For Quick Alerts
ALLOW NOTIFICATIONS  
For Daily Alerts

ಅಮೆರಿಕ ಡಾಲರ್ ವಿರುದ್ಧ 75ರ ಗಡಿ ದಾಟಿದ ಭಾರತದ ರುಪಾಯಿ ಮೌಲ್ಯ

|

ಇದೇ ಮೊದಲ ಬಾರಿಗೆ ಅಮೆರಿಕ ಡಾಲರ್ ವಿರುದ್ಧ ಭಾರತದ ರುಪಾಯಿ ಮೌಲ್ಯ 75ರ ಗಡಿಯನ್ನು ದಾಟಿದೆ. ಗುರುವಾರ ಸಂಜೆ 4ರ ಹೊತ್ತಿಗೆ ಡಾಲರ್ ವಿರುದ್ಧ ರುಪಾಯಿ 75.10 ಇತ್ತು. ಬುಧವಾರದ ದಿನಾಂತ್ಯಕ್ಕಿಂತ 89 ಪೈಸೆಯಷ್ಟು ಡಾಲರ್ ವಿರುದ್ಧ ರುಪಾಯಿ ಕುಸಿದಿದೆ. ಜಾಗತಿಕ ಷೇರು ಮಾರುಕಟ್ಟೆಯಲ್ಲಿನ ಕುಸಿತ, ಇತರ ಎಲ್ಲ ಕರೆನ್ಸಿಗಳ ವಿರುದ್ಧವೂ ಡಾಲರ್ ಮೌಲ್ಯ ಹೆಚ್ಚಾಗಿರುವುದು ಈ ಏರಿಕೆಗೆ ಕಾರಣವಾಗಿದೆ.

ಜಾಗತಿಕ ಮಟ್ಟದಲ್ಲಿ ಬಹುತೇಕ ಮಾರ್ಕೆಟ್ ಗಳು ದುರ್ಬಲವಾಗಿವೆ. ಗುರುವಾರದಂದು ಸೆನ್ಸೆಕ್ಸ್ 581.28 ಅಂಶಗಳಷ್ಟು ಕುಸಿತ ಕಂಡಿದ್ದರೆ, ನಿಫ್ಟಿ ಇನ್ನೂರಕ್ಕೂ ಹೆಚ್ಚು ಪಾಯಿಂಟ್ ಇಳಿದಿದೆ. ರುಪಾಯಿ ಮೌಲ್ಯ ಚೇತರಿಕೆ ಕಾಣುವಂತೆ ಮಾಡುವ ಉದ್ದೇಶಕ್ಕೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಕ್ರಮಗಳನ್ನು ತೆಗೆದುಕೊಳ್ಳಬಹುದು ಎಂದು ನಿರೀಕ್ಷಿಸಲಾಗುತ್ತಿದೆ.

 ಅಮೆರಿಕ ಡಾಲರ್ ವಿರುದ್ಧ 75ರ ಗಡಿ ದಾಟಿದ ಭಾರತದ ರುಪಾಯಿ ಮೌಲ್ಯ

ಷೇರು ಮಾರುಕಟ್ಟೆಯು ವಿಪರೀತ ಏರಿಳಿತ ಕಾಣುತ್ತಿದೆ. ಇನ್ನು ರುಪಾಯಿ ಮೌಲ್ಯವು ಕುಸಿದಲ್ಲಿ ಅದರ ಪರಿಣಾಮ ಮತ್ತೂ ಭೀಕರವಾಗುತ್ತದೆ. ಆದ್ದರಿಂದ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮಧ್ಯಪ್ರವೇಶಿಸಿ, ಅಗತ್ಯ ಕ್ರಮ ಕೈಗೊಳ್ಳಬಹುದು ಎಂಬುದು ಸದ್ಯದ ಮಟ್ಟಿಗಿನ ನಿರೀಕ್ಷೆಯಾಗಿದೆ.

English summary

Rupee Value Crossed 75 Mark Against US Dollar

Indian rupee value crossed 75 mark against US Dollar first time on Thursday.
Story first published: Thursday, March 19, 2020, 16:03 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X