೈಗೊಳ್ಳಲಾಗಿದೆ.
More From GoodReturns

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಗೃಹ ಸಾಲದ ಇಎಂಐ ಇಳಿಕೆ: ಆರ್ಬಿಐ ನಿರ್ಧಾರದ ಅಸಲಿ ಸತ್ಯ

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಆರ್ಬಿಐ ಫೊರೆಕ್ಸ್ ಮಿತಿ: ಇಂದಿನ ಮಾರುಕಟ್ಟೆ ಕುಸಿತಕ್ಕೆ ಕಾರಣವೇ?

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಆರ್ಬಿಐ ರೆಪೋ ದರ: ನಿಮ್ಮ ಇಎಂಐ ಹೊರೆ ಹೆಚ್ಚಾಗುತ್ತಾ?

ಆರ್ಬಿಐ ನಿರ್ಧಾರ: ನಿಮ್ಮ ಉಳಿತಾಯದ ಹಣಕ್ಕೆ ಈಗ ಕಾದಿದೆ ಅಚ್ಚರಿ!

ಆರ್ಬಿಐ ನಿರ್ಧಾರದ ನಂತರ ನಿಮ್ಮ ಹಣಕ್ಕೆ ಯಾವುದು ಬೆಸ್ಟ್?

ಆರ್ಬಿಐ ನಿರ್ಧಾರ: ನಿಮ್ಮ ಎಸ್ಐಪಿ ಮತ್ತು ಇಎಂಐ ಬದಲಾಯಿಸಬೇಕೇ?

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಆರ್ಬಿಐ ಪಾಲಿಸಿ: ಇಂದಿನ ನಿರ್ಧಾರ ನಿಮ್ಮ ಹೂಡಿಕೆಯನ್ನು ಬದಲಿಸುತ್ತಾ?



Click it and Unblock the Notifications