ಹಿರಿಯ ನಾಗರಿಕರಿಗೆ ವಿವಿಧ ಬ್ಯಾಂಕ್‌ಗಳಿಗೆ ಫಿಕ್ಸೆಡ್ ಡೆಪಾಸಿಟ್ ಮೇಲೆ ಬಡ್ಡಿ ದರವನ್ನು ನೀಡಲಾಗುತ್ತದೆ. ದೇಶದ ಅತಿದೊಡ್ಡ ಖಾಸಗಿ ವಲಯದ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಫಿಕ್ಸೆಡ್ ಡೆಪಾಸಿಟ್ ಮೇಲೆ ಹಿರಿಯ ನಾಗರಿಕರು ಸ್ಥಿರ ಠೇವಣಿಗಳ ಮೇಲೆ ಹೆಚ್ಚಿನ ಬಡ್ಡಿದರವನ್ನು ನೀಡಲಾಗಿದೆ.

ಹಿರಿಯ ನಾಗರಿಕರಿಗೆ ಸ್ಥಿರ ಠೇವಣಿಗಳು (FD) ಹೂಡಿಕೆಯ ಒಂದು ಸುರಕ್ಷಿತ ಹೂಡಿಕೆಯಾಗಿದೆ. ಸೇಂಟ್ ಬ್ಯಾಂಕ್ ಆಫ್ ಇಂಡಿಯಾ ಹಿರಿಯ ನಾಗರಿಕರಿಗೆ ಇದು ಒಂದು ಉತ್ತಮ ಆಯ್ಕೆಯಾಗಿದೆ.ಸಾಮಾನ್ಯವಾಗಿ ಬ್ಯಾಂಕುಗಳು 60 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ವ್ಯಕ್ತಿಗಳಿಗೆ ಹೆಚ್ಚಿನ ಬಡ್ಡಿದರವನ್ನು ನೀಡಲಾಗಿದೆ.
ಹಿರಿಯ ನಾಗರಿಕರಿಗೆ ಸ್ಥಿರ ಠೇವಣಿಗಳು ಮುಕ್ತಯದ ವೇಳೆಗೆ ಹೆಚ್ಚಿನ ಆದಾಯವನ್ನು ನೀಡುತ್ತದೆ.ಇದಲ್ಲದೇ ಬಡ್ಡಿ ಪಾವತಿಗಳನ್ನು ತಿಂಗಳು, ಮೂರು ತಿಂಗಳು, ಅರ್ಧ ವರ್ಷ, ವರ್ಷದವರೆಗೂ ಅವಕಾಶವನ್ನು ಸಹ ನೀಡಲಾಗಿದೆ.
ದೇಶದ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI), ಹಿರಿಯ ನಾಗರಿಕರಿಗೆ ಆರ್ಥಿಕವಾಗಿ ಹೆಚ್ಚಿನ ಅನುಕೂಲವನ್ನು ನೀಡಲು ಸ್ಥಿರ ಠೇವಣಿ ಬಡ್ಡಿದರಗಳನ್ನು ನೀಡಲಾಗುತ್ತದೆ. ಹೀಗಾಗಿ,ನಿವೃತ್ತಿಯ ನಂತರ ಸ್ಥಿರ ಮತ್ತು ಸುರಕ್ಷಿತ ಆದಾಯವನ್ನು ಬಯಸುವವರಿಗೆ ಇದು ಒಂದು ಜನಪ್ರಿಯ ಆಯ್ಕೆಯಾಗಿದೆ.
ಹಿರಿಯ ನಾಗರಿಕರು 1 ವರ್ಷ, 3 ವರ್ಷ ಮತ್ತು 5 ವರ್ಷಗಳ ಅವಧಿಗೆ ಎಸ್‌ಬಿಐ ಎಫ್‌ಡಿಗಳಲ್ಲಿ 5.5 ಲಕ್ಷ ಮತ್ತು 7.5 ಲಕ್ಷ ರೂಪಾಯಿಗಳನ್ನು ಹೂಡಿಕೆ ಮಾಡುವ ಮೂಲಕ ಎಷ್ಟು ಗಳಿಸಬಹುದು ಎಂಬ ಹೆಚ್ಚಿನ ಮಾಹಿತಿಯನ್ನು ಈ ಕೆಳಗಿನಂತೆ ವಿವರಿಸಲಾಗಿದೆ.
ಹಿರಿಯ ನಾಗರಿಕರಿಗೆ ಎಫ್‌ಡಿ ಪ್ರಯೋಜನಗಳು..?
ಸ್ಥಿರ ಠೇವಣಿಗಳು (FD) ಹಿರಿಯ ನಾಗರಿಕರಿಗೆ ಹೆಚ್ಚಿನ ಬಡ್ಡಿದರಗಳು ಹೊಂದಿಕೊಳ್ಳುವ ಪಾವತಿ ಆಯ್ಕೆಗಳು ಮತ್ತು ಸುರಕ್ಷಿತ ಆದಾಯವನ್ನು ನೀಡುತ್ತದೆ.
ಎಸ್‌ಬಿಐ 1 ವರ್ಷದ ಎಫ್‌ಡಿ ದರದ ಬಡ್ಡಿ
ಹಿರಿಯ ನಾಗರಿಕರಿಗೆ ಒಂದು ವರ್ಷದ ಎಫ್‌ಡಿ ದರದ ಮೇಲೆ ಶೇಕಡಾ 6.75ರಷ್ಟು ಬಡ್ಡಿ ಸಿಗುತ್ತದೆ.
ಎಸ್‌ಬಿಐ 3 ವರ್ಷಗಳ ಎಫ್‌ಡಿ ದರ
ಹಿರಿಯ ನಾಗರಿಕರಿಗೆ ಎಸ್‌ಬಿಐನ 3 ವರ್ಷಗಳ ಸ್ಥಿರ ಠೇವಣಿಯ ಬಡ್ಡಿದರವು ಶೇಕಡಾ 6.80ರಷ್ಟು ಇದೆ.
ಎಸ್‌ಬಿಐ 5 ವರ್ಷಗಳ ಎಫ್‌ಡಿ ದರ
ಹಿರಿಯ ನಾಗರಿಕರಿಗೆ ಎಸ್‌ಬಿಐನ 5 ವರ್ಷಗಳ ಸ್ಥಿರ ಠೇವಣಿಯ ಬಡ್ಡಿದರವು ಶೇಕಡಾ 7.05ರಷ್ಟು ಬಡ್ಡಿದರವನ್ನು ನೀಡಲಾಗಿದೆ.
ಎಸ್‌ಬಿಐ 1 ವರ್ಷದ ಎಫ್ ಡಿ : 5.5 ಲಕ್ಷ ರೂ.ಗಳಿಗೆ ಮೆಚ್ಯೂರಿಟಿ ಮೊತ್ತ
ಎಸ್‌ಬಿಐನ ಒಂದು ವರ್ಷದ ಎಫ್‌ಡಿಯಲ್ಲಿ 5.5 ಲಕ್ಷ ರೂಪಾಯಿಗಳನ್ನು ಹೂಡಿಕೆ ಮಾಡಿದರೆ, ಹಿರಿಯ ನಾಗರಿಕರು ಅಂದಾಜು 5,88,075.34 ರೂಪಾಯಿಗಳ ಮೆಚ್ಯೂರಿಟಿ ಮೊತ್ತವನ್ನು ಪಡೆಯುತ್ತಾರೆ. 38,075.34 ರೂಪಾಯಿಗಳ ಬಡ್ಡಿಯನ್ನು ಪಡೆಯುವ ಸಾಧ್ಯತೆ ಇರುತ್ತದೆ.
ಎಸ್‌ಬಿಐ 3 ವರ್ಷಗಳ ಎಫ್‌ಡಿ: 5.5 ಲಕ್ಷ ರೂ.ಗಳಿಗೆ ಮೆಚ್ಯೂರಿಟಿ ಮೊತ್ತ
ಎಸ್‌ಬಿಐನ 3 ವರ್ಷಗಳ ಎಫ್‌ಡಿಯಲ್ಲಿ ಬಡ್ಡಿದರ 5.5 ಲಕ್ಷ ರೂಪಾಯಿಗಳನ್ನು ಹೂಡಿಕೆ ಮಾಡಿದರೆ, ಹಿರಿಯ ನಾಗರಿಕರು ಅಂದಾಜು 6,73,308.54 ರೂಪಾಯಿಗಳ ಮೆಚ್ಯೂರಿಟಿ ಮೊತ್ತವನ್ನು ಪಡೆಯುತ್ತಾರೆ. 1,23,308.54 ರೂಪಾಯಿಗಳ ಬಡ್ಡಿಯನ್ನು ಗಳಿಸಲಾಗುತ್ತದೆ.
ಎಸ್‌ಬಿಐ 5 ವರ್ಷಗಳ ಎಫ್‌ಡಿ: 5.5 ಲಕ್ಷ ರೂ.ಗಳಿಗೆ ಮೆಚ್ಯೂರಿಟಿ
ಎಸ್‌ಬಿಐನ 5 ವರ್ಷಗಳ ಎಫ್‌ಡಿಯಲ್ಲಿ 5.5 ಲಕ್ಷ ರೂಪಾಯಿಗಳನ್ನು ಹೂಡಿಕೆ ಮಾಡಿದರೆ, ಹಿರಿಯ ನಾಗರಿಕರು ಅಂದಾಜು 7,80,042.10 ರೂಪಾಯಿಗಳ ಮೆಚ್ಯೂರಿಟಿ ಮೊತ್ತವನ್ನು ಪಡೆಯುತ್ತಾರೆ ಮತ್ತು 2,30,042.10 ರೂಪಾಯಿಗಳ ಬಡ್ಡಿಯನ್ನು ಗಳಿಸುತ್ತಾರೆ.
ಎಸ್‌ಬಿಐ 5 ವರ್ಷಗಳ ಎಫ್‌ಡಿ: 7.5 ಲಕ್ಷ ರೂ.ಗಳಿಗೆ ಮೆಚ್ಯೂರಿಟಿ
ಎಸ್‌ಬಿಐನ 5 ವರ್ಷಗಳ ಎಫ್‌ಡಿಯಲ್ಲಿ 7.5 ಲಕ್ಷ ರೂಪಾಯಿಗಳನ್ನು ಹೂಡಿಕೆ ಮಾಡಿದರೆ, ಹಿರಿಯ ನಾಗರಿಕರು ಅಂದಾಜು 10,63,693.78 ರೂಪಾಯಿಗಳ ಮೆಚ್ಯೂರಿಟಿ ಮೊತ್ತವನ್ನು ಪಡೆಯುತ್ತಾರೆ ಮತ್ತು 3,13,693.78 ರೂಪಾಯಿಗಳ ಬಡ್ಡಿಯನ್ನು ಗಳಿಸುತ್ತಾರೆ.
ಒಟ್ಟಾರೆಯಾಗಿ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹಿರಿಯ ನಾಗರಿಕರಿಗೆ ಆಕರ್ಷಕ ಬಡ್ಡಿದರಗಳನ್ನು ನೀಡುವ ಮೂಲಕ, ಅವರ ಉಳಿತಾಯವನ್ನು ಸುರಕ್ಷಿತವಾಗಿ ಹೂಡಿಕೆ ಮಾಡಲು ಮತ್ತು ಉತ್ತಮ ಆದಾಯವನ್ನು ಗಳಿಸಲು ಹೆಚ್ಚಿನ ಅನುಕೂಲವಾಗುತ್ತದೆ.


Click it and Unblock the Notifications