For Quick Alerts
ALLOW NOTIFICATIONS  
For Daily Alerts

ಎಸ್‌ಬಿಐ ದಸರಾ ವಿಶೇಷ: ಕಾರು, ಚಿನ್ನದ ಸಾಲದ ಮೇಲೆ ವಿಶೇಷ ಕೊಡುಗೆ

|

ದೇಶದ ಅತಿದೊಡ್ಡ ಸರ್ಕಾರಿ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) 2021ರ ದಸರಾ ವಿಶೇಷವಾಗಿ ಕಾರು, ವೈಯಕ್ತಿಕ ಸಾಲ ಮತ್ತು ಚಿನ್ನದ ಸಾಲದ ಮೇಲೆ ವಿಶೇಷ ಕೊಡುಗೆಗಳನ್ನು ನೀಡಲು ಮುಂದಾಗಿದೆ.

 

"ಈ ವಿಜಯದ ದಿನವನ್ನು ಕಾರು ಸಾಲ, ಚಿನ್ನದ ಸಾಲ ಮತ್ತು ವೈಯಕ್ತಿಕ ಸಾಲದ ಮೇಲೆ ವಿಶೇಷ ಕೊಡುಗೆಗಳೊಂದಿಗೆ ಆಚರಿಸೋಣ. ವಿಜಯದ ಈ ದಿನದಂದು, ಎಸ್‌ಬಿಐ ವಿಶೇಷ ಕೊಡುಗೆಗಳೊಂದಿಗೆ ಅವಕಾಶ ನೀಡಿದೆ "ಎಂದು ಎಸ್‌ಬಿಐ ಟ್ವೀಟ್ ಮಾಡಿದೆ. ಎಸ್‌ಬಿಐ ಗ್ರಾಹಕರು ಕಾರು, ವೈಯಕ್ತಿಕ ಸಾಲ ಮತ್ತು ಚಿನ್ನದ ಸಾಲದ ಮೇಲೆ ಶೂನ್ಯ ಪ್ರಕ್ರಿಯೆ ಶುಲ್ಕವನ್ನು ಪಡೆಯಬಹುದು.

ಎಸ್‌ಬಿಐ ದಸರಾ ವಿಶೇಷ: ಕಾರು, ಚಿನ್ನದ ಸಾಲದ ಮೇಲೆ ವಿಶೇಷ ಕೊಡುಗೆ

ಎಸ್‌ಬಿಐ ಸಾಲದ ಬಡ್ಡಿ ದರ

* ಎಸ್‌ಬಿಐ ಗ್ರಾಹಕರು ವರ್ಷಕ್ಕೆ ಶೇಕಡಾ 7.25 ರಿಂದ ಕಾರು ಸಾಲವನ್ನು ಪಡೆಯಬಹುದು.
* ಚಿನ್ನದ ಸಾಲದ ಮೇಲಿನ ಬಡ್ಡಿದರವು ವರ್ಷಕ್ಕೆ ಶೇಕಡಾ 7.50ರಷ್ಟಿದೆ.
* ಅದೇ ನೀವು ವೈಯಕ್ತಿಕ ಸಾಲವನ್ನು ಶೇಕಡಾ 9.60 ರಿಂದ ಬಡ್ಡಿ ದರದಲ್ಲಿ ಪಡೆಯಬಹುದು.
* ಕಾರು ಸಾಲ, ವೈಯಕ್ತಿಕ ಸಾಲ ಮತ್ತು ಚಿನ್ನದ ಸಾಲದ ಮೇಲೆ ಶೂನ್ಯ ಪ್ರಕ್ರಿಯೆ ಶುಲ್ಕವಿರುತ್ತದೆ.
* ಇದರ ನಡುವೆ ಎಸ್‌ಬಿಐ ತನ್ನ ಗ್ರಾಹಕರಿಗೆ 10 ರೀತಿಯ ವಂಚನೆಗಳ ವಿರುದ್ಧ ಎಚ್ಚರಿಕೆ ನೀಡಿದೆ. ಅವುಗಳೆಂದರೆ ಯುಪಿಐ ವಂಚನೆ, ಕೆವೈಸಿ ವಂಚನೆ, ಇಮೇಲ್ ವಂಚನೆ, ಗುರುತಿನ ಕಳ್ಳತನ, ಮೊಬೈಲ್ ಬ್ಯಾಂಕಿಂಗ್ ವಂಚನೆ, ಸಾಮಾಜಿಕ ಮಾಧ್ಯಮ ವಂಚನೆ, ಡಿಜಿಟಲ್ ಪಾವತಿ ವಂಚನೆ, ಒಟಿಪಿ ವಂಚನೆ, ಲಾಟರಿ ವಂಚನೆ ಮತ್ತು ದೂರಸ್ಥ ಪ್ರವೇಶ ವಂಚನೆ.

ಹೀಗಾಗಿ ದಸರಾ ಹಬ್ಬದ ಶುಭಾಶಯಗಳ ಜೊತೆಗೆ ಗ್ರಾಹಕರು ಜಾಗರೂಕರಾಗಿರಿ ಮತ್ತು ಸುರಕ್ಷಿತವಾಗಿರಿ ಎಂದು ಎಸ್‌ಬಿಐ ಟ್ವೀಟ್ ಮಾಡಿದೆ.

ನವರಾತ್ರಿಯ ಮುಂಚೆ, ಎಸ್‌ಬಿಐ ಕ್ರೆಡಿಟ್ ಸ್ಕೋರ್ ಸಂಬಂಧಿತ ಗೃಹ ಸಾಲಗಳನ್ನು ಶೇಕಡಾ 6.70 ಕ್ಕೆ ಬಿಡುಗಡೆ ಮಾಡಿತ್ತು. ಹಬ್ಬದ ಕೊಡುಗೆಗೆ ಮುಂಚಿತವಾಗಿ, ಸಾಲಗಾರನು 75 ಲಕ್ಷಕ್ಕಿಂತ ಹೆಚ್ಚಿನ ಸಾಲವನ್ನು ಪಡೆದರೆ ಶೇ .7.15 ರ ಬಡ್ಡಿದರವನ್ನು ಪಾವತಿಸಬೇಕಾಗಿತ್ತು. ಇದಲ್ಲದೇ, ಎಸ್‌ಬಿಐ ವೇತನದಾರ ಮತ್ತು ವೇತನರಹಿತ ಸಾಲಗಾರನ ನಡುವಿನ ವ್ಯತ್ಯಾಸವನ್ನು ತೆಗೆದುಹಾಕಿದೆ.

English summary

SBI Dussehra 2021 Loan Offers: Check Interest Rate, Processing Fees and other details in kannada

India's Biggest Bank SBI Is Offering special offers on car loan, personal loan, and gold loan on the auspicious occasion of Dussehra 2021.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X