ಭಾರತದಲ್ಲಿ ಚಿನ್ನಕ್ಕೆ ಅತೀ ಅಧಿಕ ಮೌಲ್ಯವಿದೆ. ಚಿನ್ನ ಜ್ಯುವೆಲ್ಲರಿ ಮತ್ತು ಚಿನ್ನದ ವಸ್ತುಗಳ ಸಂಬಂಧಿಸಿದಂತೆ ನಿಯಮವನ್ನು ಬದಲಾವಣೆ ಮಾಡಲಾಗಿದೆ. ಪ್ರಮುಖವಾಗಿ ಸರ್ಕಾರ ನೀಡಿದ ಮಾಹಿತಿ ಪ್ರಕಾರ ಚಿನ್ನದ ಜ್ಯುವೆಲ್ಲರಿಯಲ್ಲಿ ಆರು ಟಿಜಿಟ್‌ನ ಹಾಲ್‌ಮಾರ್ಕ್ ಇಲ್ಲದೆ ಚಿನ್ನವನ್ನು ಮಾರಾಟ ಮಾಡುವಂತಿಲ್ಲ. ಏಪ್ರಿಲ್ 1ರಿಂದ ಈ ಬದಲಾವಣೆಯಾಗಲಿದೆ. ಈ ಬಗ್ಗೆ ಅಧಿಕೃತ ಹೇಳಿಕೆ ನೀಡಿದ, ಕನ್ಸ್ಯೂಮರ್ ಅಫೇರ್, ಫುಡ್ ಆಂಡ್ ಪಬ್ಲಿಕ್ ಡಿಸ್ಟ್ರಿಬ್ಯೂಷನ್ ಸಚಿವಾಲಯ ಮಾಹಿತಿ ನೀಡಿದೆ.
"ಚಿನ್ನ ಮಾರಾಟವಾಗುವಾಗ ಉತ್ತಮ ಗುಣಮಟ್ಟವನ್ನು ಕಾಯ್ದುಕೊಳ್ಳುವುದು, ಬಿಐಎಸ್ ಶೇಕಡ 80ರಷ್ಟು ವಿನಾಯಿತಿ ನೀಡಲಿದೆ," ಎಂದು ಉಲ್ಲೇಖಿಸಲಾಗಿದೆ. ಬ್ಯೂರೋ ಆಫ್ ಇಂಡಿಯನ್ ಸ್ಟಾಂಡರ್ಡ್ (ಬಿಐಎಸ್) ಸಭೆಯ ಬಳಿಕವೇ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಮಾರ್ಚ್ 3, 2023ರಂದು ಸಭೆ ನಡೆಸಲಾಗಿದ್ದು, ಕೇಂದ್ರ ಸಂಪುಟ ಸಚಿವ ಪಿಯೂಷ್ ಗೋಯಲ್ ನೇತೃತ್ವದಲ್ಲಿ ನಡೆದಿದೆ. ಈ ಬಗ್ಗೆ ಕನ್ಸ್ಯೂಮರ್ ಆಫೇರ್ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ನಿಧಿ ಖಾರೆ ಮಾಹಿತಿ ನೀಡಿದ್ದಾರೆ.

ಪ್ರಸ್ತುತ ಆರು ಡಿಜಿಟ್‌ನ ಎಚ್‌ಯುಐಡಿ ಬಳಕೆ ಮಾಡಲಾಗುತ್ತದೆ. ದೇಶದಾದ್ಯಂತ ಹಾಲ್‌ಮಾರ್ಕ್ ಚಿನ್ನದ ಜ್ಯುವೆಲ್ಲರಿಯನ್ನು ಮಾರಾಟ ಮಾಡಲಾಗುತ್ತಿದೆ. ಲೋಹಕ್ಕೆ ಚಿನ್ನದ ಹಾಲ್‌ಮಾರ್ಕಿಂಗ್ ಗುಣಮಟ್ಟ ಸರ್ಟಿಫಿಕೇಷನ್ ಆಗಿದೆ. 2021ರ ಜೂನ್‌ನಲ್ಲಿ ಬಿಐಎಸ್ ಹಾಲ್‌ಮಾರ್ಕಿಂಗ್ ಕಡ್ಡಾಯಗೊಳಿಸಿದೆ. ಮೊದಲ ಹಂತದಲ್ಲಿ 256 ಜಿಲ್ಲೆಗಳಲ್ಲಿ ಇದನ್ನು ಕಡ್ಡಾಯಗೊಳಿಸಲಾಗಿದ್ದು, ಅದಾದ ಬಳಿಕ 32 ನಗರಗಳಲ್ಲಿ ವಿಸ್ತರಣೆ ಮಾಡಲಾಗಿದೆ. ಒಟ್ಟಾಗಿ 288 ಜಿಲ್ಲೆಗಳಲ್ಲಿ ಹಾಲ್‌ಮಾರ್ಕ್ ಇದ್ದು, 51 ಜಿಲ್ಲೆಗಳಲ್ಲೂ ವಿಸ್ತರಿಸಲಾಗಿದೆ.
ಎಚ್‌ಯುಐಡಿ ಎಂದರೇನು?
* ಹಾಲ್‌ಮಾರ್ಕ್ ಯುನಿಕ್ ಐಡೆಂಟಿಫಿಕೇಷನ್ (ಎಚ್‌ಯುಐಡಿ) ನಂಬರ್ ಎಂಬುವುದು ಆರು ಅಂಕಿ ಸಂಖ್ಯೆಗಳ ಯೂನಿಕ್ ಕೋಡ್ ಆಗಿದೆ.
* ಜುಲೈ 1, 2021ರಲ್ಲಿ ಇದು ಮೊದಲ ಬಾರಿಗೆ ಆರಂಭ ಮಾಡಲಾಗಿದೆ.
* ಹಾಲ್‌ಮಾರ್ಕಿಂಗ್ ಜೊತೆಗೆ ಎಲ್ಲ ಜ್ಯುವೆಲ್ಲರಿಗಳಲ್ಲಿ ಎಚ್‌ಯುಐಡಿ ಇರಲಿದೆ. ಹಾಗೆಯೇ ಪ್ರತಿ ಜ್ಯುವೆಲ್ಲರಿಯಲ್ಲಿ ವಿಭಿನ್ನವಾಗಿರಲಿದೆ.


Click it and Unblock the Notifications