ಭಾರತದ ಷೇರು ಮಾರುಕಟ್ಟೆಯಲ್ಲಿ ಶುಕ್ರವಾರ (ನವೆಂಬರ್ 13, 2020) ಏರಿಕೆ- ಇಳಿಕೆ ಜತೆಗೆ ಹೊಯ್ದಾಡುತ್ತಾ ದಿನದ ಕೊನೆಗೆ ಏರಿಕೆಯೊಂದಿಗೆ ಮುಕ್ತಾಯ ಆಗಿದೆ. ಸಂವತ್ 2076 ಸಕಾರಾತ್ಮಕವಾಗಿ ಮುಗಿದಿದೆ. ನಿಫ್ಟಿ 29 ಪಾಯಿಂಟ್ ಅಥವಾ 0.23% ಏರಿಕೆ ಕಂಡು, 12,720 ಪಾಯಿಂಟ್ ನೊಂದಿಗೆ ವ್ಯವಹಾರ ಮುಗಿಸಿದೆ. ಇನ್ನು ಸೆನ್ಸೆಕ್ಸ್ 86 ಪಾಯಿಂಟ್ ಹೆಚ್ಚಳವಾಗಿ, 43,443 ಪಾಯಿಂಟ್ ನೊಂದಿಗೆ ವಹಿವಾಟು ಪೂರ್ಣಗೊಳಿಸಿದೆ.
ಇಂದಿನ ವಹಿವಾಟಿನಲ್ಲಿ ನಿಫ್ಟಿಯಲ್ಲಿ ಟಾಪ್ ಗೇಯ್ನರ್ ಆಗಿ ಹೊರ ಹೊಮ್ಮಿದ್ದು ಐಷರ್ ಮೋಟಾರ್ಸ್, ಕೋಲ್ ಇಂಡಿಯಾ, ಬಜಾಜ್ ಫೈನಾನ್ಸ್ ಸರ್ವೀಸಸ್, ಟಾಟಾ ಸ್ಟೀಲ್ ಮತ್ತು ಡಿವೀಸ್ ಲ್ಯಾಬ್ಸ್. ಇನ್ನು ನಷ್ಟ ಕಂಡಂಥವು ಟಾಟಾ ಮೋಟಾರ್ಸ್, ಲಾರ್ಸನ್, ಎಚ್ ಡಿಎಫ್ ಸಿ, ಎಚ್ ಡಿಎಫ್ ಸಿ ಲೈಫ್ ಹಾಗೂ ಯುಪಿಎಲ್.
ಫ್ಯೂಚರ್ ರೀಟೇಲ್ ಷೇರು ಅಲ್ಪ ಪ್ರಮಾಣದಲ್ಲಿ ಇಳಿಕೆ ಆಯಿತು. ಅಂದ ಹಾಗೆ ಸೆಪ್ಟೆಂಬರ್ ತ್ರೈಮಾಸಿಕ ಅಂತ್ಯಕ್ಕೆ 692 ಕೋಟಿ ರುಪಾಯಿ ನಷ್ಟ ದಾಖಲಿಸಿದೆ. ಒಂದು ವರ್ಷದ ಹಿಂದೆ ಇದೇ ಅವಧಿಯಲ್ಲಿ ಕಂಪೆನಿಯು 165 ಕೋಟಿ ರುಪಾಯಿ ಲಾಭ ಗಳಿಸಿತ್ತು. ಆದಾಯದಲ್ಲಿ 74 ಪರ್ಸೆಂಟ್ ಇಳಿಕೆಯಾಗಿ, 1424 ಕೋಟಿ ರುಪಾಯಿ ಮುಟ್ಟಿದೆ. ಕಳೆದ ವರ್ಷ ಈ ಅವಧಿಯಲ್ಲಿ 5449 ಕೋಟಿ ರುಪಾಯಿ ಆದಾಯ ಬಂದಿತ್ತು.

ಐಷರ್ ಮೋಟಾರ್ಸ್ ಎರಡನೇ ತ್ರೈಮಾಸಿಕದ ಫಲಿತಾಂಶ ಘೋಷಿಸಿದ ನಂತರ ಪ್ರಬಲವಾಗಿ ವ್ಯವಹಾರ ನಡೆಸಿದ್ದು, 52 ವಾರಗಳ ಗರಿಷ್ಠ ಮಟ್ಟವಾದ 2574 ರುಪಾಯಿಯನ್ನು ಎನ್ ಎಸ್ ಇಯಲ್ಲಿ ವ್ಯವಹಾರ ನಡೆಸಿತು. ಕಂಪೆನಿಯು ಸೆಪ್ಟೆಂಬರ್ ತ್ರೈಮಾಸಿಕದಲ್ಲಿ 40 ಪರ್ಸೆಂಟ್ ನಿವ್ವಳ ಲಾಭದಲ್ಲಿ ಇಳಿಕೆ ಆಗಿದ್ದು, 343.34 ಕೋಟಿ ರು. ಲಾಭ ಬಂದಿದೆ.
ಸೆಪ್ಟೆಂಬರ್ ತ್ರೈಮಾಸಿಕದ ಗಳಿಕೆ ನಂತರ ಇನ್ಫೋ ಎಡ್ಜ್ ಇಂಡಿಯಾ ಹೊಸ ದಾಖಲೆ ಬರೆದಿದೆ. ಈ ಮಧ್ಯೆ ಏಷ್ಯನ್ ಮಾರ್ಕೆಟ್ ಸೂಚ್ಯಂಕಗಳು ಇಳಿಕೆ ಕಂಡಿವೆ. ಜಪಾನ್ ನ ನಿಕೈ, ಹಾಂಕಾಂಗ್ ಹಾಗೂ ಆಸ್ಟ್ರೇಲಿಯಾ ಸೂಚ್ಯಂಕಗಳಿ ಇಳಿದಿವೆ.


Click it and Unblock the Notifications