ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ ಮಂಗಳವಾರ 1000ಕ್ಕೂ ಹೆಚ್ಚು ಹಬ್ಬದ ಆಫರ್ ಗಳನ್ನು ಬಹಿರಂಗ ಮಾಡಲಾಯಿತು. ಎಸ್ ಬಿಐ ಕಾರ್ಡ್ ದಾರರಿಗೆ ಹಲವಾರು ಬ್ರ್ಯಾಂಡ್ ಗಳಿಂದ ರಿಯಾಯಿತಿ ಜತೆಗೆ ಕ್ಯಾಶ್ ಬ್ಯಾಕ್ ಕೂಡ ದೊರೆಯಲಿದೆ. ಫ್ಯಾಷನ್ ನಿಂದ ಲೈಫ್ ಸ್ಟೈಲ್ ಹಾಗೂ ಎಲೆಕ್ಟ್ರಾನಿಕ್ಸ್ ತನಕ ಈ ಆಫರ್ ಗಳು ಸಿಗುತ್ತವೆ.
ಈ ಆಫರ್ ಗಳು ನವೆಂಬರ್ 1ನೇ ತಾರೀಕಿನ ತನಕ ಸಿಗುತ್ತದೆ. ಅಮೆಜಾನ್, ಬ್ರ್ಯಾಂಡ್ ಫ್ಯಾಕ್ಟರಿ, ಕ್ರೋಮಾ, ಕ್ಯಾರಟ್ ಲೇನ್, ಫ್ಯಾಬ್ ಇಂಡಿಯಾ, ಫಸ್ಟ್ ಕ್ರೈ, ಗ್ರೋಫರ್ಸ್, ಹೋಮ್ ಸೆಂಟರ್, ಲಾಯ್ಡ್ಸ್ ಇನ್ನಷ್ಟು ಹೈಪರ್ ಮಾರ್ಕೆಟ್, ಸೂಪರ್ ಮಾರ್ಕೆಟ್, ಪ್ಯಾಂಟಲೂನ್ಸ್, ಸ್ಯಾಮ್ಸಂಗ್ ಮೊಬೈಲ್ ಹಾಗೂ ಟಾಟಾ ಕ್ಲಿಕ್ ನಲ್ಲಿ ಅಫರ್ ಗಳು ದೊರೆಯುತ್ತವೆ.
ಇನ್ನು ಫ್ಲಿಪ್ ಕಾರ್ಟ್ ನ 'ದ ಬಿಗ್ ಬಿಲಿಯನ್ ಡೇಸ್'ಗೆ ಎಸ್ ಬಿಐ ಕಾರ್ಡ್ ಎಕ್ಸ್ ಕ್ಲೂಸಿವ್ ಕ್ರೆಡಿಟ್ ಕಾರ್ಡ್ ಪಾರ್ಟನರ್ ಆಗಿದೆ. ಈ ಆಫರ್ ಅವಧಿಯಲ್ಲಿ ಫ್ಲಿಪ್ ಕಾರ್ಡ್ ನಿಂದ ತಕ್ಷಣ 10% ರಿಯಾಯಿತಿ ದೊರೆಯುತ್ತದೆ. ಈ ವರ್ಷ ಎರಡು ಸಾವಿರ ನಗರಗಳಲ್ಲಿ ಆನ್ ಲೈನ್ ಹಾಗೂ ಸ್ಟೋರ್ ಗಳು, ಸ್ಥಳೀಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಆಫರ್ ಗಳನ್ನು ನೀಡುತ್ತಿದ್ದೇವೆ ಎಂದು ಎಸ್ ಬಿಐ ಕಾರ್ಡ್ ಎಂ.ಡಿ. ಹಾಗೂ ಸಿಇಒ ಅಶ್ವಿನಿ ಕುಮಾರ್ ತಿವಾರಿ ತಿಳಿಸಿದ್ದಾರೆ.

1.3 ಲಕ್ಷಕ್ಕೂ ಹೆಚ್ಚು ಸ್ಟೋರ್ ಗಳಲ್ಲಿ ಖರೀದಿ ಮೇಲೆ ಇಎಂಐ ದೊರೆಯುತ್ತದೆ. ಬಹುತೇಕ ಉತ್ಪನ್ನಗಳಿಗೆ ಯಾವುದೇ ಹೆಚ್ಚುವರಿ ಶುಲ್ಕ ಇಲ್ಲದೆ ಇಎಂಐ ಸಿಗುತ್ತದೆ. ಅದರಲ್ಲೂ ಮೊಬೈಲ್ ಫೋನ್ ಹಾಗೂ ಎಲೆಕ್ಟ್ರಾನಿಕ್ಸ್ ವಸ್ತುಗಳ ಹೆಸರಾಂತ ಬ್ರ್ಯಾಂಡ್ ಗಳ ಮೇಲೆ ಆಫರ್ ಹಾಗೂ ರಿಯಾಯಿತಿಗಳಿವೆ ಎಂದು ತಿಳಿಸಿದ್ದಾರೆ.


Click it and Unblock the Notifications