ದೇಶದ ಬಹುದೊಡ್ಡ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಎಸ್‌ಬಿಐ ಎಟಿಎಂ ಮೂಲಕ ಹಣವನ್ನು ವಿತ್‌ಡ್ರಾ ಮಾಡುವ ನಿಯಮದಲ್ಲಿ ಬದಲಾವಣೆ ತರಲು ಮುಂದಾಗಿದ್ದು, ಜನವರಿ 1, 2020ರಿಂದ ಹೊಸ ನಿಯಮಗಳು ಅನ್ವಯವಾಗಲಿದೆ.
ತನ್ನ ಗ್ರಾಹಕರು ಅನಧಿಕೃತ ವಹಿವಾಟುಗಳಿಂದ ಮೋಸ ಹೋಗುವುದನ್ನು ತಪ್ಪಿಸಲು ಎಸ್‌ಬಿಐ ಮುಂದಾಗಿದ್ದು ಎಟಿಎಂಗಳಲ್ಲಿ OTP(ಒನ್ ಟೈಮ್ ಪಾಸ್‌ವರ್ಡ್) ಮೂಲಕವೇ ಹಣವನ್ನು ವಿತ್‌ಡ್ರಾ ಮಾಡುವ ಅಥವಾ ಹಣವನ್ನು ಹಿಂಪಡೆಯುವ ವ್ಯವಸ್ಥೆಯನ್ನು ಪರಿಚಯಿಸಲಿದೆ.
ಒಟಿಪಿ ಆಧಾರಿತ ಕ್ಯಾಶ್ ವಿತ್‌ಡ್ರಾ ವ್ಯವಸ್ಥೆಯು ಎಲ್ಲಾ ಎಸ್‌ಬಿಐ ಎಟಿಎಂಗಳಲ್ಲಿ ಜನವರಿ 1, 2020ರಿಂದ ಜಾರಿಗೆ ಬರಲಿದ್ದು, ರಾತ್ರಿ 8ರಿಂದ ಬೆಳಿಗ್ಗೆ 8 ಗಂಟೆವರೆಗೆ ಈ ನಿಯಮ ಅನ್ವಯವಾಗಲಿದೆ ಎಂದು ಎಸ್‌ಬಿಐ ಟ್ವೀಟ್ ಮಾಡಿದೆ.

''ಎಟಿಎಂಗಳಲ್ಲಿ ಅನಧಿಕೃತ ವಹಿವಾಟಿನಿಂದ ನಿಮ್ಮನ್ನು ರಕ್ಷಿಸಲು ಒಟಿಪಿ ಆಧಾರಿತ ನಗದು ಹಿಂತೆಗೆದುಕೊಳ್ಳುವ ವ್ಯವಸ್ಥೆಯನ್ನು ಪರಿಚಯಿಸಲಾಗುತ್ತಿದೆ. ಈ ಹೊಸ ಸುರಕ್ಷತಾ ವ್ಯವಸ್ಥೆಯು 2020ರ ಜನವರಿ 1ರಿಂದ ಎಲ್ಲಾ ಎಸ್‌ಬಿಐ ಎಟಿಎಂಗಳಲ್ಲಿ ಅನ್ವಯಿಸಲಿದೆ'' ಎಂದು ಎಸ್‌ಬಿಐ ಟ್ವೀಟ್ ಮಾಡಿದೆ. ಎಸ್‌ಬಿಐನ ಒಟಿಪಿ ಆಧಾರಿತ ಕ್ಯಾಶ್ ವಿತ್‌ಡ್ರಾ ಸೌಲಭ್ಯವು 10,000 ರುಪಾಯಿಗಿಂತ ಹೆಚ್ಚಿನ ವಹಿವಾಟುಗಳಿಗೆ ಅನ್ವಯಿಸುತ್ತದೆ.

ಎಸ್‌ಬಿಐ ATM ವಿತ್‌ಡ್ರಾ ನಿಯಮಗಳು
* ನಿಮ್ಮ ನೊಂದಾಯಿತ ಮೊಬೈಲ್ ನಂಬರ್‌ಗೆ OTP(ಒನ್ ಟೈಮ್ ಪಾಸ್‌ವರ್ಡ್) ಬರಲಿದ್ದು ಒಂದು ಬಾರಿ ವಹಿವಾಟು ನಡೆಸಲು ಮಾತ್ರ ಬಳಕೆಯಾಗುತ್ತದೆ.
* ಈಗಿರುವ ಕ್ಯಾಶ್ ವಿತ್‌ಡ್ರಾ ಮಿತಿಯಲ್ಲಿ ಯಾವುದೇ ಬದಲಾವಣೆ ಇಲ್ಲ
* ಎಸ್‌ಬಿಐ ಒಟಿಪಿ ಆಧಾರಿತ ಕ್ಯಾಶ್ ವಿತ್‌ಡ್ರಾ ನಿಯಮವು ಬೇರೆ ಬ್ಯಾಂಕಿನ ಎಟಿಎಂಗಳಲ್ಲಿ ನೀವು ಹಣವನ್ನು ಹಿಂತೆಗೆದುಕೊಳ್ಳುವಾದ ಅನ್ವಯಿಸುವುದಿಲ್ಲ.
* ಈ ಹೊಸ ವ್ಯವಸ್ಥೆಯಡಿಯಲ್ಲಿ ಒಮ್ಮೆ ಗ್ರಾಹಕರು ಎಟಿಎಂನಲ್ಲಿ ಹಿಂತೆಗೆದುಕೊಳ್ಳುವ ಹಣದ ಪ್ರಮಾಣವನ್ನು ನೊಂದಾಯಿಸುತ್ತಿದ್ದಂತೆ ಒಟಿಪಿ ಎಂಟ್ರಿ ಮಾಡಲು ಕೇಳುತ್ತದೆ
More From GoodReturns

ಮಿಂತ್ರಾ ಫ್ಯಾಶನ್ ಕಾರ್ನಿವಲ್: ಇಂದೇ ಕೊನೆಯ ಅವಕಾಶ, ತಪ್ಪಿಸಿಕೊಳ್ಳಬೇಡಿ!

NSE ಆಯಿಲ್ ಫ್ಯೂಚರ್ಸ್ ಆರಂಭ: ಹೂಡಿಕೆದಾರರಿಗೆ ಸಿಗಲಿದೆ ಭಾರಿ ಲಾಭ?

ಸಗಟು ಬೆಲೆ ಸೂಚ್ಯಂಕ: ನಿಮ್ಮ ಜೇಬಿಗೆ ಕಾದಿದೆಯಾ ಶಾಕ್?

ಚಿನ್ನದ ಬೆಲೆ ಏರಿಕೆ: ಅಕ್ಷಯ ತೃತೀಯಕ್ಕೆ ಹೂಡಿಕೆ ಮಾಡುವುದು ಹೇಗೆ?

ನಿಫ್ಟಿ ಏರಿಕೆ: ಈಗಲೇ ಹೂಡಿಕೆ ಮಾಡಬೇಕಾ ಅಥವಾ ಕಾಯಬೇಕಾ?

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಭಾರತೀಯ ಷೇರು ಮಾರುಕಟ್ಟೆ: ಇಂದಿನ ವಹಿವಾಟಿನಲ್ಲಿ ಅಡಗಿದೆ ಅಚ್ಚರಿಯ ತಿರುವು!

ಅಂಬೇಡ್ಕರ್ ಜಯಂತಿ ರಜೆ: ನಿಮ್ಮ ಎಸ್ಐಪಿ ಹಣಕ್ಕೆ ಕಾದಿದೆಯಾ ಸಂಕಷ್ಟ?

ಚಿನ್ನದ ಬೆಲೆ ಸ್ಥಿರ: ಖರೀದಿಗೆ ಇದೇ ಸುವರ್ಣಾವಕಾಶವೇ?

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಪ್ರಾಪ್ಶೇರ್ ಸೆಲೆಸ್ಟಿಯಾ ಐಪಿಒ: ಹೂಡಿಕೆಗೆ ಇಂದು ಕೊನೆಯ ಅವಕಾಶ!



Click it and Unblock the Notifications