For Quick Alerts
ALLOW NOTIFICATIONS  
For Daily Alerts

ಸೌದಿಯ ಪಬ್ಲಿಕ್ ಇನ್ವೆಸ್ಟ್ ಮೆಂಟ್ ಫಂಡ್ ನಿಂದ ಜಿಯೋದಲ್ಲಿ 11,367 ಕೋಟಿ ಹೂಡಿಕೆ

|

ಸೌದಿ ಅರೇಬಿಯಾದ ಸವರನ್ ವೆಲ್ತ್ ಫಂಡ್ ಆದ ಪಬ್ಲಿಕ್ ಇನ್ವೆಸ್ಟ್ ಮೆಂಟ್ ಫಂಡ್ (ಪಿಐಎಫ್)ನಿಂದ ರಿಲಯನ್ಸ್ ಇಂಡಸ್ಟ್ರೀಸ್ ನ ಜಿಯೋ ಪ್ಲಾಟ್ ಫಾರ್ಮ್ ನಲ್ಲಿ 2.32 ಪರ್ಸೆಂಟ್ ಪಾಲು ಅಥವಾ 11,367 ಕೋಟಿ ರುಪಾಯಿ ಹೂಡಿಕೆ ಮಾಡಲಾಗುವುದು. ಮುಕೇಶ್ ಅಂಬಾನಿ ಒಡೆತನದ ಜಿಯೋ ಪ್ಲಾಟ್ ಫಾರ್ಮ್ ನಲ್ಲಿ ಹೂಡಿಕೆಗೆ ಬರುತ್ತಿರುವ ಹತ್ತನೇ ಚೆಕ್ ಇದು.

RIL: 5.52 ಲಕ್ಷ ಹಕ್ಕಿನ ಷೇರುಗಳನ್ನು ಪಡೆದುಕೊಂಡ ಮುಕೇಶ್ ಅಂಬಾನಿRIL: 5.52 ಲಕ್ಷ ಹಕ್ಕಿನ ಷೇರುಗಳನ್ನು ಪಡೆದುಕೊಂಡ ಮುಕೇಶ್ ಅಂಬಾನಿ

ಮಾರ್ಕ್ ಝುಕರ್ ಬರ್ಗ್ ಫೇಸ್ ಬುಕ್ ಸೇರಿಕೊಂಡಂತೆ ಜಿಯೋ ಪ್ಲಾಟ್ ಫಾರ್ಮ್ ಇತರ ಕಂಪೆನಿಗಳು ಹೂಡಿಕೆ ಮಾಡಿದ ಮೊತ್ತ 1,15,693 ಕೋಟಿ ರುಪಾಯಿ ತಲುಪಿದಂತೆ ಆಯಿತು. ಅಂದ ಹಾಗೆ ಪಿಐಎಫ್ ಈವರೆಗೆ ಭಾರತದ ಆರ್ಥಿಕತೆಯಲ್ಲಿ ಮಾಡುತ್ತಿರುವ ಅತಿ ದೊಡ್ಡ ಹೂಡಿಕೆ ಇದಾಗಿದೆ ಎಂದು ರಿಲಯನ್ಸ್ ಹೇಳಿದೆ.

ಸೌದಿಯ PIFನಿಂದ Jioದಲ್ಲಿ 11,367 ಕೋಟಿ ಹೂಡಿಕೆ

ಈ ವರೆಗೆ ಅತಿ ದೊಡ್ಡ ಪಾಲು ಖರೀದಿ ಮಾಡಿರುವುದು ಫೇಸ್ ಬುಕ್. 9.99 ಪರ್ಸೆಂಟ್ ಪಾಲನ್ನು 43,574 ಕೋಟಿ ರುಪಾಯಿ ನೀಡಿ ಖರೀದಿಸಿದೆ. ಸಿಲ್ವರ್ ಲೇಕ್, ವಿಸ್ಟಾ ಈಕ್ವಿಟಿ ಪಾರ್ಟನರ್ಸ್, ಜನರಲ್ ಅಟ್ಲಾಂಟಿಕ್, ಕೆಕೆಆರ್, ಮುಬಾದಲ, ಎಡಿಐಎ, ಟಿಪಿಜಿ ಮತ್ತು ಎಲ್ ಕಾಟೆರ್ಟನ್ ನಿಂದ ಈ ವರೆಗೆ ಜಿಯೋ ಪ್ಲಾಟ್ ಪಾರ್ಮ್ ನಲ್ಲಿ ಹೂಡಿಕೆ ಮಾಡಲಾಗಿದೆ.

English summary

Saudi Arabia's Public Investment Fund To Invest 11,367 Crore In Jio Platform

Saudi Arabia's public wealth fund to invest 11,367 crore in Jio platform.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X