ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ ನ 26 ನೇ ಆರ್‌ಬಿಐ ಗವರ್ನರ್ ಆಗಿ ಸಂಜಯ್ ಮಲ್ಹೋತ್ರಾ ಅವರು ಇಂದು ಅಧಿಕಾರ ಸ್ವೀಕಾರ ಮಾಡಿದ್ದಾರೆ. ಶಕ್ತಿಕಾಂತ ದಾಸ್ ಅವರ ಅಧಿಕಾರಾವಧಿ ಡಿಸೆಂಬರ್ 10 ರಂದು ಕೊನೆಗೊಂಡಿತು. ಮಹೋಲ್ತ್ರಾ ಅವರು ಬುಧವಾರ ಅಧಿಕಾರ ವಹಿಸಿಕೊಂಡರು ಮತ್ತು 3 ಕ್ಕೆ ಮಾಧ್ಯಮಗಳಿಗೆ ತಮ್ಮ ಮೊದಲ ಸಾರ್ವಜನಿಕ ಭಾಷಣ ಮಾಡಲಿದ್ದಾರೆ.
ಹೌದು, ಸಂಜಯ್ ಮಲ್ಹೋತ್ರಾ ಅವರು ಸೆಂಟ್ರಲ್ ಬ್ಯಾಂಕ್‌ನ 26 ನೇ ಗವರ್ನರ್ ಆಗಿ ಅಧಿಕಾರವನ್ನು ವಹಿಸಿಕೊಂಡಿದ್ದಾರೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಬುಧವಾರ ಪ್ರಕಟಿಸಿದೆ. ಹಾಲಿ ಮುಖ್ಯಸ್ಥ ಶಕ್ತಿಕಾಂತ ದಾಸ್ ಅವರ ಅಧಿಕಾರಾವಧಿಯು ಮಂಗಳವಾರ (ಡಿಸೆಂಬರ್ 10, 2024) ಕೊನೆಗೊಳ್ಳಲಿದೆ. ಹೀಗಾಗಿ ಮಲ್ಹೋತ್ರಾ ಅವರನ್ನು 26ನೇ ಆರ್‌ಬಿಐ ಗವರ್ನರ್ ಆಗಿ ಆಯ್ಕೆ ಮಾಡಲಾಗಿದೆ.ಇಂದಿನಿಂದ ಮೂರು ವರ್ಷ ಕಾಲ ಆರ್ಬಿಐನ ಚುಕ್ಕಾಣಿ ಸಂಜಯ್ ಮಲ್ಹೋತ್ರಾ ಅವರದ್ದಾಗಿದೆ. ಹೊಸ ಆರ್‌ಬಿಐ ಗವರ್ನರ್ ಆಗಮನದ ಬಳಿಕ ಬಡ್ಡಿದರಗಳ ಇಳಿಕೆ ಬಗ್ಗೆ ಚರ್ಚೆಗಳು ನಡೆಯತೊಡಗಿವೆ.

ಮಲ್ಹೋತ್ರಾ, 1990 ರ ಬ್ಯಾಚ್ ರಾಜಸ್ಥಾನ ಕೇಡರ್ IAS ಅಧಿಕಾರಿಯಾಗಿದ್ದು,ಅವರ ವೃತ್ತಿಜೀವನದ ಅವಧಿಯಲ್ಲಿ, ಅವರು ವಿದ್ಯುತ್, ಹಣಕಾಸು, ತೆರಿಗೆ, ಮಾಹಿತಿ ತಂತ್ರಜ್ಞಾನ ಮತ್ತು ಗಣಿಗಾರಿಕೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿಸೇವೆ ಸಲ್ಲಿಸಿದ್ದಾರೆ. ಕಾನ್ಪುರದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಯಿಂದ ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್‌ನಲ್ಲಿ ಪದವೀಧರರಾಗಿರುವ ಮಲ್ಹೋತ್ರಾ ಅವರು ಪ್ರಿನ್ಸ್‌ಟನ್ ವಿಶ್ವವಿದ್ಯಾಲಯದಿಂದ ಸಾರ್ವಜನಿಕ ನೀತಿಯಲ್ಲಿ ಸ್ನಾತಕೋತ್ತರ ಪದವಿಯನ್ನು ಸಹ ಹೊಂದಿದ್ದಾರೆ.
ಮಲ್ಹೋತ್ರಾ ಈ ಹಿಂದೆ ರೂರಲ್ ಎಲೆಕ್ಟ್ರಿಫಿಕೇಶನ್ ಕಾರ್ಪೊರೇಷನ್ ಲಿಮಿಟೆಡ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ.ಅವರು ಹಣಕಾಸು ಸಚಿವಾಲಯದಲ್ಲಿ ಹಣಕಾಸು ಸೇವೆಗಳ ಇಲಾಖೆಯ ಕಾರ್ಯದರ್ಶಿಯಾಗಿದ್ದರು.


Click it and Unblock the Notifications