ಇಮಾಮಿ ಲಿಮಿಟೆಡ್ ನ ನವರತ್ನ ಆಯಿಲ್- ಕೇಶತೈಲದ ಹೊಸ ಬ್ರ್ಯಾಂಡ್ ಅಂಬಾಸಡರ್ ಆಗಿ ಹಿಂದಿ ಚಿತ್ರ ನಟ ಸಲ್ಮಾನ್ ಖಾನ್ ಆಯ್ಕೆ ಆಗಿದ್ದಾರೆ. ಈ ಮೂಲಕ ದೇಶದ ಎಲ್ಲ ಹಂತದ ನಗರಗಳನ್ನು ತಲುಪುವುದಕ್ಕೆ ಸಾಧ್ಯವಾಗುತ್ತದೆ ಎಂದು ಕಂಪೆನಿ ಮೂಲಗಳು ತಿಳಿಸಿವೆ. ಈ ಬ್ರ್ಯಾಂಡ್ ನಿಂದ ರಾಹತ್ ರಾಜ ಅವರನ್ನು ಒಳಗೊಂಡಂತೆ ಹೊಸದಾಗಿ ಟೆಲಿವಿಷನ್ ಕಮರ್ಷಿಯಲ್ (TVC) ಬಿಡುಗಡೆ ಮಾಡಲಾಗಿದೆ.
ಇಮಾಮಿ ನಿರ್ದೇಶಕರಾದ ಹರ್ಷ ವಿ. ಅಗರ್ ವಾಲ್ ಮಾತನಾಡಿ, ಸಲ್ಮಾನ್ ಖಾನ್ ಅವರಿಗೆ ಜನರ ಮಧ್ಯೆ ದೊಡ್ಡ ಸಂಖ್ಯೆಯ ಅಭಿಮಾನಿಗಳು ಇದ್ದಾರೆ. ಇದರಿಂದ ನವರತ್ನ ಬ್ರ್ಯಾಂಡ್ ಇನ್ನೂ ಹೆಚ್ಚು ಜನರನ್ನು ತಲುಪಲು ಸಾಧ್ಯವಾಗುತ್ತದೆ ಎಂದು ಹೇಳಿದ್ದಾರೆ. ದಂಗಲ್ ಮತ್ತು ಚಿಚ್ಚೋರೆ ಖ್ಯಾತಿಯ ನಿತೇಶ್ ತಿವಾರಿ ಇದರ ನಿರ್ದೇಶನ ಮಾಡಿದ್ದು, ಮುದಾಸರ್ ಖಾನ್ ಕೊರಿಯೋಗ್ರಫಿ ಇದೆ.
ಇಮಾಮಿ ಕಂಪೆನಿಯಿಂದ ಬೋರೋಪ್ಲಸ್, ನವರತ್ನ, ಫೇರ್ ಅಂಡ್ ಹ್ಯಾಂಡ್ಸಮ್, ಝಂಡು ಬಾಮ್, ಮೆಂಥೋ ಪ್ಲಸ್ ಬಾಮ್, ಫಾಸ್ಟ್ ರಿಲೀಫ್ ಅಂಡ್ ಕೇಶ್ ಕಿಂಗ್ ಇತ್ಯಾದಿ ಉತ್ಪನ್ನಗಳು ಇವೆ. ಈ ಕಂಪೆನಿಯು 1974ರಲ್ಲಿ ಆರಂಭವಾಗಿದ್ದು, ಆಯುರ್ವೇದಿಕ್ ಮಿಶ್ರಣವನ್ನು ಒಳಗೊಂಡ 300ಕ್ಕೂ ಹೆಚ್ಚು ಉತ್ಪನ್ನಗಳಿವೆ. ಸದ್ಯಕ್ಕೆ 60ಕ್ಕೂ ಹೆಚ್ಚು ದೇಶಗಳಲ್ಲಿ ಕಂಪೆನಿ ಕಾರ್ಯ ನಿರ್ವಹಿಸುತ್ತಿದೆ.

ಕಂಪೆನಿಯ ಮಾಹಿತಿ ಪ್ರಕಾರ, ನವರತ್ನ ಆಯಿಲ್ 700 ಕೋಟಿ ರುಪಾಯಿಯ ಬ್ರ್ಯಾಂಡ್, ಭಾರತದಲ್ಲಿ 65 ಪರ್ಸೆಂಟ್ ಗೂ ಹೆಚ್ಚು ಮಾರ್ಕೆಟ್ ಷೇರು ಹೊಂದಿದೆ. ಇನ್ನು 3200 ವಿತರಕರ ಮೂಲಕ 45 ಲಕ್ಷ ಮಂದಿಯನ್ನು ಕಂಪೆನಿಯು ತಲುಪುತ್ತಿದೆ.


Click it and Unblock the Notifications