ಬೆಂಗಳೂರು, ಏಪಿರ್ಲ್ 4: ದೇಶದ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ತನ್ನ ಗ್ರಾಹಕರಿಗೆ ವಿಶಿಷ್ಟ ಶಾಪಿಂಗ್ ಕಾರ್ನೀವಲ್‌ನ ಮೂರನೇ ಆವೃತ್ತಿಯನ್ನು ಘೋಷಿಸಿದೆ. 'ಯೋನೊ ಸೂಪರ್ ಸೇವಿಂಗ್ ಡೇಸ್' ಏಪ್ರಿಲ್ 4ರಿಂದ ಆರಂಭವಾಗಿದೆ.
ಏಪ್ರಿಲ್ 4 ರಿಂದ ಪ್ರಾರಂಭವಾಗಿ ನಾಲ್ಕು ದಿನಗಳ ಮಟ್ಟಿಗೆ ಈ ಶಾಪಿಂಗ್ ಕೊಡುಗೆ ಲಾಭ ಪಡೆಯಬಹುದು ಎಸ್‌ಬಿಐನ ಯೋನೊ ಬಳಸಿ ವಿಶೇಷ ಶ್ರೇಣಿಯ ರಿಯಾಯಿತಿ ಮತ್ತು ಕ್ಯಾಶ್‌ಬ್ಯಾಕ್ ಗಳಿಸಬಹುದು ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.
"ಸತತ 3 ನೇ ತಿಂಗಳು ಯೋನೊ ಸೂಪರ್ ಸೇವಿಂಗ್ ಡೇಸ್ ಸೌಲಭ್ಯ ಬಳಸಬಹುದಾಗಿದ್ದು, ಬಳಕೆದಾರರು ಮತ್ತು ವ್ಯಾಪಾರಿ ಪಾಲುದಾರರಿಂದ ಉತ್ತಮ ಪ್ರತಿಕ್ರಿಯೆ ಬಂದಿದೆ. ಮಾರ್ಚ್ 4 ರಿಂದ 7 ರವರೆಗೆ ನಡೆದ ಉಳಿತಾಯ ಕೊಡುಗೆಯ 2ನೇ ಆವೃತ್ತಿಯ ವಹಿವಾಟಿನಲ್ಲಿ ಗಮನಾರ್ಹ ಏರಿಕೆ ಕಂಡುಬಂದಿದೆ'' ಎಸ್ಬಿಐಯ ಪ್ರಕಟಣೆ ತಿಳಿಸಿದೆ.

ಏಪ್ರಿಲ್ 4 ಮತ್ತು ಏಪ್ರಿಲ್ 7, 2021 ರ ನಡುವೆ ಮೂರನೇ ಆವೃತ್ತಿಯಲ್ಲಿ ಟ್ರಾವೆಲ್, ಆತಿಥ್ಯ, ಆರೋಗ್ಯ ಮತ್ತು ಆನ್‌ಲೈನ್ ಶಾಪಿಂಗ್ ಸೇರಿದಂತೆ ಪ್ರಮುಖ ವಿಭಾಗಗಳಲ್ಲಿ ಅತ್ಯುತ್ತಮವಾದ ಕೊಡುಗೆಗಳನ್ನು ಪಡೆದುಕೊಳ್ಳಬಹುದಾಗಿದೆ.
ಈ ಶಾಪಿಂಗ್ ಉತ್ಸವದಲ್ಲಿ ತನ್ನ 34.5 ಮಿಲಿಯನ್ ಬಳಕೆದಾರರಿಗೆ ಅಂತಿಮ ಶಾಪಿಂಗ್ ಆನಂದವನ್ನು ನೀಡಲು, ಎಸ್‌ಬಿಐ, ಅಮೆಜಾನ್, ಅಪೊಲೊ 24/7, ಈಸ್‌ಮೈಟ್ರಿಪ್, ಓಯೋ ಮತ್ತು @ಹೋಮ್ ಸೇರಿದಂತೆ ಮುಂತಾದ ಸಂಸ್ಥೆಗಲ ಜೊತೆಗೆ ಯೋನೊ ಪಾಲುದಾರಿಕೆ ಪಡೆದುಕೊಂಡಿದೆ.
ಏಪ್ರಿಲ್ 2021 ರ ಯೋನೊ ಸೂಪರ್ ಸೇವಿಂಗ್ ಡೇಸ್‌ನಲ್ಲಿ, ಗ್ರಾಹಕರು ಹೋಟೆಲ್ ಬುಕಿಂಗ್, ಫ್ಲೈಟ್ ಬುಕಿಂಗ್, ಹೆಲ್ತ್ ಕ್ಯಾಟಗರಿ, ಅಮೆಜಾನ್‌ನಲ್ಲಿ ಆಯ್ದ ವಿಭಾಗಗಳಲ್ಲಿ ಹೆಚ್ಚುವರಿ 10% ಅನಿಯಮಿತ ಕ್ಯಾಶ್‌ಬ್ಯಾಕ್ ಹಾಗೂ ಶೇ 50 ರಿಯಾಯಿತಿ ಪಡೆಯಬಹುದು ಎಂದು ಎಸ್ಬಿಐ ತಿಳಿಸಿದೆ.
More From GoodReturns

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಓಂ ಪವರ್ ಟ್ರಾನ್ಸ್ಮಿಷನ್ ಐಪಿಒ: ಹೂಡಿಕೆದಾರರ ಪಾಲಿಗೆ ಲಾಭದಾಯಕವೇ?

ಚಿನ್ನದ ಬೆಲೆ ಇಂದು ಏರಿಕೆ? ಖರೀದಿಸುವ ಮುನ್ನ ಇದನ್ನು ನೋಡಿ



Click it and Unblock the Notifications